ETV Bharat / state

ಚಿಕ್ಕೋಡಿ ಉಪ ವಿಭಾಗದ ಮೂರು ಸೇತುವೆಗಳು ಜಲಾವೃತ: ಜನರಿಗೆ ತಪ್ಪದ ಸಂಕಷ್ಟ

author img

By

Published : Oct 15, 2020, 7:41 PM IST

ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಚಿಕ್ಕೋಡಿ ಉಪ ವಿಭಾಗದ ಮೂರು ಸೇತುವೆಗಳು ಮುಳಗಡೆಯಾಗಿದ್ದು, ಆರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

Heavy rainfall in Chikkodi
ಚಿಕ್ಕೋಡಿ ಉಪವಿಭಾಗದ ಮೂರು ಸೇತುವೆಗಳು ಜಲಾವೃತ

ಚಿಕ್ಕೋಡಿ: ಕೃಷ್ಣಾ ನದಿ ನೀರಿನ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಕೃಷ್ಣಾ ನದಿಯ ಉಪ ನದಿಗಳಾದ ದೂಧಗಂಗಾ ಹಾಗೂ ವೇದಗಂಗಾ ನದಿ ನೀರಿನಲ್ಲೂ ಹೆಚ್ಚಳ ಕಂಡಿದೆ. ಹೀಗಾಗಿ, ಚಿಕ್ಕೋಡಿ ಉಪವಿಭಾಗದ ಮೂರು ಸೇತುವೆಗಳು ಮುಳಗಡೆಯಾಗಿದ್ದು, ಆರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

34,000 ಕ್ಯೂಸೆಕ್​​​ಗಿಂತ ಹೆಚ್ಚು ಕೃಷ್ಣಾ ನದಿ ನೀರಿನ ಒಳ ಹರಿವಿನ ಪ್ರಮಾಣ ದಾಖಲಾಗಿದ್ದು, ಈ ನದಿಗೆ ಅಡ್ಡಲಾಗಿರುವ ಕಲ್ಲೋಳ - ಯಡೂರ ಬ್ರಿಜ್, ದೂದಗಂಗಾ‌ ನದಿಗೆ ಅಡ್ಡಲಾಗಿರುವ ಮಲಿಕವಾಡ - ದತ್ತವಾಡ ಹಾಗೂ ವೇದಗಂಗಾಗೆ ಅಡ್ಡಲಾಗಿರುವ ಬಾರವಾಡ - ಕೊನೂರು ಸೇತುವೆ ಜಲಾವೃತಗೊಂಡಿವೆ.

ಮೂರು ಸೇತುವೆಗಳು ಜಲಾವೃತ

ಸೇತುವೆಗಳು ಮುಳುಗಡೆಯಾದ ಕಾರಣ ಜನರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುತ್ತಿದ್ದಾರೆ. ಇನ್ನು ಮೂರು ದಿನ ಮಳೆ ಮುಂದುವರೆಯಲಿರುವ ಪರಿಣಾಮ ನೀರಿನ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ನದಿ ತೀರದಲ್ಲಿ ತಾಲೂಕು ಆಡಳಿತದಿಂದ ಕಟ್ಟೆಚ್ಚರ ವಹಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.