ಬೆಳಗಾವಿ: ಕಾಲು ಜಾರಿ ಬಿದ್ದು ನಾಲ್ವರು ಯುವತಿಯರು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದಲ್ಲಿರುವ ಕಿತವಾಡ ಫಾಲ್ಸ್‌ನಲ್ಲಿ ಇಂದು ನಡೆದಿದೆ. ಬೆಳಗಾವಿಯ ಉಜ್ವಲ್ ನಗರದ ಆಸೀಯಾ ಮುಜಾವರ್(17), ಅನಗೋಳದ ಕುದ್‌ಶೀಯಾ ಹಾಸ್‌ಂ ಪಟೇಲ್(20), ಝಟ್‌ಪಟ್ ಕಾಲೋನಿಯ ರುಕ್ಕಶಾರ್ ಭಿಸ್ತಿ(20) ಹಾಗೂ ತಸ್ಮಿಯಾ(20) ಮೃತ ಯುವತಿಯರೆಂದು ತಿಳಿದು ಬಂದಿದೆ.
ಬೆಳಗಾವಿಯಿಂದ ಕಿತವಾಡ ಫಾಲ್ಸ್‌ಗೆ ಸುಮಾರು 40 ಯುವತಿಯರು ಶನಿವಾರ ಬೆಳಗ್ಗೆ ಟ್ರಿಪ್ಗೆ ತೆರಳಿದ್ದರು. ಸೆಲ್ಫಿ ತೆಗೆದುಕೊಳ್ಳುವ ವೇಳೆ ಐವರು ಯುವತಿಯರು ಕಾಲು ಜಾರಿ ಬಿದ್ದಿದ್ದಾರೆ. ಐವರು ಯುವತಿಯರ ಪೈಕಿ ನಾಲ್ವರು ಮೃತಪಟ್ಟಿದ್ದು ಓರ್ವಳ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡ ಯುವತಿಯನ್ನ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಸದ್ಯ ಯುವತಿಯರ ಮೃತದೇಹಗಳನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಕರೆತರಲಾಗಿದ್ದು ಆಸ್ಪತ್ರೆ ಬಳಿ ಪೊಲೀಸ್ ಬಿಗಿ ಭದ್ರತೆ ಮಾಡಿಕೊಳ್ಳಲಾಗಿದೆ. ಮೃತ ಯುವತಿಯರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ಹಿನ್ನಲೆ: ಕಾಮತ್ ಗಲ್ಲಿಯ ಮದರಸಾದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಮಾರು 40 ಯುವತಿಯರು ಇಂದು ಬೆಳಗ್ಗೆ ಕಿತವಾಡ ಫಾಲ್ಸ್‌ಗೆ ಪ್ರವಾಸಕ್ಕೆ ತೆರಳಿದ್ದರು. ಫಾಲ್ಸ್ ಬಳಿ ತೆರಳಿದ ಬಳಿಕ ಒಬ್ಬರಿಗೊಬ್ಬರು ಕೈ ಹಿಡಿದು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಆಯ ತಪ್ಪಿ ಫಾಲ್ಸ್ ಮೇಲಿಂದ ಬಿದಿದ್ದಾರೆ. ಪರಿಣಾಮ ನಾಲ್ವರು ಮೃಪಟ್ಟರೆ ಓರ್ವ ಯುವತಿಯ ಸ್ಥಿತಿ ಗಂಭೀರವಾಗಿದೆ.
ಇದನ್ನೂ ಓದಿ: ತುರ್ತು ಚಿಕಿತ್ಸೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆ ಆಂಬ್ಯುಲೆನ್ಸ್ ಇಂಧನ ಖಾಲಿ.. ರಸ್ತೆಯಲ್ಲೇ ರೋಗಿ ಸಾವು
ಕಾಲು ಜಾರಿ ಬೀಳುತ್ತಿದ್ದ ಒಂದು ಹುಡುಗಿಯನ್ನು ರಕ್ಷಣೆ ಮಾಡಲು ಹೋದಾಗ ನಾಲ್ವರು ಯುವತಿಯರು ಫಾಲ್ಸ್‌ನಲ್ಲಿ ಬಿದ್ದಿದ್ದಾರೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಮೃಪಟ್ಟಿದ್ದಾರೆ. ಮತ್ತೋರ್ವ ಯುವತಿ ಗಂಭೀರವಾಗಿ ಗಾಯವಾಗಿದ್ದು ಅವರನ್ನು ಕೆಎಲ್ಇ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಡಿಸಿಪಿ ರವೀಂದ್ರ ಗಡಾದಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಅರ್ಧಗಂಟೆಯ ಹಿಂದೆ ನಾಲ್ಕು ಬಾಡಿಗಳನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ತರಲಾಗಿದೆ. ಅದರಲ್ಲಿ15-16ರಿಂದ ವಯಸ್ಸಿನ ಮುಸ್ಲಿಂ ಮಕ್ಕಳು ಸೇರಿದ್ದಾರೆ. ಆಸ್ಪತ್ರೆ ಬಳಿ ಎಲ್ಲ ರೀತಿಯಲ್ಲೂ ಭದ್ರತೆ ಒದಗಿಸಲಾಗಿದೆ. ಮೃತರೆಲ್ಲರು ಮದರಾಸ್ ವಿದ್ಯಾರ್ಥಿಗಳಾಗಿದ್ದಾರೆ. ಈಜು ಬಾರದಿರುವವರು ನೀರಿನ ಹತ್ರ ಹೋಗಬಾರದು. ಇಂತಹ ಟ್ರಿಪ್ಗೆ ತೆರಳಬೇಕೆಂದರೆ ಓರ್ವ ಹಿರಿಯರ ಮಾಹಿತಿ ಮತ್ತು ಮಾರ್ಗದರ್ಶನ ಮೂಲಕ ತೆರಳಬೇಕು. ಚಿಕ್ಕಮಕ್ಕಳಿಗೆ ಈ ಬಗ್ಗೆ ಗೊತ್ತಾಗುವುದಿಲ್ಲ. ಡೇಂಜರ್ ಇರುವಲ್ಲಿ ಯಾರು ಹೋಗಬಾರದು. ಪೋಷಕರು ಸಹ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಸಂಬಂಧಿಯಿಂದಲೇ ಗರ್ಭವತಿಯಾದ ಅಪ್ರಾಪ್ತೆ