ETV Bharat / state

ವಿದ್ಯುತ್ ಇಲಾಖೆ ಖಾಸಗೀಕರಣಕ್ಕೆ ವಿರೋಧ: ಅಥಣಿಯಲ್ಲಿ ಪ್ರತಿಭಟನೆ - ವಿದ್ಯುತ್ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

ವಿದ್ಯುತ್ ಖಾಸಗೀಕರಣಕ್ಕೆ ಮುಂದಾಗುತ್ತಿರುವ ಕೇಂದ್ರ ಸರ್ಕಾರದ ನಿಲುವು ಖಂಡಿಸಿ, ಅಥಣಿ ವಿದ್ಯುತ್ ಪ್ರಸರಣ ನಿಯಮಿತ ನೌಕರರ ಸಂಘದಿಂದ ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಯ್ತು.

K.E.B. employees protest in Athani
ಪ್ರತಿಭಟನೆ
author img

By

Published : Oct 5, 2020, 5:04 PM IST

ಅಥಣಿ: ಕೇಂದ್ರ ಸರ್ಕಾರ ವಿದ್ಯುತ್ ಇಲಾಖೆಯ ಖಾಸಗೀಕರಣಕ್ಕೆ ಮುಂದಾಗುತ್ತಿರುವುದನ್ನು ವಿರೋಧಿಸಿ ಅಥಣಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘ ಪ್ರತಿಭಟನೆ ನಡೆಸಿತು.

ವಿದ್ಯುತ್ ಇಲಾಖೆಯ ಖಾಸಗೀಕರಣಕ್ಕೆ ಮುಂದಾಗುತ್ತಿರುವುದನ್ನು ವಿರೋಧಿಸಿ ಅಥಣಿಯಲ್ಲಿ ಪ್ರತಿಭಟನೆ

ಪಟ್ಟಣದ ವಿದ್ಯುತ್ ಸರಬರಾಜು ಕೇಂದ್ರದ ಮುಂದೆ ಕೈಗೆ ಕಪ್ಪು ಬಣ್ಣದ ಬಟ್ಟೆ ಕಟ್ಟಿಕೊಂಡು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು. ಇದೇ ವೇಳೆ, ಅಥಣಿ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ, ಎನ್, ಪಾಟೀಲ್ ಮಾತನಾಡಿ, ಇಂಜಿನಿಯರ್ ಅಸೋಸಿಯೇಶನ್ ಬೆಂಗಳೂರು ಹಾಗೂ ಅಕೌಂಟೆಂಟ್ ಅಸೋಸಿಯೇಶನ್ ಸಂಘ ಬೆಂಗಳೂರು ಮತ್ತು ಎಸಿಎಸಿಐ ಅಸೋಸಿಯೇಶನ್ ಹಾಗೂ ಡಿಪ್ಲೋಮಾ ಅಸೋಸಿಯೇಶನ್ ಸಂಘ ಬೆಂಗಳೂರು ಈ ಎಲ್ಲ ಒಕ್ಕೂಟಗಳಿಂದ ಇವತ್ತು ಸರ್ಕಾರ ವಿದ್ಯುತ್ ಖಾಸಗೀಕರಣಕ್ಕೆ ಮುಂದಾಗಿರುವುದನ್ನು ಖಂಡಿಸಿ ಒಂದು ದಿನದ ಮಟ್ಟಿಗೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ರು.

ಕೇಂದ್ರ ಸರ್ಕಾರ ವಿದ್ಯುತ್ ಖಾಸಗೀಕರಣಕ್ಕೆ ಹಾಗೂ 2003 ಕಾಯ್ದೆ ತಿದ್ದುಪಡಿ ಮುಂದಾಗಿದ್ದು, ಇದರಿಂದಾಗಿ ವಿದ್ಯುತ್ ಇಲಾಖೆಯ ನೌಕರರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮತ್ತು ಗ್ರಾಹಕರಿಗೆ , ರೈತರಿಗೆ ಹಾಗೂ ಎಲ್ಲ ನೌಕರರಿಗೆ ಈ ವಿದ್ಯುತ್ ಖಾಸಗೀಕರಣ ಮಾರಕವಾಗುವುದರಿಂದ ಖಾಸಗೀಕರಣ ಬೇಡವೆಂದು ತೀವ್ರ ವಿರೋಧ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.