ಚಿಕ್ಕೋಡಿ: ಕಳ್ಳಭಟ್ಟಿ ಸಾರಾಯಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ತಾಲೂಕಿನ ಪಾಶ್ಚಾಪೂರ ಗ್ರಾಮದ ಬಳಿ ಪೊಲೀಸರು ಬಂಧಿಸಿದ್ದಾರೆ.
ಹುಕ್ಕೇರಿ ತಾಲೂಕಿನ ಶಿರೂರ ಗ್ರಾಮದ ಈರಪ್ಪ ಮ್ಯಾಕಳಿ (35) ಬಂಧಿತ ಆರೋಪಿ. ದ್ವಿಚಕ ವಾಹನದಲ್ಲಿ ಸುಮಾರು 50 ಲೀಟರ್ ಕಳಭಟ್ಟಿ ಸಾರಾಯಿ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಚಿಕ್ಕೋಡಿ ಅಬಕಾರಿ ಇಲಾಖೆ ಉಪ ಅಧಿಕ್ಷಕ ವಿಜಯ ಕುಮಾರ ನೇತ್ರತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಈ ಕುರಿತು ಚಿಕ್ಕೋಡಿ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.