ETV Bharat / state

ಸಚಿವ ಸಂಪುಟ ವರ್ಷದ ಹಿಂದೆ ಆಗಿದ್ದರೆ ಅರ್ಥವಿತ್ತು, ಸಚಿವ ಆಗುವ ಆಸೆ ನನಗಿಲ್ಲ: ಸಿ ಪಿ ಯೋಗೇಶ್ವರ್ ಬೇಸರ

author img

By

Published : Dec 23, 2022, 12:14 PM IST

Updated : Dec 23, 2022, 1:19 PM IST

ಇನ್ನೇನು ಚುನಾವಣೆ ಮೂರು ತಿಂಗಳು ಮಾತ್ರ ಉಳಿದಿದೆ. ಮುಂದಿನ‌ ಚುನಾವಣೆಯ ತಯಾರಿ ಮಾಡ್ಕೋಬೇಕು. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದೇನೆ ಎಂದು ಶಾಸಕ ಸಿ ಪಿ ಯೋಗೇಶ್ವರ್ ತಿಳಿಸಿದ್ದಾರೆ.

MLA CP Yogeshwar spoke to the media.
ಶಾಸಕ ಸಿ ಪಿ ಯೋಗೇಶ್ವರ್ ಮಾಧ್ಯಮದವರೊಂದಿಗೆ ಮಾತನಾಡಿದರು.

ಶಾಸಕ ಸಿ ಪಿ ಯೋಗೇಶ್ವರ್

ಬೆಳಗಾವಿ: ಸಚಿವ ಸಂಪುಟ ಒಂದು ವರ್ಷದ ಹಿಂದೆ ಆಗಿದ್ದರೆ ಅದಕ್ಕೆ ಅರ್ಥ ಇತ್ತು. ಈಗಾಗಲೇ ಕಾಲಾವಧಿ ಮುಗೀತಾ ಬರ್ತಿದೆ. ನಾನು ಸಂಪುಟ ಸೇರುವ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸಿಲ್ಲ ಎಂದು ಶಾಸಕ ಸಿ ಪಿ ಯೋಗೇಶ್ವರ್ ಹೇಳಿದರು. ಬೆಳಗಾವಿ ಖಾಸಗಿ ಹೊಟೇಲ್​​ನ ಸಭಾಭವನದಲ್ಲಿ ಮಾಧ್ಯಮಗಳ ಜತೆಗ ಅವರು ಮಾತನಾಡಿದರು. ಇನ್ನೇನು ಚುನಾವಣೆ ಮೂರು ತಿಂಗಳು ಮಾತ್ರ ಉಳಿದಿದೆ. ಮುಂದಿನ‌ ಚುನಾವಣೆಯ ತಯಾರಿ ಮಾಡ್ಕೋಬೇಕು.

ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದೇನೆ. ಪಕ್ಷ ಏನೂ ನಿರ್ಧರಿಸುತ್ತಿದೆಯೋ ಅದಕ್ಕೆ ಬದ್ಧವಾಗಿದ್ದೇನೆ. ಈಗಾಗಲೇ ಮೂರು ಬಾರಿ ಸ್ಬಲ್ಪ ದಿನಗಳ ಕಾಲ ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ಸಚಿವ ಸ್ಥಾನ ಕೊಟ್ಟರೆ ಸಮರ್ಪಕವಾಗಿ ನಿಭಾಯಿಸುವೆ ಎಂದು ಅಭಿಮತ ವ್ಯಕ್ತಪಡಿಸಿದರು.

ಕೋವಿಡ್ ವಿಚಾರ: ಕುಮಾರಸ್ವಾಮಿ, ಡಿಕೆಶಿ ಅರ್ಥ ಮಾಡ್ಕೊಬೇಕು. ಕೋವಿಡ್ ಮತ್ತೆ ಉಲ್ಭಣವಾಗ್ತಿದೆ. ಅವರು ರ‌್ಯಾಲಿ ಮಾಡ್ತಾರೆ ಅಂತ ಕೋವಿಡ್ ಬಂದಿಲ್ಲ ಎಂದು ಪ್ರತಿಕ್ರಿಯೆ ನೀಡಿದರು. ಇದೇ ವೇಳೆ ನಿಖಿಲ್​ ಪ್ರವೇಶದ ಬಗ್ಗೆ ಮಾತನಾಡಿದ ಯೋಗೇಶ್ವರ್, ಹಿಂದಿನ ಮಹಾರಾಜರ ಕಾಲದಲ್ಲಿ ವಂಶಪಾರಂಪರವಾಗಿ ಅಧಿಕಾರ ಸ್ವೀಕರಿಸಿ, ಆಡಳಿತ ನಡೆಸುತ್ತಿದ್ದರು. ಪ್ರಜಾಪ್ರಭುತ್ವದಲ್ಲಿ ಅವ್ಯವಸ್ಥೆಗೆ ವಿರೋಧವಿದೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಂದುವರಿತಾ ಇರುವುದು ದೌರ್ಭಾಗ್ಯ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:ಕೆಕೆಆರ್‌ಡಿಬಿ ಹಣ ವಿದೇಶ ಪ್ರವಾಸಕ್ಕೆ ಬಳಕೆ: ಅಧ್ಯಕ್ಷ ರೇವೂರ ವಿರುದ್ಧ ಅಲ್ಲಮಪ್ರಭು ಪಾಟೀಲ್ ಆಕ್ರೋಶ

Last Updated : Dec 23, 2022, 1:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.