ETV Bharat / state

ನೀವು ಯಾರ್​ ಬೇಕಾದ್ರೂ ಆಗಿ, ನಾನು ಒಳಬಿಡಲ್ಲ ಎಂದ ಅಧಿಕಾರಿ: ಮತಎಣಿಕೆ ಕೇಂದ್ರದ ಬಳಿ ಹೈಡ್ರಾಮಾ

author img

By

Published : Jun 15, 2022, 9:51 PM IST

Updated : Jun 15, 2022, 10:28 PM IST

ಮಾಜಿ ಸಚಿವ ಎ.ಬಿ.ಪಾಟೀಲ್, ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲಾನ್ ಬಿಸ್ವಾಸ್ ನಡುವೆ ಮಾತಿನ ಚಕಮಕಿ ನಡೆದಿದೆ.

ಮತ ಎಣಿಕೆ ಕೇಂದ್ರದ ಬಳಿ ಹೈ ಡ್ರಾಮಾ
ಮತ ಎಣಿಕೆ ಕೇಂದ್ರದ ಬಳಿ ಹೈ ಡ್ರಾಮಾ

ಬೆಳಗಾವಿ: ಬೆಳಗಾವಿ ವಾಯುವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಗೆಲುವು ಸಾಧಿಸಿದ್ದು, ಜ್ಯೋತಿ ಕಾಲೇಜಿನ ಮತ ಎಣಿಕೆ ಕೇಂದ್ರದ ಬಳಿ ಹೈಡ್ರಾಮಾ ನಡೆದಿದೆ. ಕಾಂಗ್ರೆಸ್ ನಾಯಕನನ್ನು ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ಕೊಡದ ಪ್ರಾದೇಶಿಕ ಆಯುಕ್ತರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮಾಜಿ ಸಚಿವ ಎ.ಬಿ.ಪಾಟೀಲ್, ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲಾನ್ ಬಿಸ್ವಾಸ್ ನಡುವೆ ಮಾತಿನ ಚಕಮಕಿ ನಡೆದಿದೆ. ನೀವು ಯಾರ್​ ಬೇಕಾದ್ರೂ ಆಗಿ, ನಾನು ಒಳಗೆ ಬಿಡಲ್ಲ ಎಂದು ಬಿಸ್ವಾಸ್ ಹೇಳಿದ್ದಕ್ಕೆ ಗಲಾಟೆ ನಡೆದಿದೆ. ನಂತರ ಎ.ಬಿ ಪಾಟೀಲ್ ಅವರನ್ನು ಜಾರಕಿಹೊಳಿ ಹೊರಗೆ ಕರೆದುಕೊಂಡು ಬಂದಿದ್ದಾರೆ.

ಗೇಟ್‌ನಲ್ಲಿ ಪ್ರಮಾಣ ಪತ್ರ ಸ್ವೀಕರಿಸಿದ ಪ್ರಕಾಶ ಹುಕ್ಕೇರಿ: ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಗೆಲುವು ಸಾಧಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಶಾಸಕರು, ಕಾರ್ಯಕರ್ತರ ಪ್ರಯತ್ನದ‌ ಫಲವಾಗಿ‌ ಎರಡು ಗೆಲುವು ಸಾಧಿಸಿದ್ದೇವೆ, ಬೆಳಗಾವಿ ಜಿಲ್ಲೆಯಲ್ಲಿ ಯಾವ ಗಾಳಿ ಬೀಸಿದೆ ಅಂತಾ ನೀವೇ ಅರ್ಥ ಮಾಡಿಕೊಳ್ಳಿ ಎಂದು ಹುಕ್ಕೇರಿ ಹೇಳಿದ್ದಾರೆ.

ಈ ವೇಳೆ ಗೋವಿಂದ ಕಾರಜೋಳಗೆ ತಿರುಗೇಟು ನೀಡಿದ ಪ್ರಕಾಶ ಹುಕ್ಕೇರಿ, ಕಾರಜೋಳಗೆ ಎಷ್ಟು ವಯಸ್ಸಾಗಿದೆ?. ಕಾರಜೋಳ ಏನು ಇಪ್ಪತೈದು ವಯಸ್ಸಿನವನಾ? ಎಂದು ಕಿಡಿಕಾರಿದರು.

ಪ್ರಕಾಶ ಹುಕ್ಕೇರಿಗೆ ಕಾರಜೋಳ ಮುದಿ ಎತ್ತು ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ನಾವು ಅದಕ್ಕೆ ಉತ್ತರ ಕೊಟ್ಟಿದ್ದೇವೆ, ಕೆಲಸ‌ ಮಾಡಲು ವಯಸ್ಸು ಮುಖ್ಯವಲ್ಲ, ಅನುಭವ ಮುಖ್ಯ ಎಂದಿದ್ದಾರೆ. ಯಾರು ಮಾತನಾಡಿದ್ದಾರೆ ಅವರಿಗೆ ಪ್ರಕಾಶ ಹುಕ್ಕೇರಿ ಉತ್ತರ ಕೊಟ್ಟಿದ್ದಾರೆ. ಶಿಕ್ಷಕರ ಪದವೀಧರರು ಮೊದಲ ಬಾರಿಗೆ ಕಾಂಗ್ರೆಸ್​​ಗೆ ಒಲವು ತೋರಿದ್ದಾರೆ, ನಾಲ್ಕರಲ್ಲಿ ಎರಡು ಗೆದ್ದಿದ್ದೇವೆ. ಈ ಚುನಾವಣೆ ನಮಗೆ ಬೋನಸ್ ಇದ್ದಂಗೆ, ಕಾರ್ಯಕರ್ತರ ಸಪೋರ್ಟ್‌ನಿಂದ ಗೆಲುವು ಸುಲಭವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಒಂಟಿ ಮನೆ ಯೋಜನೆ ಪುನರಾರಂಭಕ್ಕೆ ನಿರ್ಧಾರ, ಶೀಘ್ರದಲ್ಲೇ ಆದೇಶ: ಸಿಎಂ ಬೊಮ್ಮಾಯಿ

Last Updated : Jun 15, 2022, 10:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.