ETV Bharat / state

ಏ.30 ರವರೆಗೆ ಕೊಲ್ಹಾಪುರ ಮಹಾಲಕ್ಷ್ಮೀ ದರ್ಶನ ಬಂದ್ - kollapur mahalakshmi temple close

ಮಹಾರಾಷ್ಟ್ರದಲ್ಲಿ ಕೊರೊನಾ 2ನೇ ಅಲೆ ರಭಸ ಜೋರಾಗಿದ್ದು ಶಕ್ತಿ ದೇವತೆಗಳಲ್ಲಿ ಒಂದಾದ ಕೊಲ್ಹಾಪುರ ಮಹಾಲಕ್ಷ್ಮೀ ದೇವಿಯ ದರ್ಶನವನ್ನು ಏಪ್ರಿಲ್ 30 ರವರಗೆ ಸ್ಥಗಿತಗೊಳಿಸಲಾಗಿದೆ.

kollapur mahalakshmi temple to be close till 30th
ಕೊಲ್ಹಾಪುರ ಮಹಾಲಕ್ಷ್ಮೀ ದರ್ಶನ ಬಂದ್
author img

By

Published : Apr 7, 2021, 1:17 PM IST

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಕೊಲ್ಹಾಪುರ ಮಹಾಲಕ್ಷ್ಮೀ ದರ್ಶನವನ್ನು ಏಪ್ರಿಲ್ 30 ರವರೆಗೆ ಬಂದ್ ಮಾಡಲಾಗಿದೆ ಎಂದು ದೇವಸ್ಥಾನ ಕಮಿಟಿಯ ಅಧ್ಯಕ್ಷ ಮಹೇಶ ಜಾಧವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಲ್ಹಾಪುರ ಮಹಾಲಕ್ಷ್ಮೀ ದರ್ಶನ ಬಂದ್

ಈ ಹಿಂದೆ ದಿನನಿತ್ಯ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ದರ್ಶನಕ್ಕೆ ಅನುಮತಿ ನೀಡಲಾಗಿತ್ತು. ನಂತರದ ಫೆ. 25 ರಿಂದ ಬೆಳಗ್ಗೆ 7 ರಿಂದ ಮಧಾಹ್ನ 12 ಗಂಟೆಯವರೆಗೆ ಮತ್ತು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಭಕ್ತರಿಗೆ ದರ್ಶನ ಪಡೆಯಲು ಅನುಮತಿ ನೀಡಲಾಗಿತ್ತು. ಆದರೆ, ಮತ್ತೆ ಈಗ ಸರಕಾರದ ಆದೇಶದ ಮೇರೆಗೆ ಏ.30 ರವರೆಗೆ ದರ್ಶನ ಬಂದ್ ಮಾಡಲಾಗಿದೆ ಎಂದು ಆಡಳಿತ ದೇವಾಲಯದ ಮಂಡಳಿಯವರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.