ಚಿಕ್ಕೋಡಿ(ಬೆಳಗಾವಿ): ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿ ಐದು ಅಡಿ ಹಾಗೂ ದೂಧಗಂಗಾ ನದಿ ನಾಲ್ಕು ಅಡಿವರೆಗೆ ಏರಿಕೆಯಾಗಿದೆ.
ಕೃಷ್ಣಾ, ವೇದಗಂಗಾ ಮತ್ತು ದೂಧ್ಗಂಗಾ ನದಿಗಳು ಮೈದುಂಬಿ ಹರಿಯುತ್ತಿವೆ. 1,80,000ಕ್ಕೂ ಅಧಿಕ ಕ್ಯೂಸೆಕ್‌ಗಿಂತ ಹೆಚ್ಚು ನೀರು ಕೃಷ್ಣಾ ನದಿಗೆ ಒಳ ಹರಿವು ಇದೆ ಎಂದು ಚಿಕ್ಕೋಡಿ ತಹಶೀಲ್ದಾರ್ ಶುಭಾಸ್ ಸಂಪಗಾಂವಿ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ 1,52,125 ಕ್ಯೂಸೆಕ್ ನೀರು, ದೂಧ್ಗಂಗಾ ನದಿಯಿಂದ 29,568 ಕ್ಯೂಸೆಕ್ ನೀರು, ಹೀಗೆ ಒಟ್ಟು 1,80,000 ಕ್ಯೂಸೆಕ್ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ. ಕೊಯ್ನಾ ಜಲಾಶಯದಿಂದ 56,000 ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ಇಂದು ರಾತ್ರಿ ಇಲ್ಲವೇ ನಾಳೆ ಬೆಳಗ್ಗೆವರೆಗೆ ಕೊಯ್ನಾ ಜಲಾಶಯದ ನೀರು ಕರ್ನಾಟಕವನ್ನು ತಲುಪುವ ಸಾಧ್ಯತೆಯಿದೆ.
ಮಹಾರಾಷ್ಟ್ರದ ಕೊಯ್ನಾದಲ್ಲಿ 145 ಮಿ.ಮೀ, ನವಜಾ - 144 ಮಿ.ಮೀ, ಮಹಾಬಲೇಶ್ವರ - 88 ಮಿ.ಮೀ, ವಾರಣಾ - 47 ಮಿ.ಮೀ, ಕಾಳಮ್ಮವಾಡಿ - 56 ಮಿ.ಮೀ, ರಾಧಾನಗರಿ - 65 ಮಿ.ಮೀ, ಪಾಟಗಾಂವ್ - 105 ಮಿ.ಮೀ ಮಳೆಯಾಗಿದ್ದು ವರದಿಯಾಗಿದೆ.
ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಕೊಯ್ನಾ ಸುತ್ತಮುತ್ತ ಹೆಚ್ಚು ಮಳೆಯಾಗಿರುವುದು ವರದಿಯಾಗಿದೆ. ಚಿಕ್ಕೋಡಿಯಲ್ಲಿ 5.2 ಮಿ.ಮೀ, ಅಂಕಲಿ - 8.2 ಮಿ.ಮೀ, ನಾಗರಮುನ್ನೋಳಿ 8.2 ಮಿ.ಮೀ ಹಾಗೂ ಸದಲಗಾ - 7.0 ಮಿ.ಮೀ ಮಳೆಯಾಗಿರುವ ವರದಿಯಾಗಿದೆ.
ಸದ್ಯ ಕೊಯ್ನಾ ಜಲಾಶಯದಲ್ಲಿ ಶೇ.88, ವಾರಣಾ ಜಲಾಶಯ ಶೇ.92, ರಾಧಾನಗರಿ ಜಲಾಶಯ ಶೇ.99, ಕಣೇರ ಜಲಾಶಯ ಶೇ.92, ಧೂಮ ಜಲಾಶಯ ಶೇ.88, ಪಾಟಗಾಂವ್ ಶೇ.100, ಧೂದ್ಗಂಗಾ ಶೇ.93, ತುಂಬಿದೆ. ಹಿಪ್ಪರಗಿ ಬ್ಯಾರೇಜ್‌ನಿಂದ 1,85,000 ಹಾಗೂ ಆಲಮಟ್ಟಿ ಜಲಾಶಯದಿಂದ 2,50,000 ಕ್ಯೂಸೆಕ್ ನೀರನ್ನು ಹೊರಗಡೆ ಬಿಡಲಾಗುತ್ತಿದೆ.