ETV Bharat / state

2ಎ ಮೀಸಲಾತಿ ಹೋರಾಟ: ಕೂಡಲಸಂಗಮ ಸ್ವಾಮೀಜಿಯಿಂದ ಸರ್ಕಾರಕ್ಕೆ ಎರಡು ವಾರಗಳ ಗಡುವು - ​ ETV Bharat Karnataka

2ಎ ಮೀಸಲಾತಿ ಆದೇಶದ ಪತ್ರ ಸಿಗೋವರೆಗೂ ಹೋರಾಟ ಮುಂದುವರಿಯುತ್ತದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಸಂದೇಶ ರವಾನಿಸಿದ್ದಾರೆ.

2ಎ ಮೀಸಲಾತಿ ಹೋರಾಟ
2ಎ ಮೀಸಲಾತಿ ಹೋರಾಟ
author img

By ETV Bharat Karnataka Team

Published : Dec 13, 2023, 5:21 PM IST

ಬೆಳಗಾವಿಯಲ್ಲಿ 2ಎ ಮೀಸಲಾತಿ ಹೋರಾಟ

ಬೆಳಗಾವಿ : ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮಾಜಿ ವೃತ್ತದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ವಾರ ಕಾಲಾವಕಾಶ ಕೇಳಿದ್ದು, ಅಲ್ಲಿಯವರೆಗೂ ಕಾಯೋಣ ಎಂದು ಸ್ವಾಮೀಜಿ ಹೇಳಿದರು.

ಪ್ರತಿಭಟನೆ ಆರಂಭದಲ್ಲಿ ಜೆಸಿಬಿ ಮೇಲೆ ನಿಂತು ರಾಣಿ ಚನ್ನಮ್ಮಾಜಿ ಪ್ರತಿಮೆಗೆ ಹೋರಾಟಗಾರರು ಪುಷ್ಪವೃಷ್ಟಿ ಮಾಡಿದರು. ಪಕ್ಷಾತೀತವಾಗಿ ಭಾಗಿಯಾಗಿದ ಸಚಿವರಾದ ಶಿವಾನಂದ ಪಾಟೀಲ, ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ವಿಜಯಾನಂದ ಕಾಶಪ್ಪನವರ, ವಿನಯ್ ಕುಲಕರ್ಣಿ, ಅಶೋಕ ಮನಗೂಳಿ, ಮಾಜಿ ಶಾಸಕ ಹೆಚ್.ಎಂ ಶಿವಶಂಕರಪ್ಪ, ಮಾಜಿ ಸಚಿವ ಎ.ಬಿ ಪಾಟೀಲ, ಶಶಿಕಾಂತ ನಾಯಿಕ, ಮುಖಂಡರಾದ ಆರ್.ಕೆ.ಪಾಟೀಲ, ರೋಹಿಣಿ ಪಾಟೀಲ ಸೇರಿದಂತೆ ಮತ್ತಿತರರು ಸಮುದಾಯದ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಆರಂಭದಲ್ಲಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಯಾವುದೇ ಮುಖ್ಯಮಂತ್ರಿ ಇರಲಿ, ಸರ್ಕಾರ ಇರಲಿ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಮ್ಮ ಜೊತೆ ಸಿಎಂ ಎಷ್ಟೇ ಚನ್ನಾಗಿರಬಹುದು. 12 ಶಾಸಕರು ಗೆದ್ದಿದ್ದಾರೆ. 2ಡಿ ಮೀಸಲಾತಿ ತೆಗೆದುಕೊಂಡು, ಕೂಡಲಸಂಗಮದಲ್ಲಿ ಬಂಗಾರದ ಮಠ ಕಟ್ಟಿಕೊಂಡು ಆರಾಮವಾಗಿ ಉಳಿಯಬಹುದಿತ್ತು. ಉಳಿದ ಸ್ವಾಮೀಜಿಗಳಂತೆ ಶೋಷಣೆ ಮಾಡಿಕೊಂಡು ಆರಾಮವಾಗಿ ಇರಬಹುದಿತ್ತು. ಆದರೆ ನಾನು ಸುಮ್ಮನೆ ಕುಳಿತಿಲ್ಲ. 2ಎ ಮೀಸಲಾತಿ ಆದೇಶದ ಪತ್ರ ಸಿಗೋವರೆಗೂ ಹೋರಾಟ ಮುಂದುವರಿಯುತ್ತದೆ.

ಮಂಗಳವಾರ ಮುಖ್ಯಮಂತ್ರಿಗಳು ನಡೆಸಿದ ಸಭೆಯಲ್ಲಿ ಈಗ ಸರ್ಕಾರ ಬಂದಿದೆ. ಅಧಿವೇಶನ ಮುಗಿದ ಬಳಿಕ ಬೆಂಗಳೂರಿಗೆ ಹೋಗಿ ಅಡ್ವೋಕೇಟ್ ಜನರಲ್ ಜೊತೆಗೆ ಚರ್ಚಿಸಿ ನಿಮ್ಮನ್ನು ಕರೆಸಿಕೊಂಡು ಮುಂದಿನ‌ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಶಾಂತವಾಗಿರಿ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ‌. ಅಲ್ಲಿಯವರೆಗೂ ಕಾಯೋಣ. ಕಳೆದ ಮೂರು ವರ್ಷಗಳಿಂದ ತಾವೆಲ್ಲರೂ ಹೋರಾಟಕ್ಕೆ ಸಹಕಾರ ಕೊಟ್ಟಿದ್ದಿರಿ. ಮುಂದೆಯೂ ಇದೇ ರೀತಿ ಸಹಕಾರ ನೀಡುವಂತೆ ಕೋರಿದರು.

ಎಲ್ಲರೂ ಕೂಡಿ ಸರ್ಕಾರದ ಮನವಲಿಸೋಣ : ಸಚಿವ ಶಿವಾನಂದ ಪಾಟೀಲ ಮಾತನಾಡಿ, ಹಿಂದಿನ ಸರ್ಕಾರದ ನಿರ್ಣಯವನ್ನು ಪುನರ್ ಪರಿಶೀಲಿಸುವಂತೆ ಸಮಾಜದಿಂದ ಒತ್ತಡ ಕೇಳಿ ಬಂದಿದೆ. ಹಾಗಾಗಿ, ‌ಪಂಚಮಸಾಲಿ‌ ಸಮಾಜಕ್ಕೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ಆದಷ್ಟು ತೀವ್ರವಾಗಿ ನಿರ್ಣಯ ತೆಗೆದುಕೊಳ್ಳುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಹಾಗಾಗಿ ಅಲ್ಲಿವರೆಗೂ ಸ್ವಾಮೀಜಿ ಮತ್ತು ಸಮಾಜದ ಬಾಂಧವರು ಕಾಲಾವಕಾಶ ನೀಡಬೇಕು. ಎಲ್ಲರೂ ಕೂಡಿಕೊಂಡು ಸರ್ಕಾರದ ಮನವೊಲಿಸುವ ಕೆಲಸ ಮಾಡೋಣ ಎಂದರು.

ನಾವು ಯಾರ ಪಾಲನ್ನೂ ಕೇಳುತ್ತಿಲ್ಲ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಪಂಚಮಸಾಲಿ ಜಗದ್ಗುರುಗಳು ಕಳೆದ ಮೂರು ವರ್ಷಗಳಿಂದ ರಾತ್ರಿ ಹಗಲು ಎನ್ನದೇ ಅವಿರತವಾಗಿ ಹೋರಾಡುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಗಲು ಕೂಡ ಸುಧೀರ್ಘ ಹೋರಾಟ ನಡೆದಿದೆ. ಏನನ್ನಾದರೂ ಪಡೆಯಬೇಕಾದರೆ ನಾವು ಹೋರಾಟ ಮಾಡಿಯೇ ಪಡೆಯಬೇಕಾಗಿದೆ. ಹೋರಾಟ ನಮ್ಮ ರಕ್ತದಲ್ಲೇ ಬಂದಿದೆ. ನಾವು ಪಂಚಮಸಾಲಿ‌ ಮಂತ್ರಿಗಳು ಹಾಗೂ ಶಾಸಕರು ಹಲವು ಬಾರಿ ಸಿಎಂ ಭೇಟಿಯಾಗಿದ್ದೇವೆ. ನಿನ್ನೆ ಕೂಡ ಭೇಟಿಯಾಗಿ ಮಾತನಾಡಿದ್ದೇವೆ‌. ಮುಂದಿನ ವಾರದೊಳಗಾಗಿ ಹಿಂದುಳಿದ ವರ್ಗಗಳ ಆಯೋಗದ ಜತೆ ಚರ್ಚಿಸಿ, ಪಂಚಮಸಾಲಿ ಪ್ರಮುಖರ ಸಭೆ ಕರೆಯುವುದಾಗಿ ಸಿಎಂ ತಿಳಿಸಿದ್ದಾರೆ.

ನಾವು ಯಾರ ಪಾಲನ್ನೂ ಕೇಳುತ್ತಿಲ್ಲ. ಬೇರೆಯವರಿಗೆ ಕೊಡಲು ನಮ್ಮ ಅಭ್ಯಂತರವಿಲ್ಲ. ನಮಗೆ ನ್ಯಾಯಯುತವಾಗಿ ಸಿಗಬೇಕಾದದ್ದನ್ನು ಮಾತ್ರ ಕೇಳುತ್ತಿದ್ದೇವೆ. ನಾವು ನ್ಯಾಯ ಸಿಗುವವರೆಗೂ ಶಾಂತಿಯುತವಾಗಿ ಹೋರಾಟ ಮಾಡೋಣ. ಸಮಾಜದ ಮಗಳಾಗಿ ನಾನು ಹೋರಾಟದಲ್ಲಿ‌ ಹಿಂದಿನಿಂದಲೂ ಭಾಗವಹಿಸುತ್ತಾ ಬಂದಿದ್ದೇನೆ. ಮುಂದೆಯೂ ಹೋರಾಟದಲ್ಲಿ ಇರುತ್ತೇನೆ. ನಮಗೆ ಖಂಡಿತ ಜಯ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು.

ಲೋಕಸಭೆ ಚುನಾವಣೆಯೊಳಗೆ ಮೀಸಲಾತಿ‌ ಸಿಗದಿದ್ದರೆ ಕ್ರಾಂತಿ : ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಹತ್ತಾರು ವರ್ಷಗಳಿಂದ ನಮ್ಮ ಸಮಾಜದ ಹಿರಿಯರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಸ್ವಾಮೀಜಿ ಅವರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ, ಮಠ ಬಿಟ್ಟು ಹೋರಾಟ ಮಾಡಿದ್ದಾರೆ. ಸಮಾಜಕ್ಕೂ ಸಹನಾ ಶಕ್ತಿ ಇದೆ.‌ ನಮ್ಮದೇ ಸರ್ಕಾರ ಇದ್ದರೂ ಸದನದ ಬಾವಿಗಿಳಿದು ಹೋರಾಟ ಮಾಡಿದ್ದೇನೆ. ನೀವು ಯಾವುದಾದರೂ ವರ್ಗ ಕೊಡಿ, ನಮಗೆ ಮೀಸಲಾತಿ ಬೇಕಷ್ಟೆ. ನಮ್ಮ ಪಕ್ಷದಲ್ಲಿಯೇ ನಮ್ಮ ವಿರೋಧಿಗಳಿದ್ದಾರೆ. ಅವರಿಂದ ಏನೂ ಮಾಡಲು ಸಾಧ್ಯವಿಲ್ಲ. ಈ ಅಧಿವೇಶನ ಮುಗಿದ ತಕ್ಷಣ ಬೆಂಗಳೂರಿಗೆ ಹೋಗಿ ಹಿಂದುಳಿದ ವರ್ಗಗಳ ಆಯುಕ್ತರು, ಸರ್ಕಾರದ ವಕೀಲರು, ಸಂಬಂಧಿಸಿದ ಇಲಾಖೆಯವರಿಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಇಷ್ಟು ದಿನ ಕಾಯ್ದಿದ್ದೇವೆ. ಇನ್ನೊಂದು ವಾರ ಕಾಯ್ದು ನೋಡೊಣ ಎಂದರು.

ಸರ್ಕಾರದ ವಿರುದ್ಧ ಮಾತನಾಡುವ ಶಕ್ತಿ ಕಾಂಗ್ರೆಸ್ ಶಾಸಕರು,‌ ಸಚಿವರಿಗೆ ಬರಲಿ ಏನೂ ಆಗುವುದಿಲ್ಲ, ಹೆದರಬೇಡಿ. ಯಾರೇ ಮಾಡಿಕೊಂಡು ಬಂದರೂ ನಮ್ಮದೇನಿಲ್ಲ. ಅವರು ಮಾಡಿಕೊಂಡು ಬಂದರೆ ಸದಾಕಾಲ ಅವರಿಗೆ ಆಶೀರ್ವಾದ ಮಾಡಬೇಕು. ನಮ್ಮ ಪಕ್ಷದವರ ನನ್ನನ್ನು ಏನೂ ಮಾಡುವುದಿಲ್ಲ ಎಂಬುದು ನನಗೆ ಗೊತ್ತು. ನಾನಂತೂ ಶಾಸಕನಾಗಿರುವೆ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಲೋಕಸಭೆ ಚುನಾವಣೆಯೊಳಗೆ ಮೀಸಲಾತಿ ಸಿಗದಿದ್ದರೆ ಮತ್ತೆ ಚಾಮರಾಜನಗರದಿಂದ ಬೀದರ್​ ವರಗೆ 20 ಲಕ್ಷ ಜನರನ್ನು ಸೇರಿಸಿ ಹೋರಾಟ ಮಾಡೋಣ ಎಂದು ಎಚ್ಚರಿಕೆ ಕೊಟ್ಟರು.

ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ : ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. 2ಡಿ ಬಗ್ಗೆ ಕಾನೂನಿನಲ್ಲಿ ತೊಡಕಿದೆ. ಹಾಗಾಗಿ ಅದನ್ನು ಹಿಂಪಡೆಯುವವರೆಗೂ ಏನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಮಾಡು ಇಲ್ಲವೇ ಮಡಿ, ಮೀಸಲಾತಿ ಪಡಿ, ಇಲ್ಲದಿದ್ದರೆ ಮಡಿ ಎಂದು ಘೋಷಿಸಿದರು.

ಇದನ್ನೂ ಓದಿ : 2ಎ ಮೀಸಲಾತಿ ವಿಚಾರ: ಸಿಎಂ ನಡೆಗೆ ಜಯ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.