ETV Bharat / state

ರಾತ್ರೋರಾತ್ರಿ ಮಚ್ಚೆಯಲ್ಲಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ: ಪಟ್ಟಣದಲ್ಲಿ ಬಿಗುವಿನ ವಾತಾವರಣ

ಮಚ್ಚೆ ಪಟ್ಟಣದಲ್ಲಿ ರಾತೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ.

Etv Bharatinauguration-of-sangolli-rayanna-statue-in-macche-town
ರಾತ್ರೋ ರಾತ್ರಿ ಮಚ್ಚೆಯಲ್ಲಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ: ಬಿಗುವಿನ ವಾತಾವರಣ ನಿರ್ಮಾಣ
author img

By

Published : Jun 5, 2023, 4:34 PM IST

ಬೆಳಗಾವಿ: ತಾಲೂಕಿನ ಮಚ್ಚೆ ಪಟ್ಟಣದಲ್ಲಿ ರಾತೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸದ್ಯ ಬೂದಿ ಮುಚ್ಚಿದ ಕೆಂಡದ ವಾತಾವರಣ ನಿರ್ಮಾಣವಾಗಿದೆ. ಮಚ್ಚೆ ಪಟ್ಟಣದ ಜೀಜಾಮಾತಾ ಚೌಕ್‌ನಲ್ಲಿರುವ ಪಟ್ಟಣ ಪಂಚಾಯತಿ ಕಚೇರಿ ಮುಂಭಾಗದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆಗೆ ಕಳೆದ ಹಲವು ವರ್ಷಗಳಿಂದ ಕನ್ನಡಪರ ಸಂಘಟನೆಗಳ ಮನವಿ ಸಲ್ಲಿಸಿದ್ದವು.

ಇತ್ತ ಜೀಜಾಮಾತಾ ಅಥವಾ ಶಿವಾಜಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪಿಸುವಂತೆ ಮರಾಠಿ ಭಾಷಿಕರು ಮನವಿ ಮಾಡಿದ್ದರು. ಇದೆಲ್ಲದರ ಮಧ್ಯೆ ನಿನ್ನೆ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ. ಇಂದು ಬೆಳಗ್ಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪೂಜೆ ಸಲ್ಲಿಸಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮೂರ್ತಿಗೆ ಹಾಲಿನ ಅಭಿಷೇಕ ಮಾಡಿ ಹಾರ ಹಾಕಿದ್ದರು. ಸ್ಥಳಕ್ಕೆ ಡಿಸಿಪಿ ಶೇಖರ್ ಹೆಚ್. ಟಿ. ಧಾವಿಸಿ ಪರಿಶೀಲನೆ ನಡೆಸಿದರು.

ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಒಂದು ಕೆಎಸ್ಆರ್​ಪಿ ತುಕಡಿ ಕೂಡ ನಿಯೋಜಿಸಲಾಗಿದೆ. ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಪೊಲೀಸರು ಮೂರ್ತಿಗೆ ಬಟ್ಟೆ ಕಟ್ಟಿದ್ದು, ಎರಡು ದಿನಗಳ ಬಳಿಕ ಪಟ್ಟಣ ಪಂಚಾಯತಿಯಲ್ಲಿ ಠರಾವು ಪಾಸ್ ಮಾಡಿ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಅಲ್ಲದೇ ಜಿಲ್ಲಾಧಿಕಾರಿ ನಿತೇಶ ಪಾಟೀಲ ಕೂಡ ಸ್ಥಳಕ್ಕೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:'ಶಾಂತಿಯುತ ಕರ್ನಾಟಕ' ಸಹಾಯವಾಣಿ ಆರಂಭಿಸಿ: ಸರ್ಕಾರಕ್ಕೆ ಸಚಿವ ಎಂ.ಬಿ.ಪಾಟೀಲ್‌ ಮನವಿ

ಅಭಿನಂದನೆಗೆ ಶಾಲು-ಹಾರ ಬದಲು ಪುಸ್ತಕ ನೀಡಿ - ಸಚಿವ ಶಿವರಾಜ ತಂಗಡಗಿ: ಗಂಗಾವತಿಯ ಕಾರಟಗಿ ಪಟ್ಟಣದ ತಮ್ಮ ನಿವಾಸದಲ್ಲಿ ವಿವಿಧ ಸಮಾಜ, ಸಂಘ-ಸಂಸ್ಥೆಗಳು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಉದ್ದೇಶಿಸಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಮಾತನಾಡಿ, ನಾನು ಮಂತ್ರಿಯಾದ ಬಳಿಕ ನನ್ನ ಅಭಿಮಾನಿಗಳು, ಕಾರ್ಯಕರ್ತರು, ಸಾರ್ವಜನಿಕರು ಅಭಿನಂದಿಸುವ ನೆಪದಲ್ಲಿ ಶಾಲು-ಹಾರ, ಸ್ಮರಣಿಕೆಗಳನ್ನು ತರುತ್ತಿದ್ದು, ಇದರಿಂದ ನನಗೆ ತೀವ್ರ ನೋವಾಗುತ್ತಿದೆ ಎಂದು ಹೇಳಿದರು.

ನನಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಕ್ಕ ಬಳಿಕ ತಕ್ಷಣಕ್ಕೆ ನಾನು ನಿರ್ಧಾರ ಮಾಡಿದ್ದು ಎಂದರೆ ಯಾವುದೇ ಕಾರಣಕ್ಕೂ ನಾನು ಸನ್ಮಾನಕ್ಕೆ ಶಾಲು-ಹಾರ ತುರಾಯಿ ಪಡೆಯಬಾರದು. ಆದರೆ, ಜನ ನನ್ನ ಮನವಿ ಮೀರಿಯೂ ಶಾಲು-ಹಾರ ತರುತ್ತಿದ್ದಾರೆ. ಒಂದು ಟ್ರ್ಯಾಕ್ಟರಿಯಷ್ಟು ಹಾರ-ಹೂವಿನಬೊಕ್ಕೆ ತುರಾಯಿಗಳನ್ನು ಬೇರೆಡೆಗೆ ಕಳಿಸಿದ್ದೇನೆ. ಇದರಿಂದ ಯಾವ ಪ್ರಯೋಜನವಿಲ್ಲ, ಹಣ ವ್ಯರ್ಥ ಎಂದರು.

ಅದರ ಬದಲಿಗೆ ಒಂದು ಪುಸ್ತಕ ನೀಡುವಂತೆ ಮನವಿ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಶಾಲು-ಹಾರ ತರದಂತೆ ಅಭಿಮಾನಿಗಳು, ಕಾರ್ಯಕರ್ತರು ಮತ್ತು ಜನರಿಗೆ ಮನವಿ ಮಾಡಿಕೊಂಡಿದ್ದೇನೆ. ಇದರ ಬದಲು ಒಂದೇ ಒಂದು ಪುಸ್ತಕ, ಪೆನ್ ಅಥವಾ ನೋಟ್​ ಕೊಟ್ಟರೆ ಅವುಗಳನ್ನು ಕ್ಷೇತ್ರದ ಬಡ ಮಕ್ಕಳಿಗೆ ನೀಡುತ್ತೇನೆ. ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಇಡುತ್ತೇನೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.