ETV Bharat / state

ಸರ್ಕಾರ ರೈತ ವಿರೋಧಿ ‌ನೀತಿ ಬಿಟ್ಟು, ರೈತಸ್ನೇಹಿ ಕೆಲಸ ಮಾಡಲಿ: ಸಿದ್ದರಾಮಯ್ಯ - infectious disease

ರೈತರ ಕಷ್ಟಗಳನ್ನು ಆಲಿಸಿ ನಷ್ಟದಲ್ಲಿರುವವರಿಗೆ ಸೂಕ್ತ ಪರಿಹಾರ ನೀಡುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದರು.

govt-should-leave-anti-farmer-policy-and-work-farmer-friendly-siddaramaiah
ಸರ್ಕಾರ ರೈತ ವಿರೋಧಿ ‌ನೀತಿ ಬಿಟ್ಟು, ರೈತ ಸ್ನೇಹಿ ಕೆಲಸ ಮಾಡಬೇಕು: ಸಿದ್ದರಾಮಯ್ಯ
author img

By

Published : Dec 28, 2022, 10:21 PM IST

ಬೆಳಗಾವಿ: ರೈತರ ಕಷ್ಟಕ್ಕೆ ಸರ್ಕಾರ ಧಾವಿಸಬೇಕು. ಸರ್ಕಾರ ರೈತ ವಿರೋಧಿ ನೀತಿ ಬಿಟ್ಟು ರೈತಸ್ನೇಹಿಯಾಗಿ ಕೆಲಸ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ವಿಧಾನಸಭೆಯಲ್ಲಿ ನಿಯಮ 69 ಅಡಿ ಚರ್ಚೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಸರ್ಕಾರ ರೈತರಿಗೆ ಯಾವುದೇ ಪರಿಹಾರ ಕೊಟ್ಟಿಲ್ಲ. ಕೃಷಿ ಭಾಗ್ಯಕ್ಕೆ 800 ಕೋಟಿ ರೂ. ಕೊಟ್ಟಿದ್ದೆವು, ಅದನ್ನು ನಿಲ್ಲಿಸಿಬಿಟ್ಟಿದ್ದಾರೆ. ಒಟ್ಟು ಬಜೆಟ್​ನಲ್ಲಿ ಬಿಜೆಪಿ ಸರ್ಕಾರ ಕೃಷಿಗೆ ಕೊಟ್ಟಿರುವುದು ಶೇ.4.2ರಷ್ಟು. ನಮ್ಮ ಆಡಳಿತದಲ್ಲಿ ಶೇ. 4.7ರಷ್ಟು ಕೊಟ್ಟಿದ್ದೆವು. ನಮಗಿಂತ ಹೆಚ್ಚಿಗೆ ಕೊಡಲು ಆಗಿಲ್ಲ. ನಾವು ಕೃಷಿಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ ಎಂದು ಬಿಜೆಪಿ ಹೇಳುವುದು ಡೋಂಗಿತನ ಎಂದು ವಾಗ್ದಾಳಿ ನಡೆಸಿದರು.

5 ವರ್ಷದ ಹಿಂದೆ ನಮ್ಮ ಸರ್ಕಾರವಿದ್ದಾಗ ಹೈನುಗಾರಿಕೆಯಲ್ಲಿ ಪ್ರತೀ ಲೀಟರ್‌ ಹಾಲಿಗೆ 32 ರೂ ಪ್ರೋತ್ಸಾಹ ಧನ ಸಿಗುತ್ತಿತ್ತು. ಈಗ ಪ್ರೋತ್ಸಾಹ ಧನವೂ ಸೇರಿ ಲೀಟರ್​ಗೆ 35, 37 ರೂಪಾಯಿ ಸಿಗುತ್ತಿದೆ. ಆದರೆ ಹಿಂಡಿ, ಬೂಸ ಮತ್ತು ಮೇವಿನ ಬೆಲೆ ನೂರಾರು ಪಟ್ಟು ಹೆಚ್ಚಾಗಿದೆ. ಹಾಲಿನ ಬೆಲೆಯಲ್ಲಿ 30% ಹೆಚ್ಚಾಗಿದೆ.

2017-18ರಲ್ಲಿ 49 ಕೆ.ಜಿ ಬೂಸಾದ ಬೆಲೆ 450ರೂ ಇದ್ದದ್ದು ಈಗ 1,300 ರಿಂದ 1,350 ರೂ. ಆಗಿದೆ. 30 ಕೆ.ಜಿ ಹಿಂಡಿಯ ಬೆಲೆ 400 ರೂ. ಇದ್ದದ್ದು ಈಗ 1,400 ರೂಪಾಯಿಗೆ ಹೆಚ್ಚಾಗಿದೆ. ಕೆಎಂಎಫ್‌ ನವರು ಕೊಡುವ ಫೀಡ್‌ ಬೆಲೆ ಕಳೆದ ವಾರ 200 ರೂ. ಜಾಸ್ತಿಯಾಗಿದೆ. ಇವುಗಳ ಜೊತೆಗೆ ಚರ್ಮ ಗಂಟು ರೋಗ ಬಂದಿದೆ, ಇದರಿಂದ ಸುಮಾರು 25,000 ರಾಸುಗಳು ಸಾವನ್ನಪ್ಪಿವೆ.

ಪಶು ಸಂಗೋಪನೆ ಇಲಾಖೆಯ ನಿರ್ದೇಶಕರು ಹೇಳಿದ ಉತ್ತರದಲ್ಲಿ ಸುಮಾರು 15 ಲಕ್ಷ ಜಾನುವಾರು ವ್ಯತ್ಯಾಸ ಇದೆ. ಒಮ್ಮೆ ನೀಡಿರುವ ಉತ್ತರದಲ್ಲಿ ಸುಮಾರು 1 ಕೋಟಿ 29 ಲಕ್ಷ ಜಾನುವಾರುಗಳಿವೆ ಎಂದಿದ್ದರು. ಎರಡು ತಿಂಗಳ ನಂತರ ನೀಡಿದ ಉತ್ತರದಲ್ಲಿ 1 ಕೋಟಿ 14 ಲಕ್ಷ ಜಾನುವಾರುಗಳಿವೆ ಎಂದು ಹೇಳಿದ್ದರು. ಉಳಿದ 15 ಲಕ್ಷ ಜಾನುವಾರುಗಳು ಏನಾಯಿತು ಎಂದು ಪ್ರಶ್ನಿಸಿದರೆ ಸರ್ಕಾರದಿಂದ ಉತ್ತರ ಬಂದಿಲ್ಲ ಎಂದರು.

94 ಲಕ್ಷ ಲೀಟರ್‌ ಹಾಲಿನ ಉತ್ಪಾದನೆ ಈಗ 76 ಲಕ್ಷ ಲೀಟರ್​ಗೆ ಇಳಿಕೆ ಕಂಡಿದೆ. ಚರ್ಮಗಂಟು ರೋಗದಿಂದಾಗಿ ನಿತ್ಯ 2 ಲಕ್ಷ ಲೀಟರ್‌ ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ಇದಕ್ಕೆ ರೈತರು ಹೊಣೆಯಲ್ಲ, ಸರ್ಕಾರವೇ ಹೊಣೆ. ನಿತ್ಯ 6 ಕೋಟಿ 66 ಲಕ್ಷ ಹಣ ರೈತರಿಗೆ ನಷ್ಟವಾಗುತ್ತಿದೆ. ಹೀಗಾಗಿ ಹೈನುಗಾರಿಕೆಯಿಂದ ಜನ ವಿಮುಖರಾಗುತ್ತಿದ್ದಾರೆ.

ಹಾಲು ಉತ್ಪಾದಕರ ಬದುಕು ದುಸ್ಥರ: ಲಂಪಿ ಸ್ಕಿನ್‌ ಡಿಸೀಸ್‌ (ಚರ್ಮ ಗಂಟು ರೋಗ) ಒಂದು ಸಾಂಕ್ರಾಮಿಕ ರೋಗ. ರಾಜ್ಯದಲ್ಲಿ 2 ಲಕ್ಷದ 38 ಸಾವಿರ ಜಾನುವಾರುಗಳಿಗೆ ಬಂದಿದೆ. 1 ಕೋಟಿ 29 ಲಕ್ಷ ಜಾನುವಾರಗಳ ಪೈಕಿ 69 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಅಂದರೆ ಶೇ.50ರಷ್ಟು ಜಾನುವಾರುಗಳಿಗೆ ಇನ್ನೂ ಲಸಿಕೆ ನೀಡಬೇಕಿದೆ. ಹಿಂಡಿ, ಬೂಸ, ಸಾಂಕ್ರಾಮಿಕ ರೋಗಗಳ ಕಾರಣಕ್ಕೆ ನಿತ್ಯ 18 ಲಕ್ಷ ಲೀಟರ್‌ ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ಇದರಿಂದ ಸುಮಾರು 25 ಲಕ್ಷ ಹಾಲು ಉತ್ಪಾದಕರ ಬದುಕು ದುಸ್ಥರವಾಗಿದೆ ಎಂದು ವಿವರಿಸಿದರು.

ಸರ್ಕಾರ ಪ್ರಚಾರ ಪಡೆಯುತ್ತಿದೆ: ರಾಜ್ಯದಲ್ಲಿ ಸುಮಾರು 15 ಲಕ್ಷ ಹೆಕ್ಟೇರ್​ಗಳಲ್ಲಿ ಕಬ್ಬು ಬೆಳೆಯನ್ನು ಬೆಳೆಯುತ್ತಾರೆ. ಸುಮಾರು 25 ಲಕ್ಷ ರೈತ ಕುಟುಂಬಗಳು ಇದರ ಮೇಲೆ ಅವಲಂಬಿತರಾಗಿದ್ದಾರೆ. ರಾಜ್ಯದಲ್ಲಿ ಸುಮಾರು 6.5 ಕೋಟಿ ಟನ್‌ ಕಬ್ಬು ಉತ್ಪಾದನೆಯಾಗುತ್ತದೆ. 2012-13ರಲ್ಲಿ ಪ್ರತೀ ಟನ್​ಗೆ ಎಫ್​​ಆರ್​​ಪಿ ಬೆಲೆ 1700 ರೂ. ಇತ್ತು, 2017-18ರಲ್ಲಿ ಎಫ್‌ಆರ್‌ಪಿ ಬೆಲೆ 2550 ರೂ. ಇತ್ತು, 2022-23ರಲ್ಲಿ ಎಫ್‌ಆರ್‌ಪಿ ಬೆಲೆ 3050 ರೂ. ಆಗಿದೆ. ಇಳುವರಿ 10.25 ಎಂದು ನಿಗದಿ ಮಾಡಲಾಗಿದೆ. ಒಂದು ಕಡೆ ಇಳುವರಿಯನ್ನು ಹೆಚ್ಚಿಸಿ, ಮತ್ತೊಂದು ಕಡೆ ಸರ್ಕಾರ 150 ರೂ. ಹೆಚ್ಚಿಗೆ ನೀಡಿದೆ ಎಂದು ಪ್ರಚಾರ ಪಡೆಯುತ್ತಿದೆ ಎಂದರು.

ಅಡಿಕೆ ಬೆಳೆಗಾರರನ್ನು ಸರ್ಕಾರವೇ ನಾಶ ಮಾಡಲು ಹೊರಟಂತಿದೆ: ಸರ್ಕಾರ ಭೂತಾನ್‌, ಬರ್ಮಾ, ವಿಯೆಟ್ನಾಂನಿಂದ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಬರ್ಮಾದಿಂದ ಕದ್ದು ಅಡಿಕೆ ಸಾಗಾಟ ಮಾಡಲಾಗುತ್ತಿದೆ. ಸುಮಾರು 17,000 ಟನ್‌ ಅಡಿಕೆ ಆಮದು ಮಾಡಿಕೊಳ್ಳಲಾಗಿದೆ. ಇದರಿಂದ 55,000 ಒಂದು ಕ್ವಿಂಟಲ್​ಗೆ ಇದ್ದ ಬೆಲೆ ಇಂದು 35,000– 40,000ಕ್ಕೆ ಇಳಿದಿದೆ.

ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗ: ರಾಜ್ಯದಲ್ಲಿ ಸುಮಾರು 5.7 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯಾಗುತ್ತದೆ. ಸುಮಾರು 10 ರಿಂದ 11 ಲಕ್ಷ ಟನ್‌ ಅಡಿಕೆ ಉತ್ಪಾದನೆ ಆಗುತ್ತದೆ. ಸುಮಾರು 10 ಲಕ್ಷ ರೈತರು ಇದರ ಮೇಲೆ ಅವಲಂಬಿತರಾಗಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಅಡಿಕೆಗೆ ಹಳದಿ ರೋಗ ಬಂದ ಸಂದರ್ಭದಲ್ಲಿ 80 ಕೋಟಿ ರೂ. ಪರಿಹಾರವಾಗಿ ನೀಡಿದ್ದೆ. ಕ್ವಿಂಟಲ್​ಗೆ 15,000 ನಷ್ಟವಾಗಿದೆ ಎಂದು ಭಾವಿಸಿದರೂ ಒಟ್ಟು ನಷ್ಟ ಆಗುವುದು 15,000 ಕೋಟಿ ರೂಪಾಯಿ. ಸರ್ಕಾರ ಕೂಡಲೇ ಎಲೆಚುಕ್ಕಿ ರೋಗದಿಂದ ಭಾದಿತವಾಗಿರುವ ಅಡಿಕೆ ಬೆಳೆಗಾರರಿಗೆ ಪರಿಹಾರ ನೀಡಬೇಕು, ಭೂತಾನ್​ನಿಂದ ಬರುತ್ತಿರುವ ಅಡಿಕೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಇದನ್ನೂ ಓದಿ: ಕೈದಿಗಳ ಸಂಬಳ ಮೂರು ಪಟ್ಟು ಜಾಸ್ತಿ..! ರಾಜ್ಯದ ಕೈದಿಗಳಿಗೆ ಈಗ ದೇಶದಲ್ಲೆ ಹೆಚ್ಚು ಸಂಬಳ..!!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.