ETV Bharat / state

ಯಡಿಯೂರಪ್ಪ ನನ್ನ ಕ್ಷೇತ್ರಕ್ಕೆ ಅನುದಾನ ಕೊಟ್ರು, ಅದಕ್ಕೆ ಕಾಂಗ್ರೆಸ್​ ಬಿಟ್ಟೆ.. ಶ್ರೀಮಂತ ಪಾಟೀಲ್​

author img

By

Published : Nov 15, 2019, 11:25 PM IST

ನಾನು ಬಿಜೆಪಿಗೆ ಬರುವ ಮುಂಚೆಯೇ ಸಿಎಂ ಯಡಿಯೂರಪ್ಪ ನನ್ನ ಕ್ಷೇತ್ರಕ್ಕೆ ಅನುದಾನ ನೀಡಿದ್ದಾರೆ ಎಂದು ಕಾಗವಾಡ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್​ ಹೇಳಿದ್ದಾರೆ.

ಯಡಿಯೂರಪ್ಪ ನನ್ನ ಕ್ಷೇತ್ರಕ್ಕೆ ಅನುದಾನ ಕೊಟ್ರು, ಅದಕ್ಕೆ ಕಾಂಗ್ರೆಸ್​ ಬಿಟ್ಟೆ

ಚಿಕ್ಕೋಡಿ: ಸರಿಯಾದ ಅನುದಾನ, ಕೆಲಸಗಳಿಗೆ ಸ್ಪಂದನೆ ಸಿಗದೆ ನಾನು‌ ಕಾಂಗ್ರೆಸ್​ ಪಕ್ಷದಿಂದ ಹೊರಗಡೆ ಬಂದಿದ್ದೇನೆ ಎಂದು ಕಾಗವಾಡ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್​ ಹೇಳಿದ್ದಾರೆ.

ಯಡಿಯೂರಪ್ಪ ನನ್ನ ಕ್ಷೇತ್ರಕ್ಕೆ ಅನುದಾನ ಕೊಟ್ರು, ಅದಕ್ಕೆ ಕಾಂಗ್ರೆಸ್​ ಬಿಟ್ಟೆ..
ಬೆಂಗಳೂರಿನಿಂದ ಆಗಮಿಸಿದ ಬಳಿಕ ಕಾಗವಾಡ ತಾಲೂಕಿನ ಕೆಂಪವಾಡ ಸ್ವಗೃಹದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ನಲ್ಲಿದ್ದಾಗ ನನ್ನ ಕ್ಷೇತ್ರದ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗಲಿಲ್ಲ. ನನ್ನ ಕ್ಷೇತ್ರಕ್ಕೆ ಖೆಳೆಗಾಂವ ಏತ ನೀರಾವರಿ, ಕೃಷ್ಣಾ ನದಿ ಬತ್ತಿದ್ದಾಗ ಮಹಾರಾಷ್ಟದಿಂದ ಕೃಷ್ಣಾ ನದಿಗೆ 4 ಟಿಎಂಸಿ ನೀರು, ಕೆರೆ ತುಂಬಿಸುವ ಯೋಜನೆ ಹಾಗೂ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ನೀಡಲು ಸಿಎಂ ಯಡಿಯೂರಪ್ಪ ಒಪ್ಪಿಗೆ ಸೂಚಿಸಿದ್ದಾರೆ. ಈ ಎಲ್ಲ ಕೆಲಸಗಳಾದರೆ ನನ್ನ ಕಾಗವಾಡ ಕ್ಷೇತ್ರವನ್ನು ಕನಸಿನ ಕಾಗವಾಡ ಕ್ಷೇತ್ರವನ್ನಾಗಿ ಮಾಡಲು ಸಾಧ್ಯ ಎಂದು ಹೇಳಿದರು. ಅನರ್ಹ ಮಾಡಿದ ವಿಚಾರವಾಗಿ ಮಾತನಾಡಿದ ಅವರು, ಸ್ಪೀಕರ್​ ತಪ್ಪು ಮಾಹಿತಿ ರವಾನಿಸಿದ್ದರು. ಅದು ರದ್ದಾಗುತ್ತದೆ ಎಂದು ತಿಳದಿದ್ದೆವು. ಆದರೆ, ಅದು ರದ್ದಾಗಲಿಲ್ಲ. ನ್ಯಾಯಾಲಯ ಚುನಾವಣೆಗೆ ಅವಕಾಶ ಮಾಡಿಕೊಟ್ಟಿದೆ. ಮತ್ತೆ ಜನರ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು, ಮತದಾರರು ಮತ್ತೆ ನನ್ನ ಅರ್ಹ ಶಾಸಕನಾಗಿ ಮಾಡುತ್ತಾರೆ. ಸೋಮವಾರ ನಾನು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ ಎಂದಿದ್ದಾರೆ

Intro:ನನಗೆ ಸರಿಯಾದ ಅನುದಾನ, ಕೆಸಗಳಿಗೆ ಸ್ಪಂದನೆ ಸಿಗದೆ ನಾನು‌ ಕಾಂಗ್ರೇಸ್ ಪಕ್ಷದಿಂದ ಹೊರಗಡೆ ಬಂದಿದ್ದೇನೆ : ಶ್ರೀಮಂತ ಪಾಟೀಲBody:

ಚಿಕ್ಕೋಡಿ :

ನಾನು ಕಾಂಗ್ರೆಸ್ ಪಕ್ಷದಲ್ಲಿ ಒಂದುವರೆ ವರ್ಷದಿಂದ ಅಭಿವೃದ್ಧಿ ಕೆಲಸ ಮಾಡಬೇಕು‌ ಅಂತಾ ನಿರ್ಧಾರ ಮಾಡಿದ್ದೆ. ಆದರೆ, ನನಗೆ ಸರಿಯಾದ ಅನುದಾನ, ಕೆಸಗಳಿಗೆ ಸ್ಪಂದನೆ ಸಿಗದೆ ನಾನು‌ ಕಾಂಗ್ರೇಸ್ ಪಕ್ಷದಿಂದ ಹೊರಗಡೆ ಬಂದಿದ್ದೇನೆ ಎಂದು ಕಾಗವಾಡ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಹೇಳಿದರು.

ಬೆಂಗಳೂರಿನಿಂದ ಆಗಮಿಸಿದ ಬಳಿಕ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡ ಸ್ವಗೃಹದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ನನ್ನ ಕ್ಷೇತ್ರದ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡಿಲ್ಲ. ಆದರೆ, ನಾನು ಬಿಜೆಪಿಗೆ ಬರುವ ಮುಂಚೆನೆ ಸಿಎಂ ಯಡಿಯೂರಪ್ಪ ಅವರು ನನ್ನ ಕ್ಷೇತ್ರಕ್ಕೆ ಅನುದಾನ ನೀಡಿದ್ದಾರೆ.

ಈಗಾಗಲೇ ನನ್ನ ಕ್ಷೇತ್ರಕ್ಕೆ ಖೆಳೆಗಾಂವ ಏತ ನೀರಾವರಿ, ಕೃಷ್ಣಾ ನದಿ ಬತ್ತಿದ್ದಾಗ ಮಹಾ ರಾಜ್ಯದಿಂದ ಕೃಷ್ಣಾ ನದಿಗೆ 4 ಟಿಎಂಸಿ ನೀರು, ಕೆರೆ ತುಂಬಿಸುವ ಯೋಜನೆ ಹಾಗೂ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ನೀಡಲು ಈಗಾಗಲೇ ಸಿಎಂ ಒಪ್ಪಿಗೆ ನೀಡಿದ್ದಾರೆ. ಈ ಎಲ್ಲ ಕೆಲಸಗಳಾದರೆ ನನ್ನ ಕಾಗವಾಡ ಕ್ಷೇತ್ರವನ್ನು ಕನಸಿನ ಕಾಗವಾಡ ಕ್ಷೇತ್ರವನ್ನು ಮಾಡಲು ಸಾಧ್ಯ ಎಂದು ಹೇಳಿದರು.

ಅನರ್ಹ ಮಾಡಿದ ವಿಚಾರವಾಗಿ ಮಾತನಾಡಿದ ಅವರು, ಸ್ಪೀಕರ ತಪ್ಪು ಮಾಹಿತಿ ರವಾನಿಸಿದ್ದರು. ಅದು ರದ್ದಾಗುತ್ತದೆ ಎಂದು ತಿಳದಿದ್ದೇವು. ಆದರೆ, ಅದು ರದ್ದಾಗಲಿಲ್ಲ ಚುನಾವಣೆಗೆ ಅವಕಾಶ ಮಾಡಿಕೊಟ್ಟಿದೆ. ಮತ್ತೆ ಜನರ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಮತದಾರರು ಮತ್ತೆ ನನ್ನ ಅರ್ಹ ಶಾಸಕನಾಗಿ ಮಾಡುತ್ತಾರೆ. ಸೋಮವಾರದಂದು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇವೆ‌ ಎಂದು ಹೇಳಿದರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.