ಬೆಳಗಾವಿ: ನಾಳೆ ನಡೆಯಲಿರುವ ಕರ್ನಾಟಕ ಬಂದ್ ಭಾರತೀಯ ಜನತಾ ಪಾರ್ಟಿಯ ರಾಜ್ಯ ಕಾರ್ಯಕಾರಿಣಿ ಸಭೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ನಗರದ ಚೆನ್ನಮ್ಮ ವೃತ್ತದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರು ಕರ್ನಾಟಕ ಬಂದ್ ಪರವಾಗಿ ಇಲ್ಲ. ಸಾಕಷ್ಟು ಜನರು ಬಂದ್ ವಿರೋಧಿಸಿದ್ದಾರೆ. ಈಗಾಗಲೇ ಕೋವಿಡ್ ಕಾರಣದಿಂದಾಗಿ ವ್ಯಾಪಾರ-ವಹಿವಾಟಿಗೆ ಸಾಕಷ್ಟು ತೊಂದರೆ ಆಗಿದೆ. ಇದನ್ನು ಮನಗಂಡು ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮಾರ್ಗವನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದರು.
ಈ ಸುದ್ದಿಯನ್ನೂ ಓದಿ: ಮರಾಠ ಪ್ರಾಧಿಕಾರ ರದ್ದು ಮಾಡದಿದ್ದರೆ ಯಡಿಯೂರಪ್ಪ ಪತನವಾಗ್ತಾರೆ: ಸಾ.ರಾ ಗೋವಿಂದ್
ಈ ಕುರಿತು ಕೆಲ ಸಂಘಟನೆಗಳು ಪ್ರತಿಭಟನೆ ವಿರೋಧಿಸಿವೆ. ಆದ್ರೂ ಕೆಲ ಕನ್ನಡಪರ ಸಂಘಟನೆಗಳು ಮೊಂಡುತನಕ್ಕೆ ಬಿದ್ದು ಪ್ರತಿಭಟನೆ ಮಾಡುತ್ತಿವೆ. ಆದ್ರೆ ಬಂದ್ ಯಾವುದೇ ಕಾರಣಕ್ಕೂ ಯಶಸ್ವಿ ಆಗೋದಿಲ್ಲ. ಇದಕ್ಕೆ ಸಾರ್ವಜನಿಕರು ಮಹತ್ವ ನಿಡೋದಿಲ್ಲ ಎಂದರು.
ಈ ಸುದ್ದಿಯನ್ನೂ ಓದಿ: ಕುಂದಾನಗರಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಭರ್ಜರಿ ಸಿದ್ಧತೆ
ಇಂದಿನ ಕೋರ್ ಕಮಿಟಿ ಸಭೆ ವಾಡಿಕೆಯಂತೆ ನಡೆಯಲಿದ್ದು, ಈ ಹಿಂದೆ ನಡೆದಿರುವ ಒಟ್ಟು ಚಟುವಟಿಕೆಗಳು, ಸಂಘಟನಾತ್ಮಕ ಹಾಗೂ ಜನಪರ ಯೋಜನೆಗಳ ಕುರಿತು ಚರ್ಚೆಗಳಾಗುತ್ತವೆ. ಇದರ ಜೊತೆಗೆ ಮುಂಬರುವ ದಿನಗಳಲ್ಲಿ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಇದಲ್ಲದೆ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆ ಆಗಿದ್ದು, ಗ್ರಾಪಂ ಚುನಾವಣೆಗಳು ಜನಸಾಮಾನ್ಯರನ್ನು ನಾಯಕನಾಗಿ ರೂಪಿಸುತ್ತವೆ. ಹೀಗಾಗಿ ಕಾರ್ಯಕರ್ತರನ್ನು ನಾಯಕರನ್ನಾಗಿ ಬೆಳೆಸಲು ಕಾರ್ಯತಂತ್ರ ರೂಪಿಸಿ, ಚುನಾವಣೆಯಲ್ಲಿ 100ಕ್ಕೆ 80ರಷ್ಟು ಅಧಿಕಾರಕ್ಕೆ ಬರುವ ಗುರಿ ಇಟ್ಟುಕೊಳ್ಳಾಲಾಗಿದೆ. ಇದರ ಜೊತೆಗೆ ಬೆಳಗಾವಿ, ಮಸ್ಕಿ, ಬಸವ ಕಲ್ಯಾಣ ಉಪಚುನಾವಣೆಗಳ ಅಭ್ಯರ್ಥಿಗಳ ಆಯ್ಕೆ ಕುರಿತಂತೆಯೂ ಚರ್ಚೆಗಳು ನಡೆಯುವ ಸಾಧ್ಯತೆ ಇದೆ ಎಂದರು.