ಬೆಳಗಾವಿ : ಭಾರತ ಎ ಶ್ರೀಲಂಕಾ ಎ ಮೂರು ದಿನಗಳ ಟೆಸ್ಟ್ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸಮನ್‌ಗಳಾದ ಅಭಿಮನ್ಯು ಈಶ್ವರನ್ ಹಾಗೂ ನಾಯಕ ಪ್ರಿಯಾಂಕ ಪಾಂಚಾಲ್ ಶತಕ ಸಿಡಿಸಿ ಸಂಭ್ರಮಿಸಿದರು.
ಇಲ್ಲಿನ ಆಟೋನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ರಕ್ಷಣಾತ್ಮಕ ಆಟ ಆಡುವ ಮೂಲಕ ದಿನಪೂರ್ತಿ ಲಂಕಾ ಬೌಲರ್‌ಗಳನ್ನು ಬೆಂಡೆತ್ತಿದರು. ದಿನದಾಟದ ಅಂತ್ಯಕ್ಕೆ ಭಾರತ ಎ ತಂಡ 87 ಓವರ್‌ನಲ್ಲಿ 1 ವಿಕೆಟ್ ನಷ್ಟಕ್ಕೆ 376 ರನ್ ಬೃಹತ್ ಮೊತ್ತ ದಾಖಲಿಸಿತು.
ಅಭಿಮನ್ಯುಗೆ ಉತ್ತಮ ಸಾಥ್ ನೀಡಿದ ನಾಯಕ ಪ್ರಿಯಾಂಕ ಪಾಂಚಾಲ್ ಕೂಡ ಕುಂದಾನಗರಿಯಲ್ಲಿ ಮತ್ತೊಂದು ಶತಕ ಸಿಡಿಸಿ ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು. 44 ನೇ ಓವರ್‌ನಲ್ಲಿ 136 ಎಸೆತದಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಭಿಮನ್ಯು ಶತಕದ ಸಂಭ್ರಮ ಆಚರಿಸಿದರು.
ದಿನದಾಟದ ಅಂತ್ಯಕ್ಕೆ ಅಭಿಮನ್ಯು 250 ಎಸೆತಗಳಲ್ಲಿ ಅಜೇಯ 189 ರನ್ ಪೇರಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 51 ನೇ ಓವರ್‌ನಲ್ಲಿ ಪ್ರಿಯಾಂಕ ಪಾಂಚಾಲ್ 156 ಎಸೆತದಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಶತಕ ದಾಖಲಿಸಿದರು. 261 ಎಸೆತಗಳಲ್ಲಿ 160 ರನ್ ಗಳಿಸಿದ್ದ ಪಾಂಚಾಲ್ ವಿಕೆಟ್ ಒಪ್ಪಿಸಿದರು.