ETV Bharat / state

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಯೂನಿವರ್ಸಿಟಿ ಬ್ಲೂ ಆಯ್ಕೆ ಪಾರದರ್ಶಕವಾಗಿಲ್ಲ; ಮರು ಆಯ್ಕೆಗೆ ಕ್ರೀಡಾಪಟು ಆಗ್ರಹ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಯೂನಿವರ್ಸಿಟಿ ಬ್ಲೂ ಆಯ್ಕೆ ಪ್ರಕ್ರಿಯೆ ಬಗ್ಗೆ ಕ್ರೀಡಾಪಟುವೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Rani Channamma University
Rani Channamma University
author img

By ETV Bharat Karnataka Team

Published : Nov 8, 2023, 3:48 PM IST

Updated : Nov 8, 2023, 9:26 PM IST

ಯೂನಿವರ್ಸಿಟಿ ಬ್ಲೂ ಮರು ಆಯ್ಕೆಗೆ ಆಗ್ರಹ

ಬೆಳಗಾವಿ: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನ ಪುರುಷರ ಕಬಡ್ಡಿ ತಂಡದ ಯೂನಿವರ್ಸಿಟಿ ಬ್ಲೂ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿಲ್ಲ. ತಮಗೆ ಬೇಕಾದ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕ್ರೀಡಾಪಟುವೊಬ್ಬರು ಆರೋಪಿಸಿದ್ದಾರೆ. ಕಬಡ್ಡಿ ಆಯ್ಕೆ ಪ್ರಕ್ರಿಯೆಯನ್ನು ಕಳೆದ ನ.1 ಮತ್ತು 2 ರಂದು ವಿಜಯಪುರದಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ತಮಗೆ ಅನ್ಯಾಯವಾಗಿದೆ ಎಂದು ನೊಂದ ಕ್ರೀಡಾಪಟು ಕಾಂತು ಕೂಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈಟಿವಿ ಭಾರತ ಜೊತೆಗೆ ಮಾತನಾಡಿದ ಅವರು, ''ನಾನು ಚೆನ್ನಾಗಿಯೇ ಆಡಿರುವೆ. ನನ್ನ ಆಟವನ್ನು ಪರಿಗಣಿಸದಯೇ ಅರ್ಹತೆ ಇಲ್ಲದವರನ್ನು ಆಯ್ಕೆ ಮಾಡಿದ್ದಾರೆ. ಕಾರಣ ‌ನೀಡದೇ ನನ್ನನ್ನು ಕೈಬಿಟ್ಟಿದ್ದಾರೆ. ಅಲ್ಲದೆ, ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಂಡು ನನ್ನಂಥ ಅನೇಕ ಬಡ ಪ್ರತಿಭಾನ್ವಿತ ಆಟಗಾರರಿಗೆ ಅನ್ಯಾಯ ಎಸಗಿದ್ದಾರೆ. ಈ ಪ್ರಕ್ರಿಯೆ ರದ್ದುಪಡಿಸಿ, ಬೇರೆ ಆಯ್ಕೆ ಸಮಿತಿ ರಚನೆ ಮಾಡಿ ಮುಂದಿನ ಕಬಡ್ಡಿ ತಂಡದ ಆಯ್ಕೆ ಪ್ರಕ್ರಿಯೆಯನ್ನು ಚಿತ್ರೀಕರಣ ಸಹಿತವಾವಿ ಮತ್ತು ಪಾರದರ್ಶಕವಾಗಿ ನಡೆಸುವಂತೆ ಒತ್ತಾಯಿಸಿದರು.

ವೀಕ್ಷಕ ವರದಿಗಾರ ಸೋಮಶೇಖರ ಭಜಂತ್ರಿ ಮಾತನಾಡಿ, ಆಯ್ಕೆಗಾರರು ಫೋನಿನಲ್ಲಿ ಮಾತಾಡುವುದು, ಚಾಟಿಂಗ್ ಮಾಡುವುದರಲ್ಲೇ ಬ್ಯುಸಿ ಆಗಿದ್ದರು. ಅವರು ಸರಿಯಾಗಿ ಆಟಗಾರರ ಪ್ರದರ್ಶನ ವೀಕ್ಷಿಸದೇ ತಮಗೆ ಬೇಕಾದವರನ್ನು ಆಯ್ಕೆ ಮಾಡಿದ್ದಾರೆ. ಇದರಿಂದ ಉತ್ತರಕರ್ನಾಟಕದ ಅನೇಕ ಪಂದ್ಯಾವಳಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಸುಮಾರು 20 ಕಬಡ್ಡಿ ಆಟಗಾರರಿಗೆ ಯೂನಿವರ್ಸಿಟಿ ಬ್ಲೂ ಆಯ್ಕೆಯಲ್ಲಿ ಅನ್ಯಾಯವಾಗಿದೆ. ಹಾಗಾಗಿ, ಮರು ಆಯ್ಕೆ ಪ್ರಕ್ರಿಯೆ ನಡೆಸುವಂತೆ ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು, ದೈಹಿಕ ನಿರ್ದೇಶಕರಿಗೆ ಮನವಿ ಮಾಡಿದ್ದೇವೆ. ಆದರೆ, ಅವರು ಕೇವಲ ಭರವಸೆ ನೀಡುತ್ತಿದ್ದಾರೆ ಹೊರತು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ನ್ಯಾಯ ಸಿಗೋವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

ಪ್ರೋ. ಜಗದೀಶ ಗಸ್ತಿ ಅವರನ್ನು ಈಟಿವಿ ಭಾರತ ಸಂಪರ್ಕಿಸಿದಾಗ, ಪಾರದರ್ಶಕವಾಗಿ ಆಯ್ಕೆ ಆಗಿಲ್ಲ ಎಂದು ಆಟಗಾರ ಕಾಂತು ಕೂಗೆ ನಮಗೆ ದೂರು ಕೊಟ್ಟಿದ್ದಾರೆ. ಆಯ್ಕೆ ಸಮಿತಿಯಿಂದ ವರದಿ ತರಿಸಿಕೊಂಡು, ಏನಾಗಿದೆ ಎಂಬುದನ್ನು ತಿಳಿದುಕೊಂಡು ವಿಶ್ವವಿದ್ಯಾಲಯದ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಹೊರಟ್ಟಿಗೂ ದೂರು: ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೂ ಈ ಸಂಬಂಧ ಆಟಗಾರ ಕಾಂತು ಕೂಗೆ ದೂರು ಕೊಟ್ಟಿದ್ದಾರೆ. ಹೊರಟ್ಟಿ ಅವರು ವಿಶ್ವವಿದ್ಯಾಲಯದ ಕುಲಸಚಿವರು ಮತ್ತು ಕುಲಪತಿಗಳಿಗೆ ಫೋನ್ ಕರೆ ಮಾಡಿ ಮತ್ತೊಮ್ಮೆ ಆಯ್ಕೆ ಪ್ರಕ್ರಿಯೆ ನಡೆಸುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: ಕಬಡ್ಡಿ ಆಡಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಸಭಾಪತಿ ಹೊರಟ್ಟಿ- ವಿಡಿಯೋ

Last Updated : Nov 8, 2023, 9:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.