ಅಥಣಿ: ಕೊರೊನಾ ವೈರಸ್ ಭೀತಿಯ ನಡುವೆ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಸುತ್ತಮುತ್ತ ಆಲಿಕಲ್ಲು ಸಮೇತ ಭಾರಿ ಮಳೆಯಾಗಿದ್ದು ಕೆಲವು ಜನರ ಮನೆ, ಗುಡಿಸಲು ಹಾಗು ಬೆಳೆಗೆ ಹಾನಿಯಾಗಿದೆ.
ಮಳೆಗೆ ಕೋಹಳ್ಳಿ ಗ್ರಾಮದ ನಿವಾಸಿ ಮಹಾಂತೇಶ ಪುಂಡಿಪಲ್ಲೆ ಎಂಬವರ ಮನೆ ಸಂಪೂರ್ಣವಾಗಿ ಬಿದ್ದಿದೆ. ಮನೆಯೊಳಗಿದ್ದ ಸದಸ್ಯರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಮನೆಯ ಸಾಮಗ್ರಿಗಳು ಗಾಳಿಗೆ ತೂರಿಕೊಂಡು ಹೋಗಿದ್ದರಿಂದ ಕುಟುಂಬ ಸಂಕಷ್ಟದಲ್ಲಿದೆ.
ಅಥಣಿ ತಹಶೀಲ್ದಾರ್ ದುಂಡಪ್ಪ ಕುಮಾರ್ ಪ್ರತಿಕ್ರಿಯಿಸಿ, ಮನೆ ಹಾಗೂ ಬೆಳೆ ಹಾನಿಯ ಸರ್ವೆ ನಡೆಸಿ ವರದಿ ನೀಡುವಂತೆ ಗ್ರಾಮ ಲೆಕ್ಕಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದರು.