ETV Bharat / state

ಇತಿಹಾಸ: ಬ್ರಿಟಿಷರನ್ನೇ ನಡುಗಿಸಿದ್ದ ವೀರ ಮಹಿಳೆ ರಾಣಿ ಚೆನ್ನಮ್ಮ... - ಸಂಗೊಳ್ಳಿ ರಾಯಣ್ಣ

ಬ್ರಿಟಿಷರೇ ದೇಶ ಬಿಟ್ಟು ತೊಲಗಿ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದ್ದು ರಾಣಿ ಚೆನ್ನಮ್ಮ. ಬ್ರಿಟಿಷ್ ಕಲೆಕ್ಟರನ್ನೇ ಹತ್ಯೆ ಮಾಡುವ ಮೂಲಕ ಆಂಗ್ಲರನ್ನು ನಡುಗಿಸಿದ್ದ ವೀರ ರಾಣಿ ಚೆನ್ನಮ್ಮ ಇತಿಹಾಸ ತಿಳಿಯೋಣ.

ರಾಣಿ ಚೆನ್ನಮ್ಮ
ರಾಣಿ ಚೆನ್ನಮ್ಮ
author img

By

Published : Oct 24, 2021, 5:38 PM IST

ಬೆಳಗಾವಿ: ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಸೆಣಸಾಡಿದ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಹೆಂಡತಿಯಾಗಿದ್ದ ಚೆನ್ನಮ್ಮ, ತನ್ನ ಪುಟ್ಟ ರಾಜ್ಯದ ರಕ್ಷಣೆಗಾಗಿ ಆಂಗ್ಲರ ವಿರುದ್ಧ ಹೋರಾಡಿದರು. ಯುದ್ಧದಲ್ಲಿ ಅವರು ಸೈನ್ಯ ಮುನ್ನಡೆಸಿದ ರೀತಿ, ಧೈರ್ಯ, ಸಾಹಸ, ಕಿಚ್ಚು ಇಂದಿಗೂ ಅಜರಾಮರ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕು ಚೆನ್ನಮ್ಮನ ಕಿತ್ತೂರು ಎಂದೇ ಪ್ರಸಿದ್ಧಿ ಪಡೆದಿದೆ.

1857 ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬೆಳಗಾವಿಯ ಕಿತ್ತೂರು ತನ್ನದೇ ಆದ ಕೊಡುಗೆ ನೀಡಿದೆ. ಬ್ರಿಟಿಷರಿಂದ ದೇಶವನ್ನು ಮುಕ್ತಿಗೊಳಿಸಲು ಹೋರಾಡಿದ ಅನೇಕರಲ್ಲಿ ಚೆನ್ನಮ್ಮ ಪ್ರಮುಖರು. ಕಿತ್ತೂರಿನ ಇತಿಹಾಸವು ಕ್ರಿಸ್ತಶಕ 1586 ರಿಂದ ಶುರುವಾದರೂ, ಪ್ರಸಿದ್ಧಿ ಪಡೆದಿದ್ದು ಮಾತ್ರ ಬ್ರಿಟಿಷರ ವಿರುದ್ಧದ ಹೋರಾಟದಿಂದ.

ಮಲ್ಲಸರ್ಜ ಪತ್ನಿಯಾಗಿ ರಾಣಿ ಚೆನ್ನಮ್ಮ ಕಿತ್ತೂರು ಸಂಸ್ಥಾನಕ್ಕೆ ಬರುತ್ತಾರೆ. ಆದರೆ, ಕೆಲವೇ ವರ್ಷಗಳಲ್ಲಿ ಮಲ್ಲಸರ್ಜ ದೇಸಾಯಿ, ಪೇಶ್ವೆಗಳ ಬಂಧನಕ್ಕೆ ಒಳಗಾಗಿ ಮೂರು ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಅನುಭವಿಸುತ್ತಾರೆ. ಪುಣೆಯಿಂದ ತಪ್ಪಿಸಿಕೊಂಡು ವರುವ ವೇಳೆ ಮಲ್ಲಸರ್ಜ ಅರಬಾವಿ ಬಳಿ ಮೃತಪಟ್ಟರು. ಅನಿವಾರ್ಯವಾಗಿ ರಾಣಿ ಚೆನ್ನಮ್ಮ ಸಂಸ್ಥಾನದ ರಾಜ್ಯಭಾರ ವಹಿಸಿಕೊಳ್ಳಬೇಕಾಗಿತ್ತು.

ಕಿತ್ತೂರು ಸಂಸ್ಥಾನದ ಉಳಿವಿಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ರಾಣಿ ಚೆನ್ನಮ್ಮ ಇತಿಹಾಸ!

ಮಾಸ್ತಮರಡಿ ಗೌಡ ಮನೆತನದ ಶಿವಲಿಂಗ ರುದ್ರ ಸರ್ಜನನ್ನು ದತ್ತು ಪಡೆದು ಆತನನ್ನು ರಾಜರ ಆಸ್ಥಾನದಲ್ಲಿ ಕೂರಿಸಿ ಚೆನ್ನಮ್ಮ ಆಡಳಿತ ನಡೆಸುತ್ತಾರೆ. ಆದರೆ, ಇದೇ ಸಂದರ್ಭದಲ್ಲಿ ಬ್ರಿಟಿಷರು ದತ್ತು ಮಕ್ಕಳಿಗೆ ಯಾವುದೇ ಹಕ್ಕಿಲ್ಲ ಅನ್ನೋ ನಿಯಮ ಜಾರಿಗೆ ತರುತ್ತಾರೆ. ಈ ನಿಯಮವನ್ನು ಕಿತ್ತೂರು ಸಂಸ್ಥಾನದ ಮೇಲೂ ಜಾರಿಗೊಳಿಸುತ್ತಾರೆ. ಇದರಿಂದ ಕುಪಿತಗೊಂಡ ಚೆನ್ನಮ್ಮ ಹಾಗೂ ಬ್ರಿಟಿಷರ ನಡುವೆ ಸಂಘರ್ಷವುಂಟಾಗುತ್ತದೆ.

ಆಗ ಧಾರವಾಡ ಕಲೆಕ್ಟರ್ ಆಗಿದ್ದ ಥ್ಯಾಕರೆ, ಕಿತ್ತೂರಿಗೆ ಬಂದು ಮಲ್ಲಪ್ಪ ಶೆಟ್ಟಿ, ವೆಂಕಟರಾವ್ ಅವರನ್ನು ಸಂಸ್ಥಾನದ ಆಡಳಿತ ಅಧಿಕಾರಿಯನ್ನಾಗಿ ನೇಮಕ ಮಾಡುತ್ತಾರೆ. ಕಿತ್ತೂರಿನ ಭಂಡಾರಕ್ಕೆ ಬೀಗಮುದ್ರೆ ಹಾಕುತ್ತಾನೆ. ಆಗಲೇ ಬ್ರಿಟಿಷರ ವಿರುದ್ಧ ಗಟ್ಟಿ ಧ್ವನಿಯೊಂದು ಹೊರ ಹೊಮ್ಮಿತ್ತು. ಯಾವಾಗ ಬ್ರಿಟಿಷ್ ಅಧಿಕಾರಿಯ ಮಾತಿಗೆ ಚೆನ್ನಮ್ಮ ಸೊಪ್ಪು ಹಾಕಲಿಲ್ಲವೋ, ಆಗ ಅವರು ಚೆನ್ನಮ್ಮನ ವಿರುದ್ಧ ತಿರುಗಿಬೀಳುತ್ತಾರೆ. ಕಿತ್ತೂರು ಸಾಮ್ರಾಜ್ಯದ ಮೇಲೆ ಹಿಡಿತ ಸಾಧಿಸಲು ಇನ್ನಿಲ್ಲದ ಯತ್ನ ಆರಂಭಿಸುತ್ತಾರೆ.

ಅಕ್ಟೋಬರ್ 21, 1824 ಥ್ಯಾಕರೆ ಕಿತ್ತೂರಿಗೆ ಬರುತ್ತಾನೆ. ಮೂರನೇ ದಿನ ಅಂದರೆ, ಅಕ್ಟೋಬರ್ 23 ರಂದು ಕೋಟೆಯ ಮೇಲೆ ತೋಪು ಹಾರಿಸಲು ತನ್ನ ಸೈನ್ಯಕ್ಕೆ ಅಪ್ಪಣೆ ಕೊಟ್ಟ. ಥಟ್ಟನೆ ತೆಗೆದ ಕೋಟೆಯ ಬಾಗಿಲಿನಿಂದ ಸಾವಿರಾರು ಕಿತ್ತೂರು ವೀರರು ಸರ್ದಾರ ಗುರುಸಿದ್ಧಪ್ಪನವರ ಮುಂದಾಳತ್ವದಲ್ಲಿ ಥ್ಯಾಕರೆಯ ಸೈನ್ಯದ ಮೇಲೆ ಮುಗಿಬಿದ್ದರು. ಚೆನ್ನಮ್ಮ ರಾಣಿಯ ಅಂಗರಕ್ಷಕರ ಗುಂಡಿಗೆ ಥ್ಯಾಕರೆ ಬಲಿಯಾದ. ಜತೆಗೆ ಆತನ ಜತೆಗೆ ಬಂದಿದ್ದ ಸ್ಟೀವನ್ಸನ್ ಹಾಗೂ ಈಲಿಯಟ್ ಸೆರೆಯಾಳಾದರು.

ದೇಶದ್ರೋಹಿಗಳಾದ ಕನ್ನೂರು ವೀರಪ್ಪ, ಸರದಾರ ಮಲ್ಲಪ್ಪ ಅವರೂ ಮೃತಪಟ್ಟರು. ಥ್ಯಾಕರೆ ಹತ್ಯೆ ಬ್ರಿಟಿಷ್ ಮೇಲಾಧಿಕಾರಿಗಳಿಗೆ ಆಘಾತವನ್ನುಂಟು ಮಾಡಿತು. ತಕ್ಷಣ ಹೆಚ್ಚಿನ ಸೇನೆಯನ್ನು ಕಳಿಸಿದ ಆಂಗ್ಲರು, ಕಿತ್ತೂರು ಸಂಸ್ಥಾನ ವಶಕ್ಕೆ ಮುಂದಾದರು. ಈ ವೇಳೆ ಸರ್ದಾರ ಗುರು ಸಿದ್ಧಪ್ಪ, ರಾಣಿ ಚೆನ್ನಮ್ಮ ಸೇರಿ ಅನೇಕರು ಸೆರೆಯಾದರು. ಹೀಗೆ ಸೆರೆಯಾದ ಚೆನ್ನಮ್ಮಳನ್ನು ಬೈಲಹೊಂಗಲದಲ್ಲಿ ಬಂಧಿ ಮಾಡಲಾಗುತ್ತದೆ. ಆದರೆ, ಕಿತ್ತೂರಿಗೆ ಸ್ವಾತಂತ್ರ್ಯ ತಂದುಕೊಡಲು ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ ಸೇರಿ ಅನೇಕರು ನಿರಂತರವಾಗಿ ಪ್ರಯತ್ನ ನಡೆಸುತ್ತಾರೆ.

ರಾಯಣ್ಣ ಗೆರಿಲ್ಲಾ ಯುದ್ಧದಿಂದ ಬ್ರಿಟಿಷರನ್ನು ಹಿಮ್ಮೆಟ್ಟಿಸಲು ವೀರಾವೇಷದಿಂದ ಹೋರಾಡುತ್ತಾರೆ. ಬಂಧಿಯಾದ ನಾಲ್ಕು ವರ್ಷಗಳ ಬಳಿಕ ಚೆನ್ನಮ್ಮ ಜೈಲಲ್ಲಿಯೇ ಮೃತಪಡುತ್ತಾರೆ. ಇತ್ತ ರಾಯಣ್ಣ ಮತ್ತು ಸಂಗಡಿಗರು ಸ್ವಾತಂತ್ರ್ಯಕ್ಕಾಗಿ ನಿರಂತರ ಹೋರಾಟ ಮಾಡಿದ್ರೂ ಫಲ ನೀಡಲಿಲ್ಲ. ಆದರೆ, ನಮ್ಮವರೇ ರಾಯಣ್ಣನನ್ನು ಹಿಡಿದು ಬ್ರಿಟಿಷರಿಗೆ ಒಪ್ಪಿಸುತ್ತಾರೆ. ರಾಯಣ್ಣ ಸೇರಿ ಅನೇಕ ಸಂಗಡಿಗರನ್ನು ಬ್ರಿಟಿಷರು ಗಲ್ಲಿಗೇರಿಸುತ್ತಾರೆ.

ಹೀಗೆ ರಾಣಿ ಚೆನ್ನಮ್ಮಳ ಹೋರಾಟ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.