ETV Bharat / state

ರಾಜಕಾರಣದಲ್ಲಿ ಇರುವವರೆಗೆ ಬಿಜೆಪಿಯಲ್ಲೇ ಇರುತ್ತೇನೆ: ಸಚಿವ ಭೈರತಿ ಬಸವರಾಜ್ - ಸಚಿವ ಭೈರತಿ ಬಸವರಾಜ್ ಹೇಳಿಕೆ

ಪಕ್ಷ ಬಿಟ್ಟು ಹೋದವರು ಮರಳಿ ಬರಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೆ ಕೊಡುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ನಾನು ಪಕ್ಷ ಬದಲಿಸಲ್ಲ. ಬಿಜೆಪಿ ಪಕ್ಷದಿಂದಲೇ ಮತ್ತೆ ಗೆದ್ದು ಶಾಸಕನಾಗುತ್ತೇನೆ ಎಂದು ಸಚಿವ ಭೈರತಿ ಬಸವರಾಜ್ ಸ್ಪಷ್ಟಪಡಿಸಿದರು.

Minister Bhairati Basavaraj
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್
author img

By

Published : Jan 7, 2021, 5:32 PM IST

ಬೆಳಗಾವಿ: ರಾಜಕಾರಣದಲ್ಲಿ ಇರುವವರೆಗೆ ನಾನು ಬಿಜೆಪಿಯಲ್ಲೇ ಇರುತ್ತೇನೆ. ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ಸಿಗೆ ಹೋಗಲ್ಲ ಎಂದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಸ್ಪಷ್ಟಪಡಿಸಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಬಿಟ್ಟು ಹೋದವರು ಮರಳಿ ಬರಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೆ ಕೊಡುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ನಾನು ಪಕ್ಷ ಬದಲಿಸಲ್ಲ. ಬಿಜೆಪಿ ಪಕ್ಷದಿಂದಲೇ ಮತ್ತೇ ಗೆದ್ದು ಶಾಸಕನಾಗುತ್ತೇನೆ. ಮುಂದಿನ ಸಲವೂ ರಾಜ್ಯದಲ್ಲಿ ನಮ್ಮದೇ ಸರ್ಕಾರ ಬರಲಿದೆ ಎಂದರು.

ಸಿಎಂ ಬದಲಾಗಲಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಇತ್ತೀಚೆಗೆ ಸಿದ್ದರಾಮಯ್ಯನವರು ಜ್ಯೋತಿಷಿಯಾಗುತ್ತಿದ್ದಾರೋ ಅಥವಾ ಸಿಎಂ ಬದಲಾವಣೆ ವಿಚಾರವಾಗಿ ಅವರಿಗೆ ಕನಸು ಬೀಳುತ್ತಿವೆಯೋ? ಗೊತ್ತಿಲ್ಲ. ಸಿದ್ದರಾಮಯ್ಯನವರ ಹೇಳಿಕೆ ಸತ್ಯಕ್ಕೆ ದೂರವಾದದು. ಸಿಎಂ ಬದಲಾವಣೆ ಸಾಧ್ಯವೇ ಇಲ್ಲ. ಇನ್ನೂ ಎರಡೂವರೆ ವರ್ಷ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ. ಅವರು ಅನುಭವಿಗಳು ಹಾಗೂ ಸಮರ್ಥರಿದ್ದಾರೆ. ಮಾರ್ಚ್‍ನಲ್ಲಿ ಜನಪ್ರಿಯ ಬಜೆಟ್ ಕೂಡ ಮಂಡಿಸಲಿದ್ದಾರೆ. ಸಿಎಂ ಸೂಚನೆಯ ಹಿನ್ನೆಲೆಯಲ್ಲಿ ಅಭಿವೃದ್ಧಿಯತ್ತ ನಾವೂ ಗಮನ ಹರಿಸುತ್ತಿದ್ದೇವೆ ಎಂದು ಹೇಳಿದರು.

ಓದಿ: ಯಾವುದೇ ಕಾರಣಕ್ಕೂ ಕಾಂಗ್ರೆಸ್​​​ಗೆ ಮರಳುವುದಿಲ್ಲ: ಭೈರತಿ‌ ಬಸವರಾಜ್

ಬರುವ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಚಿಹ್ನೆಯ ಮೇಲೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ ಬಿಜೆಪಿಯವರೇ ಬೆಳಗಾವಿಯ ಮೇಯರ್ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಾಲಿಕೆ ಎದುರು ಕನ್ನಡ ಧ್ವಜಸ್ತಂಭ ಅಳವಡಿಕೆ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಇದನ್ನು ಜಿಲ್ಲಾಡಳಿತವೆ ಬಗೆಹರಿಸಲಿದೆ ಎಂದರು.

ಸಂಕ್ರಾಂತಿ ನಂತ್ರ ಸಂಪುಟ ವಿಸ್ತರಣೆ:

ಸಂಕ್ರಾಂತಿ ನಂತರ ಸಂಪುಟ ವಿಸ್ತರಣೆ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಸಂಪುಟ ವಿಸ್ತರಣೆ ಸಿಎಂ ಅವರ ಪರಮಾಧಿಕಾರ ಹೊಂದಿದ್ದಾರೆ. ನಮ್ಮ ಜೊತೆಗೆ ಬಂದಿರುವ ಮೂವರಿಗೂ ಸಚಿವ ಸ್ಥಾನ ಸಿಗಲಿದೆ. ಆರ್.ಶಂಕರ್, ಮುನಿರತ್ನ ಹಾಗೂ ಎಂಟಿಬಿ ನಾಗರಾಜ್ ಸಚಿವರಾಗಲಿದ್ದಾರೆ. ಸಿಎಂ ಅವರು ಎಲ್ಲಿಯೂ ನಮ್ಮನ್ನು ಕಡೆಗಣಿಸಿಲ್ಲ. ಸಿ.ಪಿ ಯೋಗೇಶ್ವರ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ನಮಗೆ ಗೊತ್ತಿಲ್ಲ. ನಮ್ಮ ಜತೆಗೆ ಬಂದವರ ಬಗ್ಗೆ ಮಾತ್ರ ನಾವು ಹೇಳಬಹುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.