ಗೋಕಾಕ : ಕಳೆದ 20 ವಷ೯ಗಳಿಂದ ಗೋಕಾಕ್ ನಗರಸಭೆ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಅವರ ತಮ್ಮ ಲಖನ್ ಜಾರಕಿಹೊಳಿ ಹಿಡಿತದಲ್ಲಿದ್ದು, ಈ ಇಬ್ಬರು ಮುಖಂಡರ ಅಪ್ಪಣೆ ಇಲ್ಲದೇ ಏನೂ ನಡೆಯುತ್ತಿರಲಿಲ್ಲ ಎಂದು ಎಂದು ಬಿಜೆಪಿ ಮುಖಂಡ ಅಶೋಕ್ ಪೂಜಾರಿ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 20 ವಷ೯ಗಳಿಂದ ಗೋಕಾಕ್ ನಗರಸಭೆಯಲ್ಲಿ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಅವರ ತಮ್ಮ ಲಖನ್ ಜಾರಕಿಹೊಳಿಯವರು ಹಿಡಿತದಲ್ಲಿದೆ. ನಗರಸಭೆಯಲ್ಲಿ ಏನಾದರೂ ನಡೆಯಬೇಕೆಂದರೆ ಈ ಇಬ್ಬರೂ ಮುಖಂಡರ ಅಪ್ಪಣೆ ಇಲ್ಲದೇ ಆಗುತ್ತಿರಲಿಲ್ಲ.
ಆದರೆ, ಇತ್ತೀಚಿನ ದಿನಗಳಲ್ಲಿ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ, ಲಖನ್ ಚಾರಕಿಹೊಳಿ ಮತ್ತು ನಗರಸಭೆಯ 4 ನಾಲ್ಕು ಜನ ಸದಸ್ಯರು ಸೇರಿ ನಗರಸಭೆಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಅಳಿಯ ಅಂಬಿರಾಮ್ ಪಾಟೀಲ್ ಆರೋಪಿಸಿದ್ದರು.
ಆದರೆ, ಇಲ್ಲಿಯವರೆಗೂ ಅಂಬಿರಾವ್ ಪಾಟೀಲ್ ಈ ಕುರಿತು ಸ್ಪಷ್ಟೀಕರಣ ನೀಡಿಲ್ಲ. ಇದರಿಂದ ತಾಲೂಕಿನ ಜನರಲ್ಲಿ ಸಂಶಯ ಹುಟ್ಟಿದ್ದು ಚರ್ಚೆಗೆ ಕಾರಣವಾಗಿದೆ. ಅದಕ್ಕಾಗಿ ಕೂಡಲೇ ಸರ್ಕಾರ ಈ ಕುರಿತು ಕ್ರಮಕೈಗೊಂಡು ಸಂತ್ಯಾಂಶವನ್ನು ಬಯಲಿಗೆಳೆಯಬೇಕು. ಇಲ್ಲವಾದರೆ ಪ್ರತಿಭಟಿಸುವುದಾಗಿ ತಿಳಿಸಿದರು.