ETV Bharat / state

ಜೈನ ಸಮಾಜದ ರಾಷ್ಟ್ರಸಂತ ಚಿನ್ಮಯಸಾಗರ ಮುನಿ ಮಹಾರಾಜರು ಯಮಸಲ್ಲೇಖನ ವ್ರತ ಸ್ವೀಕಾರ

ಜೈನ ಸಮಾಜದ ರಾಷ್ಟ್ರಸಂತ ಚಿನ್ಮಯಸಾಗರ ಮುನಿ ಮಹಾರಾಜರು ಶನಿವಾರ ಜೀವನದ ಅಂತಿಮ ಘಟ್ಟವಾದ ಯಮಸಲ್ಲೇಖನ ವ್ರತ ಸ್ವೀಕರಿಸಿದರು.

ಜೈನ ಸಮಾಜದ ರಾಷ್ಟ್ರಸಂತ ಚಿನ್ಮಯಸಾಗರ ಮುನಿ ಮಹಾರಾಜರು ಯಮಸಲ್ಲೇಖನ ವ್ರತ ಸ್ವೀಕಾರ
author img

By

Published : Oct 13, 2019, 6:04 AM IST

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಗ್ರಾಮದವರಾದ ಆಚಾರ್ಯ ರಾಷ್ಟ್ರಸಂತ ಚಿನ್ಮಯಸಾಗರ(ಜಂಗಲವಾಲೆ ಬಾಬಾ) ಮುನಿ ಮಹಾರಾಜರು ಶನಿವಾರ ಜೀವನದ ಅಂತಿಮ ಘಟ್ಟವಾದ ಯಮಸಲ್ಲೇಖನ ವ್ರತ ಸ್ವೀಕರಿಸಿದರು.

ಜೈನ ಸಮಾಜದ ರಾಷ್ಟ್ರಸಂತ ಚಿನ್ಮಯಸಾಗರ ಮುನಿ ಮಹಾರಾಜರು ಯಮಸಲ್ಲೇಖನ ವ್ರತ ಸ್ವೀಕಾರ

ಮುನಿ ಮಹಾರಾಜರು ವರ್ಷಾಯೋಗ ಚಾತುರ್ಮಾಸ ನಿಮಿತ್ಯ ಹುಟ್ಟೂರ ಜುಗೂಳ ಗ್ರಾಮದಲ್ಲಿ ಆಗಮಿಸಿದ್ದರು. ಕೃಷ್ಣಾ ನದಿಗೆ ಮಹಾಪೂರ ನೀರು ಬಂದಿದ್ದರಿಂದ ಕೆಲ ದಿನ ಸುರಕ್ಷಿತ ಸ್ಥಳಕ್ಕಾಗಿ ಶೇಡಬಾಳದ ಶಾಂತಿಸಾಗರ ಆಶ್ರಮದಲ್ಲಿ ಉಳಿದು ಪ್ರವಚನ ಬೋಧಿಸಿದರು. ಬಳಿಕ ಮರಳಿ ಜುಗೂಳ ಗ್ರಾಮದಲ್ಲಿ ಬಂದು ನಿಯಮಸಲ್ಲೇಖನ ವ್ರತ ಪ್ರಾರಂಭಿಸಿದರು.

ಕಳೆದ ಕೆಲ ದಿನಗಳಿಂದ ಹಂತ ಹಂತವಾಗಿ ಆಹಾರ, ಫಲ ರಸ ತ್ಯಜಿಸಿದ್ದ ಮುನಿಗಳು ಇಂದು ಸಂಪೂರ್ಣವಾಗಿ ನೀರನ್ನೂ ಸಹ ತೇಜಿಸಿ ಯಮಸಲ್ಲೇಖನ ವ್ರತ ಸ್ವೀಕರಿಸಿದರು. ಆಚಾರ್ಯ ಜಿನಸೇನ ಮಹಾರಾಜರು ಮತ್ತು ಇತರ ಮುನಿಗಳು ಅವರಿಗೆ ಯಮಸಲ್ಲೇಖನ ವೃತ ನೀಡಿದರು.

ಜಂಗಲವಾಲೆ ಬಾಬಾ ತಮ್ಮ ಅಂತಿಮ ಸಂದೇಶ ನೀಡುವಾಗ, ನನ್ನ ಜೀವನದಲ್ಲಿ ನನ್ನಿಂದ ಜೈನ ಸಮಾಜದ ಅಹಿಂಸಾ ತತ್ವಗಳ ಸೇವೆ ಮಾಡುತ್ತಾ ಬಂದಿದ್ದೇನೆ. ಈಗ ಕೊನೆ ಘಟ್ಟದ ಯಮಸಲ್ಲೇಖನ ವ್ರತ ಸ್ವೀಕರಿಸಿ ನನ್ನ ಅಂತಿಮ ದಾರಿಗೆ ಸಾಗುತ್ತಿದ್ದೇನೆ. ನನ್ನನ್ನು ಕ್ಷಮಿಸಿ ಎಂದು ಎಲ್ಲ ಶ್ರಾವಕ ಶ್ರಾವಿಕೆಯರಿಗೆ ವಿನಂತಿಸಿದರು.

Intro:ಜೈನ ಸಮಾಜದ ರಾಷ್ಟ್ರಸಂತ ಚಿನ್ಮಯಸಾಗರ ಮುನಿ ಮಹಾರಾಜರು ಯಮಸಲ್ಲೇಖನ ವೃತ ಸ್ವೀಕಾರ
Body:
ಚಿಕ್ಕೋಡಿ :

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಗ್ರಾಮದವರಾದ ಆಚಾರ್ಯ ರಾಷ್ಟ್ರಸಂತ ಚಿನ್ಮಯಸಾಗರ(ಜಂಗಲವಾಲೆ ಬಾಬಾ) ಮುನಿ ಮಹಾರಾಜರು ಶನಿವಾರ ಜೀವನದ ಅಂತಿಮ ಘಟ್ಟವಾದ ಯಮಸಲ್ಲೇಖನ ವೃತ ಸ್ವೀಕರಿಸಿದರು.

ವರ್ಷಾಯೋಗ ಚಾತುರ್ಮಾಸ ನಿಮಿತ್ಯ ಹುಟ್ಟೂರ ಜುಗೂಳ ಗ್ರಾಮದಲ್ಲಿ ಆಗಮಿಸಿದ್ದರು. ಕೃಷ್ಣಾ ನದಿಗೆ ಮಹಾಪೂರ ನೀರು ಬಂದಿದ್ದರಿಂದ ಕೆಲ ದಿನ ಸುರಕ್ಷಿತ ಸ್ಥಳಕ್ಕಾಗಿ ಶೇಡಬಾಳದ ಶಾಂತಿಸಾಗರ ಆಶ್ರಮದಲ್ಲಿ ಉಳಿದು ಪ್ರವಚನ ಬೋಧಿಸಿದರು. ಬಳಿಕ ಮರಳಿ ಜುಗೂಳ ಗ್ರಾಮದಲ್ಲಿ ಬಂದು ನಿಯಮಸಲ್ಲೇಖನ ವೃತ್ ಪ್ರಾರಂಭಿಸಿದರು.

ಕಳೆದ ಕೆಲ ದಿನಗಳಿಂದ ಹಂತ ಹಂತವಾಗಿ ಆಹಾರ, ಫಲ ರಸ, ನಂತರ ನೀರು ಹೀಗೆ ಸೇವಿಸದು ಸೇವಿಸಿ, ಇಂದು ಸಂಪೂರ್ಣವಾಗಿ ನೀರು ಸಹ ತೇಜಿಸಿ ಯಮಸಲ್ಲೇಖನ ವೃತ ಸ್ವೀಕರಿಸಿದರು. ಆಚಾರ್ಯ ಜಿನಸೇನ ಮಹಾರಾಜರು ಮತ್ತು ಇತರ ಮುನಿಗಳು ಅವರಿಗೆ ಯಮಸಲ್ಲೇಖನ ವೃತ ನೀಡಿದರು.

ಜಂಗಲವಾಲೆ ಬಾಬಾ ತಮ್ಮ ಅಂತಿಮ ಸಂದೇಶ ನೀಡುವಾಗ, ನನ್ನ ಜೀವನದಲ್ಲಿ ನನ್ನಿಂದ ಜೈನ ಸಮಾಜದ ಅಹಿಂಸಾ ತತ್ವಗಳ ಸೇವೆ ಮಾಡುತ್ತಾ ಬಂದಿದ್ದೇನೆ. ಈಗ ಕೊನೆ ಘಟ್ಟದ ಯಮಸಲ್ಲೇಖನ ವೃತ ಸ್ವೀಕರಿಸಿ ನನ್ನ ಅಂತಿಮ ದಾರಿಗೆ ಸಾಗುತ್ತಿದ್ದೇನೆ. ನನ್ನನ್ನು ಕ್ಷಮಿಸಿ ಎಂದು ಎಲ್ಲ ಶ್ರಾವಕ ಶ್ರಾವಿಕೆಯರಿಗೆ ವಿನಂತಿಸಿದರು.

ಸೂಚನೆ : ಈ ವಿಡಿಯೋ ಮೇಲೆ ವಾಟರ್ ಮಾರ್ಕ ಇದೆ ಅದನ್ನು ತೆಗೆದು ವಿಡಿಯೋ ಬಳಕೆ ಮಾಡಿಕೊಳ್ಳಿ

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.