ETV Bharat / state

ಡಬಲ್ ಇಂಜಿನ್​ ಸರ್ಕಾರ ಏನು ಮಾಡುತ್ತಿಲ್ಲ: ಜಿ ಪರಮೇಶ್ವರ್ ಆರೋಪ - ಡಬಲ್ ಇಂಜಿನ್ ಸರ್ಕಾರ‌

ಮುಂದಿನ ದಿನಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ನಿವೃತ್ತ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ 3 ವರ್ಷ ಡಬಲ್ ಇಂಜಿನ್ ಸರ್ಕಾರ‌ ಏನು ಮಾಡಿಲ್ಲ ಎಂದು ಬಿಜೆಪಿ ವಿರುದ್ಧ ಮಾಜಿ ಡಿಸಿಎಂ ಜಿ ಪರಮೇಶ್ವರ್ ವಾಗ್ದಾಳಿ ನಡೆಸಿದರು.

g parameshwar
ಜಿ ಪರಮೇಶ್ವರ್
author img

By

Published : Dec 23, 2022, 12:46 PM IST

ಬೆಳಗಾವಿ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಜಿ ಪರಮೇಶ್ವರ್

ಬೆಳಗಾವಿ: ಕೋವಿಡ್ ಎಂಬುದು ರಾಷ್ಟ್ರದ ಸಮಸ್ಯೆ. ಈಗಾಗಲೇ ಕೇಂದ್ರ ಸರ್ಕಾರ ನಿಯಮಗಳನ್ನು ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಕೂಡ‌ ನಿಯಮಗಳನ್ನು ಜಾರಿಗೆ ತಂದಿದ್ದು, ಯಾರು ಭಯ ಪಡುವ ಅಗತ್ಯವಿಲ್ಲ ಎಚ್ಚರಿಕೆಯಿಂದ ಇರಬೇಕು ಎಂದು ಮಾಜಿ ಡಿಸಿಎಂ ಜಿ ಪರಮೇಶ್ವರ್ ಹೇಳಿದರು.

ಬೆಳಗಾವಿ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅವಧಿ ಪೂರ್ಣ ಚುನಾವಣೆ ಬರುತ್ತದೆ ಎಂದು ಅನ್ನಿಸುವುದಿಲ್ಲ. ಮುಂದಿನ ಮೂರು ತಿಂಗಳಲ್ಲಿ ಚುನಾವಣೆ ಬರುತ್ತದೆ. ಹಲವು ಇಲಾಖೆಗಳು ಚುನಾವಣೆಗೆ ತಯಾರಾಗಬೇಕು. ಮತದಾರರ ಪಟ್ಟಿಯಲ್ಲಿ ಹಲವು ಗೊಂದಲಗಳು ಕಾಣಿಸಿಕೊಂಡಿರುವುದರಿಂದ ಅವಧಿ ಮುಂಚೆಯೇ ಚುನಾವಣೆ ಬರುತ್ತದೆ ಎಂದು ಅನ್ನಿಸುವುದಿಲ್ಲ ಎಂದರು.

ಕಾಂಗ್ರೆಸ್​ನಲ್ಲಿ ತಮ್ಮನ್ನು ಕಡೆಗಣಿಸುತ್ತಿರುವ ವಿಚಾರದ ಕುರಿತು ಮಾತನಾಡಿ, ನಮ್ಮಲ್ಲಿ ಯಾರನ್ನು ಕಡೆಗಣಿಸಲಾಗಿಲ್ಲ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ನಾಯಕತ್ವ ಇದೆ. ಎಲ್ಲ ನಾಯಕರು ಜೊತೆಯಾಗಿ ಜಿಲ್ಲೆಗಳ ಪ್ರವಾಸ ಮಾಡುತ್ತೇವೆ. ಒಟ್ಟಿಗೆ ಹೋಗುವ ನಿರ್ಧಾರ‌ ಮಾಡ್ತಿವಿ ಎಂದು ಹೇಳಿದರು. ಸದಾಶಿವ ಆಯೋಗ ವರದಿ ಜಾರಿ ಕುರಿತು, ಹಿಂದೆ ಆಗಿರೋದನ್ನ ಬಿಟ್ಟು‌ ಬಿಡೋಣ. ಮುಂದಿನ ದಿನಗಳಲ್ಲಿ ಅವರಿಗೆ ನ್ಯಾಯ ಒದಗಿಸೋದ್ರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ: ಉಗ್ರನನ್ನು ಅಮಾಯಕ ಅಂತ ಡಿಕೆಶಿ ಹೇಳಿಲ್ಲ, ಅವರ ಅರ್ಥಾನೇ ಬೇರೆ: ಮಾಜಿ ಡಿಸಿಎಂ ಜಿ ಪರಮೇಶ್ವರ್

ಬಿಜೆಪಿ ಈ ಹಿಂದೆ ಒಳಮೀಸಲಾತಿ ಕೊಟ್ಟಿಲ್ಲ, ನಾವು ಕೊಡ್ತಿವಿ ಅಂದಿದ್ರು. ಆದ್ರೆ ಮೂರು ವರ್ಷ ಆದರೂ ಕೊಟ್ಟಿಲ್ಲ. ಡಬಲ್ ಇಂಜಿನ್ ಸರ್ಕಾರ‌ ಏನು ಮಾಡಿಲ್ಲ. ಈಗ ಕಮಿಟಿ ಮಾಡಿ‌ ಡ್ರಾಮಾ ಮಾಡ್ತಿದ್ದಾರೆ. ಇದು‌ ಚುನಾವಣೆ ಗಿಮಿಕ್ ಅಷ್ಟೇ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: 2023ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ರಚನೆ.. ಜಿ. ಪರಮೇಶ್ವರ್ ಅಧ್ಯಕ್ಷ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.