ಬೆಳಗಾವಿ: ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಒಂಟಿ ಕಣ್ಣಿರುವ ಆಂಜನೇಯನ ವಿಗ್ರಹವನ್ನು ನೋಡಲು ಜನ ಮುಗಿಬೀಳುತ್ತಿದ್ದಾರೆ.
ಕಾಂತ್ರಿವೀರ ಸಂಗೊಳ್ಳಿ ರಾಯಣ್ಣನನ್ನು ನೇಣುಗಂಬಕ್ಕೇರಿಸಿದ ನಂದಗಡ ಗ್ರಾಮ ಈ ಅಚ್ಚರಿಗೆ ಸಾಕ್ಷಿಯಾಗಿದೆ. ಹನುಮನ ವಿಗ್ರಹಕ್ಕೆ ಒಂದೇ ಕಣ್ಣಿದ್ದು, ಶುಭ ಶಕುನವೋ, ಅಪಶಕುನವೋ ಎಂಬ ಆತಂಕ ನಂದಗಡ ಹಾಗೂ ಸುತ್ತಮುತ್ತಲಿನ ಜನತೆಯಲ್ಲಿ ಮನೆ ಮಾಡಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಆಲದ ಮರದ ಕೆಳಗೆ ಈ ಹನುಮನ ವಿಗ್ರಹ ಇದೆ. ಆಂಜನೇಯ ದರ್ಶನಕ್ಕೆ ಪ್ರತಿ ಶನಿವಾರ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯ ಸಾವಿರಾರು ಜನರು ಬರುತ್ತಾರೆ.