ETV Bharat / state

ಜೈನ‌ ಮುನಿಗಳ ಹತ್ಯೆ ಕೇಸ್: ಇಬ್ಬರು ಆರೋಪಿಗಳನ್ನ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಕೋರ್ಟ್​​ - ಈಟಿವಿ ಭಾರತ್​ ಕನ್ನಡ ನ್ಯೂಸ್​

ಇಂದಿನಿಂದ ಜುಲೈ 17 ರವರೆಗೆ 7 ದಿನ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಜೈನ‌ ಮುನಿಗಳ ಹತ್ಯೆ ಕೇಸ್
ಜೈನ‌ ಮುನಿಗಳ ಹತ್ಯೆ ಕೇಸ್
author img

By

Published : Jul 11, 2023, 5:55 PM IST

Updated : Jul 11, 2023, 7:08 PM IST

ಹಿರೇಕೋಡಿ ಆಶ್ರಮಯಕ್ಕೆ ನಳೀನ್ ಕುಮಾರ ಕಟೀಲ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಭೇಟಿ

ಬೆಳಗಾವಿ : ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಜೈನಮುನಿ ಕಾಮಕುಮಾರ ನಂದಿ‌ ಮಹಾರಾಜರ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಆರೋಪಿಗಳನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಚಿಕ್ಕೊಡಿಯ ಪ್ರಧಾನ ದಿವಾಣಿ ನ್ಯಾಯಾಲಯದ ನ್ಯಾಯಾಧೀಶರು ಮಹತ್ವದ ಆದೇಶ ಹೊರಡಿಸಿದ್ದಾರೆ. ಮೊದಲು 14 ದಿನ ಪೊಲೀಸ್ ಕಸ್ಟಡಿಗೆ ಆರೋಪಿಗಳನ್ನು ಒಪ್ಪಿಸುವಂತೆ ನ್ಯಾಯಾಲಯಕ್ಕೆ ಚಿಕ್ಕೋಡಿ ಪೊಲೀಸರು ಮನವಿ ಮಾಡಿಕೊಂಡಿದ್ದರು.

ಆದರೆ, ನ್ಯಾಯಾಲಯ 7 ದಿನಗಳ‌ ಕಾಲ ಆರೋಪಿಗಳಾದ ನಾರಾಯಣ ಮಾಳಿ, ಹಸನಸಾಬ್​ ದಲಾಯತ್ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನ್ಯಾಯಾಧೀಶ ಚಿದಾನಂದ ಬಡಿಗೇರ ಆದೇಶ ನೀಡಿದ್ದಾರೆ. ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಇಂದಿನಿಂದ ಜುಲೈ 17 ರವರೆಗೆ 7 ದಿನ ಕಾಲ ಪೊಲೀಸ್ ಕಸ್ಟಡಿಗೆ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿ ಇರಲಿದ್ದು, ಈ ವೇಳೆ, ಜೈನ‌ ಮುನಿಗಳ ಹತ್ಯೆ‌ ಸಂಬಂಧ ಯಾವೆಲ್ಲಾ ವಿಚಾರಗಳು ಹೊರ ಬರುತ್ತೇವೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಹಿರೇಕೋಡಿ ಆಶ್ರಮಯಕ್ಕೆ ಬಿಜೆಪಿ ನಾಯಕರು ಭೇಟಿ : ಇದಕ್ಕೂ ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ನೇತೃತ್ವದಲ್ಲಿ ಹತ್ತಕ್ಕೂ ಹೆಚ್ಚು ಬಿಜೆಪಿ ನಾಯಕರು ಇವತ್ತು ಆಶ್ರಮಕ್ಕೆ ಭೇಟಿ ನೀಡಿ ಜೈನ ಧರ್ಮದ ಹಿರಿಯರಿಗೆ ಸಾಂತ್ವನ ಹೇಳಿದರು. ಕಾಮಕುಮಾರ್ ನಂದಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ, ಅಂತ್ಯಕ್ರಿಯಾಗಿರುವ ಸ್ಥಳಕ್ಕೆ ನಳೀನ್ ಕುಮಾರ್ ಕಟೀಲ್ ಭೇಟಿ ನೀಡಿದರು. ನಂತರ ಹಿರೇಕೋಡಿ ಜೈನ ಸಮಾಜದ ಮುಖಂಡರ ಜೊತೆಗೆ ಸುದೀರ್ಘವಾಗಿ ಚರ್ಚೆ ನಡೆಸಿ, ಹತ್ಯೆ ಬಗ್ಗೆ ಮಾಹಿತಿ ಪಡೆದುಕೊಂಡರು.

ಇದೇ ವೇಳೆ, ಮಾಧ್ಯಮದ ಜೊತೆ ಮಾತನಾಡುತ್ತಾ, ಒಬ್ಬ ಸಂತರ, ಮುನಿಗಳ ಹತ್ಯೆ ನಡೆದಾಗ ಎಲ್ಲಾ ರಾಜಕೀಯ ಪಕ್ಷಗಳ ಮೇಲೆ ಜವಾಬ್ದಾರಿಯಿದೆ. ಇದನ್ನು ನಾವು ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿಲ್ಲ. ಹಾಗಾಗಿ ಆ ಜವಾಬ್ದಾರಿ ಆಧಾರ ಮೂಲಕ ಸಮಾಜದಲ್ಲಿ ಎಲ್ಲರಿ ರಕ್ಷಣೆ ನೀಡುವಂತಹ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಪಾರದರ್ಶಕವಾಗಿ ಜೈನಮುನಿಗಳ ಹತ್ಯೆ ಪ್ರಕರಣ ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕು. ನಮಗೇನು ಪೊಲೀಸ್ ಇಲಾಖೆ ಮೇಲೆ ನಂಬಿಕೆ ಇಲ್ಲ ಅಂತಲ್ಲ. ಪೊಲೀಸ್ ಇಲಾಖೆ ಮೇಲೆ ಅಪಾರ ಗೌರವವಿದೆ.

ಆದರೂ ಸಿಬಿಐಗೆ ನೀಡಿದರೆ ಪ್ರಕರಣದ ಹಿಂದೆ ಕಾಣದ ಕೈಗಳು ಗೋಚರವಾಗುತ್ತವೆ ಎಂದು ಹೇಳಿದರು. ನಮ್ಮ ಸರ್ಕಾರ ಇದ್ದಾಗ ಹರ್ಷ ಮತ್ತು ಪ್ರವೀಣ್ ನೆಟ್ಟಾರು ಕೊಲೆಯಾದಾಗ ಸಿಬಿಐಗೆ ನೀಡಿ ತನಿಖೆ ನಡೆಸಲಾಗಿತ್ತು. ಈ ಕೃತ್ಯದಲ್ಲಿ ಅಂತರಾಜ್ಯದವರು ಭಾಗಿಯಾಗಿದ್ದರಿಂದ ಸಿಬಿಐನಿಂದ ಬಹಿರಂಗಗೊಳ್ಳುತ್ತದೆ ಎಂದು ಪ್ರಕರಣವನ್ನು ಹಸ್ತಾಂತರ ಮಾಡಲಾಗಿತ್ತು. ಆದರಿಂದ ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ನೀಡಬೇಕೆಂದು ಒತ್ತಾಯ ಮಾಡಿದರು.

ಮತ್ತೊಂದೆಡೆ ಹಿರೇಕೋಡಿ ಆಶ್ರಮಯಕ್ಕೆ ಸಚಿವ ಡಿ ಸುಧಾಕರ ಭೇಟಿ ನೀಡಿ ಜೈನ ಧರ್ಮದ ಮುಖಂಡರಿಗೆ ಮತ್ತು ಶ್ರೀಗಳ ಪೂರ್ವಶ್ರಮದ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಆಶ್ರಮದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡ ಬಳಿಕ ಮಾಧ್ಯಮದ ಜೊತೆ ಮಾತನಾಡುತ್ತಾ, ಜಗತ್ತಿನಲ್ಲಿ ಶಾಂತಿ ಸಾರುವ ಧರ್ಮ ಎಂದರೆ ಅದು ಜೈನ ಧರ್ಮ. ಧರ್ಮದ ಗುರುಗಳಿಗೆ ಈ ರೀತಿ ಆಗಿರುವುದು ಖಂಡನೆ. ಈ ಪರಿಸರದಲ್ಲಿ ಶ್ರೀಗಳು ಶೈಕ್ಷಣಿಕವಾಗಿ ಕ್ರಾಂತಿ ಮಾಡಿದ್ದಾರೆ. ಆಶ್ರಮದ ಶಾಲೆಗಳು ಮರು ಪ್ರಾರಂಭಕ್ಕೆ ಇಲ್ಲಿ ಯಾವುದೇ ತೊಂದರೆ ಆಗದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ನಾನು ಚರ್ಚೆ ಮಾಡುತ್ತೇನೆ. ಈ ಶಾಲೆ ಅಭಿವೃದ್ಧಿಗೆ ನಾವು ಹೆಚ್ಚಿನ ಒತ್ತು ನೀಡುತ್ತೇವೆ. ಯಾರು ಭಯಪಡುವ ಅಗತ್ಯವಿಲ್ಲ. ಈಗಾಗಲೇ ತಪ್ಪಿತಸ್ಥರನ್ನು ಪ್ರಕರಣ ದಾಖಲಾದ ನಾಲ್ಕು ಗಂಟೆಯಲ್ಲಿ ಅವರನ್ನು ಬಂಧಿಸಲಾಗಿದೆ. ನಾನು ನಾಳೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ಅವರ ಜೊತೆ ಈ ಆಶ್ರಮ ಅಭಿವೃದ್ದಿ ಬಗ್ಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ : ಜೈನ ಮುನಿ ಹತ್ಯೆ ಪ್ರಕರಣ: ಹಿಂಡಲಗಾ ಜೈಲಿನಿಂದ ಚಿಕ್ಕೋಡಿಗೆ ಆರೋಪಿಗಳು ಶಿಫ್ಟ್

Last Updated : Jul 11, 2023, 7:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.