ETV Bharat / state

ರಮೇಶ್ ಜಾರಕಿಹೊಳಿ​ ಶಾಸಕ ಸ್ಥಾನಕ್ಕೆ ರಾಜೀನಾಮೆ ವಿಚಾರ ನನಗೆ ಗೊತ್ತಿಲ್ಲ: ಸತೀಶ್​ ಜಾರಕಿಹೊಳಿ

ಲಾಕ್ಡೌನ್ ಓಪನ್ ವಿಚಾರವಾಗಿ ಮಾತನಾಡಿದ ಅವರು ಲಾಕ್​​ಡೌನ್ ತಕ್ಷಣವೇ ಓಪನ್​ ಆಗೋದಿಲ್ಲ. ಸರ್ಕಾರ ಹಂತ ಹಂತವಾಗಿ ಓಪನ್ ಮಾಡಲಿ. ಸರ್ಕಾರಕ್ಕೆ ಹಂತ ಹಂತವಾಗಿ ಲಾಕ್ಡೌ​ನ್ ಓಪನ್ ಮಾಡುವಂತೆ ನಾವು ಕೂಡ ಸಲಹೆ ನೀಡಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಹೇಳಿದ್ದಾರೆ.

satish-jarkiholi
ಸತೀಶ್​ ಜಾರಕಿಹೊಳಿ
author img

By

Published : Jun 21, 2021, 7:55 PM IST

ಚಿಕ್ಕೋಡಿ: ಗೋಕಾಕ್​ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎನ್ನುವ ವಿಚಾರ ನನಗೆ ಗೊತ್ತಿಲ್ಲ. ರಾಜೀನಾಮೆ ಕೊಡುವರು ಅವರು, ಈ‌ ಬಗ್ಗೆ ಅವರನ್ನೇ ಕೇಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಹೇಳಿದ್ದಾರೆ.

ಸತೀಶ್​ ಜಾರಕಿಹೊಳಿ

ಹುಕ್ಕೇರಿ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿ ತಮ್ಮ ಕ್ಷೇತ್ರದ ಅಭಿವೃದ್ದಿ ಕಾರ್ಯಗಳ ಕುರಿತು ಮಾಹಿತಿ ಪಡೆದರು. ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲವು ಸಮಸ್ಯೆಗಳು ಕಂಡು ಬಂದಿವೆ. ಹೀಗಾಗಿ, ಜೂ.28 (ಸೋಮವಾರ) ರಂದು ತಾಲೂಕಿನ ನರೇಗಾ ಯೋಜನೆಯ ಕುರಿತು ಪ್ರತ್ಯೇಕ ಸಭೆ ನಡೆಸಲಾಗುವುದು ಎಂದರು.

ಹುಕ್ಕೇರಿ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಆಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಬಗ್ಗೆ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ಶೀಘ್ರವೇ ಪ್ರತ್ಯೇಕ ಸಭೆ ನಡೆಸಿ ಸಮಸ್ಯೆ ಬಗೆಹರಿಸುತ್ತೇವೆ. ಪ್ರವಾಹದಿಂದ ಜಿಲ್ಲೆಯಲ್ಲಿ ತೊಂದರೆಯಾಗದಂತೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಈ ಬಗ್ಗೆ ನಾವು ಕೂಡ ಈಗಾಗಲೇ ಸಲಹೆ ಕೊಟ್ಟಿದ್ದೇವೆ. ಜಿಲ್ಲಾಡಳಿತ ಮುಂದೆ ಎದುರಾಗಬಹುದಾದ ಪ್ರವಾಹದ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲಿದೆ ಎಂದರು.

ಓದಿ:ಪಾಕ್​ನಲ್ಲಿದೆ 2 ಸಾವಿರ ವರ್ಷದ ಪುರಾತನ ಯೋಗ ವಿಶ್ವವಿದ್ಯಾಲಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.