ಬೆಳಗಾವಿ: ಉದ್ಯಮಿ, ಗುತ್ತಿಗೆದಾರ ಜಯಶೀಲ ಶೆಟ್ಟಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾದಲ್ಲಿರುವ ಮನೆ ಮೇಲೆ ಐಟಿ ದಾಳಿ ನಡೆದಿದೆ.
ಗೋವಾ ಮತ್ತು ಬೆಳಗಾವಿಯ 16 ಜನ ಆದಾಯ ತೆರಿಗೆ ಅಧಿಕಾರಿಗಳ ತಂಡವು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ಐಟಿ ಅಧಿಕಾರಿಗಳು ವ್ಯವಹಾರ, ಆಸ್ತಿ, ಆದಾಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಗುತ್ತಿಗೆದಾರರ ಮೇಲೆ ಐಟಿ ದಾಳಿ ಅಂತ್ಯ: ದಾಖಲೆಗಳ ಪರಿಶೀಲನೆ, ಮುಂದೇನು?
ನಿನ್ನೆಯಿಂದಲೇ ದಾಳಿ ನಡೆದಿದ್ದು, ಬೆಳಗ್ಗೆಯಿಂದ ಸಂಜೆಯವರೆಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇಂದೂ ಕೂಡ ಬೆಳಗ್ಗೆಯಿಂದಲೂ ಜಯಶೀಲ ಶೆಟ್ಟಿ ಮನೆಯಲ್ಲಿ ಠಿಕಾಣಿ ಹೂಡಿರುವ ಅಧಿಕಾರಿಗಳ ತಂಡ ದಾಖಲಾತಿ ಪರಿಶೀಲನೆ ಮುಂದುವರೆಸಿದೆ.
ಇದನ್ನೂ ಓದಿ: ನೆಲ ಬಾಡಿಗೆ ಪಾವತಿಸದೆ ವಂಚನೆ ವಿಚಾರ: 18.77 ಲಕ್ಷ ರೂ ಪಾವತಿಸಿದ ನಿಶಾ ಯೋಗೇಶ್ವರ್