ಬೆಳಗಾವಿ : ಚಂದನವನದ ಪ್ರೇಮಕವಿ, ಹೆಸರಾಂತ ಚಿತ್ರಸಾಹಿತಿ ಕೆ. ಕಲ್ಯಾಣ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಕೌಟುಂಬಿಕ ಕಲಹ ಇದೀಗ ಬೆಳಗಾವಿಯ ಮಾಳಮಾರುತಿ ಠಾಣೆ ಮೆಟ್ಟಿಲೇರಿದೆ. ಬೆಳಗಾವಿಯ ಅಶೋಕ ನಗರದಲ್ಲಿ ವಾಸವಾಗಿರುವ ಅಶ್ವಿನಿ ಸೆ. 30ರಂದು ಕಿಡ್ನಾಪ್ ಆಗಿದ್ದಾರೆಂದು ಮಾಳಮಾರುತಿ ಠಾಣೆಯಲ್ಲಿ ಕೆ. ಕಲ್ಯಾಣ ದೂರು ನೀಡಿದ್ದರು.
ಅಶ್ವಿನಿ ಕಾಣೆಯಾಗಿಲ್ಲ. ಪೊಲೀಸರ ಸೂಚನೆ ಮೇರೆಗೆ ಅಶ್ವಿನಿ ಅವರು ಬೆಳಗಾವಿಯ ಮಾಳಮಾರುತಿ ಠಾಣೆಗೆ ಆಗಮಿಸಿದ್ದಾರೆ. ಪತಿಯಾಗಿ ಕೆ. ಕಲ್ಯಾಣ ಅವರು 14 ವರ್ಷಗಳಿಂದ ತಮ್ಮ ಜವಾಬ್ದಾರಿ ನಿಭಾಯಿಸಿಲ್ಲ. ಅಲ್ಲದೇ ಅಶ್ವಿನಿಗೆ ನಿತ್ಯ ಮಾನಸಿಕ ಹಿಂಸೆ ನೀಡುತ್ತಿದ್ದರು. ಇದರಿಂದ ರೋಸಿ ಹೋಗಿ ಜೂನ್ 26 ರಂದು ಬೆಳಗಾವಿಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಜನರನ್ನು ದಾರಿ ತಪ್ಪಿಸಲು ಕೆ. ಕಲ್ಯಾಣ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ ಎಂದಿದ್ದಾರೆ.