ಚಿಕ್ಕೋಡಿ: ಮಗನನ್ನೇ ಕೊಂದು ಕೊಳವೆ ಬಾವಿಗೆ ಎಸೆದ ಪಾಪಿ ತಂದೆಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ರಾಯಭಾಗ ಪೊಲೀಸರು ಗೋಕಾಕ್ ಜೈಲಿಗೆ ಕಳುಹಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರು ಗ್ರಾಮದ ಸಿದ್ದಪ್ಪ ಹಸರೆ ಎಂಬಾತನೇ ಮಗು ಶರತ್ ಹಸರೆಯನ್ನು ಕೊಂದ ಆರೋಪಿಯಾಗಿದ್ದಾನೆ. ಸಿದ್ದಪ್ಪ ತನ್ನ 2 ವರ್ಷದ ಮಗ ಕಾಣೆಯಾಗಿದ್ದಾನೆ ಎಂದು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಬಳಿಕ ಮಗುವಿಗಾಗಿ ಹುಡುಕಾಡಿದಾಗ ಬೋರ್ವೆಲ್ನಲ್ಲಿ ಪತ್ತೆಯಾಗಿತ್ತು. ಶರತ್ನನ್ನು ಆತನ ತಂದೆಯೇ ಕೊಲೆ ಮಾಡಿರುವುದಾಗಿ ಮಗುವಿನ ಅಜ್ಜಿ ಸರಸ್ವತಿ ಗಂಭೀರ ಆರೋಪ ಮಾಡಿದ್ದರು.
ಹೀಗಾಗಿ ಸಿದ್ದಪ್ಪನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಪೊಲೀಸರು ಗೋಕಾಕ್ ಜೈಲಿಗೆ ಅಟ್ಟಿದ್ದಾರೆ.
ಇದನ್ನೂ ಓದಿ: ಡಿಕ್ಕಿ ಸಂಭವಿಸಿ ಹೊತ್ತಿ ಉರಿದ ಬಸ್-ಟ್ರಕ್.. ದುರಂತದಲ್ಲಿ ನಾಲ್ವರ ಸಜೀವ ದಹನ