ETV Bharat / state

ಬೆಳಗಾವಿ ದಕ್ಷಿಣ‌ ಮತಕ್ಷೇತ್ರದ 90 ಸರ್ಕಲ್​​​​ಗಳಲ್ಲಿ 256 ಅತ್ಯಾಧುನಿಕ ಕ್ಯಾಮರಾ ಅಳವಡಿಕೆ: ಶಾಸಕ ಅಭಯ್ ಪಾಟೀಲ್ - 90 ಸರ್ಕಲ್ ಗಳಲ್ಲಿ 256 ಅತ್ಯಾಧುನಿಕ ಕ್ಯಾಮೆರಾ ಅಳವಡಿಕೆ

ಹೆಚ್ಚುತ್ತಿರುವ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಮತ್ತು ಸಂಚಾರದಲ್ಲಿ ಶಿಸ್ತು ಕಾಪಾಡಲು ಬೆಳಗಾವಿ ದಕ್ಷಿಣ ಮತಕ್ಷೇತ್ರದ 90 ಸರ್ಕಲ್ ಗಳಲ್ಲಿ 256 ಅತ್ಯಾಧುನಿಕ ಕ್ಯಾಮರಾ ಅಳವಡಿಕೆ ಮಾಡಲು ಶಾಸಕ ಅಭಯ್ ಪಾಟೀಲ್ ಚಾಲನೆ ನೀಡಿದರು.

installation-of-cameras-in-90-circles-of-belgaum-south-constituency
ಬೆಳಗಾವಿಯ ದಕ್ಷಿಣ‌ ಮತಕ್ಷೇತ್ರದ 90 ಸರ್ಕಲ್ ಗಳಲ್ಲಿ 256 ಅತ್ಯಾಧುನಿಕ ಕ್ಯಾಮೆರಾ ಅಳವಡಿಕೆ : ಶಾಸಕ ಅಭಯ್ ಪಾಟೀಲ
author img

By

Published : Aug 9, 2022, 11:48 AM IST

ಬೆಳಗಾವಿ: ಬೆಳಗಾವಿ ದಕ್ಷಿಣ ಮತಕ್ಷೇತ್ರದ ಮೂರು ಪೋಲೀಸ್ ಠಾಣೆಗಳ ವ್ಯಾಪ್ತಿಯ 90 ಸರ್ಕಲ್ ಗಳಲ್ಲಿ ಅತ್ಯಾಧುನಿಕ ಕ್ಯಾಮರಾ ಅಳವಡಿಸುವ ಕಾರ್ಯಕ್ಕೆ ಶಾಸಕ ಅಭಯ ಪಾಟೀಲ್​​ ಚಾಲನೆ ನೀಡಿದರು. ಹೆಚ್ಚುತ್ತಿರುವ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಮತ್ತು ಸಂಚಾರದಲ್ಲಿ ಶಿಸ್ತು ಕಾಪಾಡಲು ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಅತ್ಯಾಧುನಿಕ ಕ್ಯಾಮರಾ ಅಳವಡಿಸಲಾಗುತ್ತಿದೆ.

ಇದು ಶಾಸಕ ಅಭಯ ಪಾಟೀಲರ ಕನಸಿನ ಯೋಜನೆ ಆಗಿದ್ದು, ಬೆಳಗಾವಿ ದಕ್ಷಿಣ ಮತಕ್ಷೇತ್ರದ 90 ಜಂಕ್ಷನ್ (ವೃತ್ತಗಳಲ್ಲಿ) ಗಳಲ್ಲಿ ಒಟ್ಟು 256 ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಇಡೀ ಬೆಳಗಾವಿ ದಕ್ಷಿಣ ಮತ ಕ್ಷೇತ್ರವನ್ನು ಕ್ಯಾಮರಾ ರೆಡಾರ್​​​​ನಲ್ಲಿ ತರುವ ಉದ್ದೇಶವನ್ನು ಹೊಂದಿದೆ.

installation-of-cameras-in-90-circles-of-belgaum-south-constituency
ಬೆಳಗಾವಿಯ ದಕ್ಷಿಣ‌ ಮತಕ್ಷೇತ್ರದ 90 ಸರ್ಕಲ್ ಗಳಲ್ಲಿ 256 ಅತ್ಯಾಧುನಿಕ ಕ್ಯಾಮೆರಾ ಅಳವಡಿಕೆ : ಶಾಸಕ ಅಭಯ್ ಪಾಟೀಲ

ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದ ಅಭಯ ಪಾಟೀಲ್​, ದಕ್ಷಿಣ ಮತಕ್ಷೇತ್ರದಲ್ಲಿ ಕ್ಯಾಮರಾ ಅಳವಡಿಸುವ ಮೂಲಕ ನಗರ ಮತ್ತು ಉಪನಗರಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದಂತಹ ಘಟನೆಗಳನ್ನು ಮತ್ತು ಟ್ರಾಫಿಕ್ ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳಲಾಗುವುದು. ಈ ಯೋಜನೆಗೆ ಮೂರು ಕೋಟಿ ಇಪ್ಪತ್ತು ಲಕ್ಷ ರೂ.ವೆಚ್ಚ ಮಾಡಲಾಗುತ್ತಿದೆ. ರಾತ್ರಿ ವೇಳೆಯೂ ಈ ಕ್ಯಾಮರಾಗಳಿಂದ ಸ್ಪಷ್ಟ ದೃಶ್ಯಗಳನ್ನು ಸೆರೆ ಹಿಡಿಯಬಹುದಾಗಿದೆ. ಅತ್ಯಾಧುನಿಕ ಕ್ಯಾಮರಾಗಳ ಅಳವಡಿಕೆಯಿಂದ ಅಪರಾಧಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಮತ್ತು ನಗರದಲ್ಲಿ ಶಾಂತಿ ಕದಡುವ ಕಿಡಿಗೇಡಿಗಳನ್ನು ಪತ್ತೆ ಮಾಡಲು ಈ ಕ್ಯಾಮರಾಗಳು ಸಹಕಾರಿಯಾಗಲಿದೆ ಎಂದು ಹೇಳಿದರು.

ಒಂದೇ ಕ್ಷೇತ್ರದಲ್ಲಿ 90 ವೃತ್ತಗಳಲ್ಲಿ, 256 ಕ್ಯಾಮರಾ ಅಳವಡಿಸುತ್ತಿರುವುದು ಇಡೀ ದೇಶದಲ್ಲಿ ಇದೇ ಮೊದಲು. ಈ ಕಾರ್ಯ ಎಲ್ಲರಿಗೂ ಮಾದರಿಯಾಗಲಿದೆ ಎಂದು ಶಾಸಕ ಅಭಯ ಪಾಟೀಲ್​​ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ : ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್​ನ ಈವರೆಗಿನ ಇಲಾಖಾವಾರು ಆರ್ಥಿಕ ಪ್ರಗತಿ ಹೇಗಿದೆ ‌ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.