ಕಿತ್ತೂರು ಚೆನ್ನಮ್ಮ ಬ್ರಿಟಿಷರ ವಿರುದ್ಧ ಘರ್ಜಿಸಿದ್ದ ಸಿಂಹಿಣಿ.. ಶೂರ ಸಂಗೊಳ್ಳಿ ರಾಯಣ್ಣ, ಚೆನ್ನಮ್ಮಳ ಬಲಗೈಬಂಟ. ಹೆಣ್ಣಾದ್ರೇ ಚೆನ್ನಮ್ಮ, ಗಂಡಾದ್ರೇ ರಾಯಣ್ಣನಂತಿರಬೇಕೆಂದು ಈಗಲೂ ಕಿತ್ತೂರು ಸೀಮೆ ಜನ ಬಯಸ್ತಾರೆ. ಅಷ್ಟರಮಟ್ಟಿಗೆ ಚೆನ್ನಮ್ಮ-ಧೀರ ರಾಯಣ್ಣ ಜನಮಾನಸದಲಿದಾರೆ.
ಮನ್ರೋ ಒಪ್ಪಂದಂತೆ ಕಪ್ಪ ಕೊಡ್ಬೇಕೆಂದ ಥ್ಯಾಕ್ರೇಗೆ.. ಕಿತ್ತೂರೇನು ನಿಮ್ಮಪ್ಪ-ತಾತಂದಿರು ಗಳಿಸಿಟ್ಟ ಆಸ್ತಿಯೇ,ಕಪ್ಪ ಕೇಳುವ ನಿನ್ನ ನಾಲಿಗೆಯೇ ಸೀಳಿ ಹೋದೀತು ಎಚ್ಚರ. ಬದುಕೋ ಆಸೆ ನಿನಗಿಲ್ಲ, ನಿನ್ನ ಉಳಿಸೋ ಆಸೆ ನಮಗೂ ಇಲ್ಲ.. ಅಂತ ತಾಯಿ ಚೆನ್ನಮ್ಮ ಗುಡುಗಿದ ರೀತಿಗೆ ಥಾಕ್ರೇ ಥರ ಥರಾ ಥರಗುಟ್ಟಿದ್ದ.
ಬ್ರಿಟಿಷರ ವಿರುದ್ಧ ಸಿಡಿದೆದ್ದ ಮೊದಲ ನಾರಿ
ಬೆಳಗಾವಿಯ ಕಿತ್ತೂರು ದೇಶದಲ್ಲಿ ಬೆಳಕಿಗೆ ಬಂದಿದ್ದೇ ಕಿತ್ತೂರು ಸಂಸ್ಥಾನದ ಚೆನ್ನಮ್ಮ-ರಾಯಣ್ಣನಿಂದ. ಬ್ರಿಟಿಷರ ವಿರುದ್ಧ ಸಿಡಿದೆದ್ದ ದೇಶದ ಮೊದಲ ವೀರ ನಾರಿ ಚೆನ್ನಮ್ಮಾಜಿ, ಸ್ವಾತಂತ್ರ-ಸ್ವಾಭಿಮಾನದ ಪ್ರತಿರೂಪ. 1585ರಿಂದ 1824ರ ಅವಧಿಯಲ್ಲಿ ಬಂದ ಕಿತ್ತೂರು ಸಂಸ್ಥಾನದ 12 ದೇಸಾಯರಲ್ಲಿ, ಕಾಕತಿಯ ದೇಸಾಯಿ ದೂಳಪ್ಪಗೌಡ-ಪದ್ಮಾವತಿಯವರ ಏಕಮಾತ್ರ ಪುತ್ರಿ ಚೆನ್ನಮ್ಮ.
ಎಳೆ ವಯಸ್ಸಲ್ಲೇ ಕುದುರೆ ಸವಾರಿ, ಬಿಲ್ವಿದ್ಯೆ ಕರಗತ ಮಾಡ್ಕೊಂಡಿದ್ದ Kitturin ಮಲ್ಲಸರ್ಜನ,ಚೆನ್ನಮ್ಮಳ ಕೈಹಿಡಿದ. ಬ್ರಿಟಿಷರ ಒಡೆದಾಳುವ ನೀತಿಗೆ ಕೆರಳಿ ಆಂಗ್ಲರ ವಿರುದ್ಧದ ಹೋರಾಟಕ್ಕೆ ಶಪಥ ಗೈದ. Visuals Flow.. ಮಲ್ಲಸರ್ಜನ ಟಿಪ್ಪುವಿನ ಸಮಕಾಲೀನವ. 1782ರಲ್ಲಿ ಸಿಂಹಾಸನವೇರಿದ್ದ ಸಮರ್ಥ ಆಡಳಿತಗಾರ. 1816ರಲ್ಲಿ ಮಲ್ಲಸರ್ಜನನ ಕಾಲವಾದ ತರುವಾಯ, ಹಿರಿಯ ದೇಸಾಯಿಣಿ ರುದ್ರಮ್ಮಳ ಮಗ ಶಿವಲಿಂಗಸರ್ಜನ ಪಟ್ಟವೇರಿದ. ಆದರೆ, ರೋಗ ಪೀಡಿತನಾದ ಈತನೂ ಮೃತಪಟ್ಟ. ಆಗಲೇ ದತ್ತಕ ವಿಷಯ ಪ್ರಸ್ತಾಪವಾದಾಗ, ಬ್ರಿಟಿಷ್ ಕಂಪನಿ ಸರ್ಕಾರ ಒಪ್ಪಲಿಲ್ಲ.
ವಿಜಯದಶಮಿ ದಿನವೇ ಥ್ಯಾಕರೇ ರುಂಡ ಚೆಂಡಾಡಿದ ಧೀರೆ
ಧಾರವಾಡದ ಬ್ರಿಟಿಷ್ ಕಲೆಕ್ಟರ್ ಥ್ಯಾಕರೇ ಕಿತ್ತೂರಿನ ರಾಜಭಂಡಾರಕ್ಕೆ ಬೀಗ ಹಾಕಿದ. ಇದರಿಂದ ಕೆರಳಿದ್ದ ಚೆನ್ನಮ್ಮ ಥ್ಯಾಕರೆ ವಿರುದ್ಧ ಯುದ್ಧ ಸಾರಿದ್ದಳು. ಅವತ್ತು 1824ರ ಅಕ್ಟೋಬರ್ 23. ಥಾಕ್ರೇ ಹೇಳಿದ್ದರೂ ಕಿತ್ತೂರಿನ ಕೋಟೆ ಬಾಗಿಲು ತೆರೆಯಲಿಲ್ಲ. ಕೊನೆಗೆ ಥಾಕ್ರೇ ಯುದ್ಧ ಸಾರಿಬಿಟ್ಟ. ಕುಗ್ಗದ ಚೆನ್ನಮ್ಮ, ಬಲಗೈ ಬಂಟ ರಾಯಣ್ಣ ಮತ್ತು ಅಮಟೂರು ಬಾಳಪ್ಪನ Jate Seri ಯುದ್ಧ ಮಾಡಿದಳು. ವಿಜಯದಶಮಿ ದಿನವೇ ಥ್ಯಾಕರೇ ರುಂಡ ಚೆಂಡಾಡಲಾಯ್ತು. ಬ್ರಿಟಿಷರ ವಿರುದ್ಧ ಜಯ ಸಾಧಿಸಿದ್ದ ನೆನಪಿಗಾಗೇ ಈಗಲೂ ಪ್ರತಿವರ್ಷ ಅಕ್ಟೋಬರ್ 23ರಿಂದ 25ರವರೆಗೆ ಕಿತ್ತೂರು ಉತ್ಸವ ನಡೆಯುತ್ತೆ.
ಬ್ರಿಟಿಷರ ನಡುಗಿಸಿದ ರಾಯಣ್ಣ
ಆದರೆ, 2ನೇ ಯುದ್ಧದಲ್ಲಿ ಚೆನ್ನಮ್ಮ ಸೋತು ಬ್ರಿಟಿಷರಿಗೆ ಸೆರೆಯಾದಳು. ರಾಯಣ್ಣ ಗೆರಿಲ್ಲ ಯುದ್ಧದಿಂದ ಬ್ರಿಟಿಷರನ್ನ ಹಿಮ್ಮೆಟ್ಟಿಸಲು ವೀರಾವೇಶದಿಂದ ಹೋರಾಡಿದ. ಆದರೆ, ನಮ್ಮವರೇ ಬ್ರಿಟಿಷರಿಗೆ ಆತನನ್ನ ಹಿಡಿದುಕೊಟ್ಟರು. ಅಲ್ಲಿಗೆ ಕಿತ್ತೂರು ಸಂಸ್ಥಾನ ಸ್ವತಂತ್ರಗೊಳ್ಳುವ ಕನಸು ಕಮರಿತು. ರಾಯಣ್ಣ ಅತ್ತ ಗಲ್ಲಿಗೇರಿದ್ರೇ, ಇತ್ತ ತಾಯಿ ಚೆನ್ನಮ್ಮ 1829 ಫೆಬ್ರವರಿ 2ರಂದು ಬೈಲಹೊಂಗಲದ ಕಾರಾಗೃಹದಲ್ಲಿ ಉಸಿರು ಚೆಲ್ಲಿದಳು.
ಈಗಲೂ ಅಳಿದುಳಿದ ಈ ಕೋಟೆ ಕಿತ್ತೂರು ಸಂಸ್ಥಾನದ ಇತಿಹಾಸದ ಕುರುಹು. ನಾರಿಯರೂ ವೀರಾವೇಶದಿಂದ ನಾಡಿಗಾಗಿ ಹೋರಾಡಿದ ಧೀರೋದಾತ್ತ ಪರಂಪರೆ ನಮ್ಮದು. ಚೆನ್ನಮ್ಮ-ರಾಯಣ್ಣನ ಈ ಪರಾಕ್ರಮದ ಈ ಪರಂಪರೆ ಸಾವಿರ ಶತಮಾನ ಕಳೆದರೂ ಅಳಿಯದು..