ETV Bharat / state

ಕೃಷ್ಣಾ ನದಿ ಒಳ ಹರಿವು 36,000 ಕ್ಯೂಸೆಕ್‌ಗಿಂತ ಹೆಚ್ಚು..

ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಿನ್ನೆಲೆ ರಾಜಾಪೂರ ಬ್ಯಾರೆಜ್‌ನಿಂದ 34,002 ಕ್ಯೂಸೆಕ್ ನೀರು, ದೂಧಗಂಗಾ ನದಿಯಿಂದ 2,112 ಕ್ಯೂಸೆಕ್ ನೀರು ಹೀಗೆ ಒಟ್ಟು 36,000 ಕ್ಯೂಸೆಕ್​​ಕ್ಕೂ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ..

krishna river
ಕೃಷ್ಣಾ ನದಿ
author img

By

Published : Sep 22, 2020, 9:08 PM IST

ಚಿಕ್ಕೋಡಿ : ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳ ಹರಿವಿನಲ್ಲಿ ಯಥಾಸ್ಥಿತಿ ಇದ್ದು, 36,000 ಅಧಿಕ ಕ್ಯೂಸೆಕ್‌ಗಿಂತ ಹೆಚ್ಚು ಕೃಷ್ಣಾ ನದಿ ಒಳ ಹರಿವು ಇದೆ ಎಂದು ಚಿಕ್ಕೋಡಿ ತಹಶೀಲ್ದಾರ್​​ ಶುಭಾಷ್ ಸಂಪಗಾಂವಿ ಈಟಿವಿ ಭಾರತ್​ಗೆ ಮಾಹಿತಿ ನೀಡಿದ್ದಾರೆ.

ಕೃಷ್ಣಾ ನದಿ

ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ 34,002 ಕ್ಯೂಸೆಕ್ ನೀರು, ದೂಧಗಂಗಾ ನದಿಯಿಂದ 2,112 ಕ್ಯೂಸೆಕ್ ನೀರು ಹೀಗೆ ಒಟ್ಟು 36,000 ಕ್ಯೂಸೆಕ್​ಗೂ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ. ಮಹಾರಾಷ್ಟ್ರದ ಕೊಯ್ನಾ- 00 ಮಿ.ಮೀ, ನವಜಾ - 13 ಮಿ.ಮೀ, ಮಹಾಬಲೇಶ್ವರ- 02 ಮಿ.ಮೀ, ವಾರಣಾ-00 ಮಿ.ಮೀ, ಕಾಳಮ್ಮವಾಡಿ-11 ಮಿ.ಮೀ, ರಾಧಾನಗರಿ-09 ಮಿ.ಮೀ, ಪಾಟಗಾಂವ - 50 ಮಿ.ಮೀ ಮಳೆಯಾಗಿದ್ದು ವರದಿಯಾಗಿದೆ.

ಸದ್ಯ ಕೊಯ್ನಾ ಜಲಾಶಯ 100%, ವಾರಣಾ ಜಲಾಶಯ 100%, ರಾಧಾನಗರಿ ಜಲಾಶಯ 99%, ಕಣೇರ ಜಲಾಶಯ 98%, ಧೂಮ ಜಲಾಶಯ 98%, ಪಾಟಗಾಂವ 100% ಧೂದ್​​ಗಂಗಾ 100%, ತುಂಬಿದೆ. ಹಿಪ್ಪರಗಿ ಬ್ಯಾರೇಜ್‌ನಿಂದ 31,000 ಹಾಗೂ ಆಲಮಟ್ಟಿ ಜಲಾಶಯದಿಂದ 37,000 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.