ಬೆಳಗಾವಿ: ಅಂತರ್ಜಲ ಕುಸಿತದಿಂದಾಗಿ ಹಲವು ವರ್ಷಗಳಿಂದ ನಿಷ್ಪ್ರಯೋಜಕವಾಗಿದ್ದ ಜಿಲ್ಲೆಯ ಎಂ ಕೆ ಹುಬ್ಬಳ್ಳಿ ಹೊರವಲಯದ ಕೊಳವೆ ಬಾವಿಯಲ್ಲಿ ಇದೀಗ ಏಕಾಏಕಿ ನೀರು ಧುಮ್ಮಿಕ್ಕಿ ಹೊರ ಬರುತ್ತಿದ್ದು, ಸ್ಥಳೀಯರ ಅಚ್ಚರಿಗೆ ಕಾರಣವಾಗಿದೆ.
ಸತತ ಬರದಿಂದ ಅಂತರ್ಜಲ ಮಟ್ಟ ಕುಸಿತಗೊಂಡು ಬೇಸಿಗೆ ಸಮಯದಲ್ಲಿ ಬೋರ್‌ವೆಲ್‌ಗಳು ಸ್ಥಗಿತಗೊಳ್ಳುವುದು ಈ ಭಾಗದಲ್ಲಿ ಸಾಮಾನ್ಯ. ಈಗ ಏಕಾಏಕಿ ಬೋರ್‌ವೆಲ್ ಉಕ್ಕಿ ಹರಿಯುತ್ತಿದ್ದು ಸ್ಥಳೀಯ ಅಚ್ಚರಿ ಉಂಟು ಮಾಡಿದೆ.
ಜಿಲ್ಲೆಯಾದ್ಯಂತ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಮಲಪ್ರಭಾ ನದಿ ತುಂಬಿ ಹರಿಯುತ್ತಿದೆ. ಪರಿಣಾಮ ನದಿ ತೀರದ ಗ್ರಾಮಗಳಲ್ಲಿ ಅಂತರ್ಜಲ ಮಟ್ಟವೂ ಹೆಚ್ಚಾಗಿದೆ. ಹೀಗಾಗಿ ಬೋರ್ ವೇಲ್ ಗಳಲ್ಲಿ ನೀರು ಧುಮ್ಮಿಕ್ಕಿ ಹೊರಬರುತ್ತಿದೆ ಅನ್ನೋದು ಇಲ್ಲಿನ ಸ್ಥಳೀಯರ ಮಾತು.