ETV Bharat / state

ಗೋಕಾಕ್​ನಲ್ಲಿ ಕೇವಲ ಒಂದು ಗಂಟೆ ಮಳೆ; ಕೆರೆಯಂತಾದ ರಸ್ತೆಗಳು!

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ ಕೇವಲ ಒಂದು ಗಂಟೆ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಗಳೂ ಜಲಾವೃತವಾಗಿ ಸಂಚಾರ ವ್ಯತ್ಯಯ ಉಂಟಾಗಿದೆ.

heavy-rains-in-gokak
ಗೋಕಾಕ್​ನಲ್ಲಿ ಕೇವಲ ಒಂದು ಗಂಟೆ ಮಳೆ; ಕೆರೆಯಂತಾದ ರಸ್ತೆಗಳು!
author img

By

Published : Sep 5, 2022, 6:46 PM IST

ಬೆಳಗಾವಿ : ಜಿಲ್ಲೆಯ ಗೋಕಾಕ್​ ತಾಲೂಕಿನಲ್ಲಿ ನಿರಂತರವಾಗಿ ಕೇವಲ ಒಂದು ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಗೆ ಜನರು ಹೈರಾಣಾಗಿದ್ದು, ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಗೋಕಾಕ್​ ನಗರ ಹಾಗೂ ತಾಲೂಕಿನ ಮಾಣಿಕವಾಡಿ ಗ್ರಾಮದಲ್ಲಿ 20ಕ್ಕೆ ಹೆಚ್ಚು ಮನೆಗಳು ಜಲಾವೃತವಾಗಿವೆ. ಧಾರಾಕಾರ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ಪರಿಣಾಮ, ಮಳೆ ನೀರನ್ನು ಮಾಣಿಕವಾಡಿ ಜನರು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ‌. ಕೇವಲ ಒಂದೇ ಒಂದು ಗಂಟೆಯ ಮಳೆಗೆ ರಸ್ತೆಗಳ ಸಹ ಸಂಪೂರ್ಣ ಕೆರೆಯಂತಾಗಿದ್ದು, ಬೈಕ್ ಹಾಗೂ ವಾಹನ ಸವಾರರು ಪರದಾಡಿದರು. ಅಕಾಲಿಕ ಮಳೆಯ ಅಬ್ಬರಕ್ಕೆ ಗೋಕಾಕ್​ ಹಾಗೂ ಮಾಣಿಕವಾಡಿ ಗ್ರಾಮದ ಜನರು ಬೆಚ್ಚಿಬಿದ್ದಿದ್ದು, ಸದ್ಯ ಮಳೆ ನಿಂತರೂ ಸಹ ಮಳೆಯ ನೀರು ಹರಿದು ಬರುತ್ತಿದೆ.

ಗೋಕಾಕ್​ನಲ್ಲಿ ಕೇವಲ ಒಂದು ಗಂಟೆ ಮಳೆ; ಕೆರೆಯಂತಾದ ರಸ್ತೆಗಳು!

ಮತ್ತೊಂದೆಡೆ ಗೋಕಾಕ್​ ಹಾಗೂ ಫಾಲ್ಸ್ ನಡುವೆ ಗುಡ್ಡ ಕುಸಿತವಾಗಿದ್ದು, ಬೆಟ್ಟದಿಂದ ಬೃಹತ್ ಗಾತ್ರದ ಕಲ್ಲು ಬಂಡೆಗಳು ರಸ್ತೆಗಳ ಮೇಲೆ ಬಂದು ಬಿದ್ದಿವೆ. ರಸ್ತೆಯ ಮೇಲೆ ಕಲ್ಲುಬಂಡೆಗಳು ಬಿದ್ದರೂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳದೇ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.

ಸದ್ಯ ಅದೇ ಮಾರ್ಗದಲ್ಲಿ ಜನರು ಕೂಡ ಓಡಾಟ ನಡೆಸುತ್ತಿದ್ದಾರೆ. ಏನಾದರೂ ಅನಾಹುತ ಸಂಭವಿಸಿದರೆ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ‌ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ವಿಧಾನಸೌಧಕ್ಕೂ ನುಗ್ಗಿದ ಮಳೆ ನೀರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.