ETV Bharat / state

'ಬಿಎಸ್​ವೈ ಯಾವ ಊರಿಗೋದ್ರೂ ನೀವು ಮಂತ್ರಿಯಪ್ಪ ಅಂತಾ ಹೇಳ್ತಾರೆ, ಸಮಸ್ಯೆ ಆದಂತೆ ಕಾಣ್ತಿದೆ'

ಸಿಎಂ ಯಡಿಯೂರಪ್ಪ 130 ಜನರನ್ನೂ ಮಂತ್ರಿ ಮಾಡೋ ಹಾಗೆ ಕಾಣುತ್ತಾರೆ ಎಂದು ಮಾಜಿ ಸ್ಪೀಕರ್ ರಮೇಶ್​​ ಕುಮಾರ್​ ವ್ಯಂಗ್ಯವಾಡಿದರು. ಜೊತೆಗೆ ಪಕ್ಷದ ಸ್ವಾರ್ಥ ಬಿಟ್ಟರೆ ಯಾವ ಜನ ಹಿತವೂ ಇಲ್ಲ ಎಂದರು.

ramesh kumar critisise cm news
ಸಿಎಂ ಯಡಿಯೂರಪ್ಪ ವಿರುದ್ಧ ಹರಿಹಾಯ್ದ ಮಾಜಿ ಸ್ಪೀಕರ್ ರಮೇಶ ಕುಮಾರ್
author img

By

Published : Nov 27, 2019, 9:38 PM IST

ಚಿಕ್ಕೋಡಿ: ಸಿಎಂ ಯಡಿಯೂರಪ್ಪ 130 ಜನರನ್ನೂ ಮಂತ್ರಿ ಮಾಡೋ ಹಾಗೆ ಕಾಣುತ್ತಾರೆ ಎಂದು ಮಾಜಿ ಸ್ಪೀಕರ್ ರಮೇಶ್​ ಕುಮಾರ್​ ವ್ಯಂಗ್ಯವಾಡಿದರು.

ಸಿಎಂ ಯಡಿಯೂರಪ್ಪ ವಿರುದ್ಧ ಹರಿಹಾಯ್ದ ಮಾಜಿ ಸ್ಪೀಕರ್ ರಮೇಶ್​ ಕುಮಾರ್

ಕಾಗವಾಡ ವಿಧಾನಸಭಾ ಮತಕ್ಷೇತ್ರದ ಉಗಾರ ಪಟ್ಟದಲ್ಲಿ ನಡೆದ‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್​​ ಕುಮಾರ್, ಸ್ವಾರ್ಥ ಮನುಷ್ಯನಲ್ಲಿ ತುಂಬಿಕೊಂಡಾಗ ಬುದ್ಧಿ ಕೆಲಸ ಮಾಡಲ್ಲ. ನಿಮ್ಮ ಸ್ವಾರ್ಥ, ನಿಮ್ಮ ಪಕ್ಷದ ಸ್ವಾರ್ಥ ಬಿಟ್ಟರೆ ಯಾವ ಜನಹಿತವೂ ಇಲ್ಲ. ನಿಸ್ವಾರ್ಥ ಇದ್ದರೆ ಜನರೇ ನಮ್ಮ ಕೈ ಹಿಡಿಯುತ್ತಾರೆ ಎಂದರು.

ಇನ್ನು ನೆರೆ ಬರಬೇಕು ಎಂದು ಯಾರೂ ಕೋರಿಲ್ಲ. ಆ ವೇಳೆ ಅನರ್ಹರು ಎಲ್ಲಿ ಹೋಗಿದ್ದರು? ಇವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಚರ್ಚೆ ಮಾಡಲಿಕ್ಕೆ ಅಂತ ಅಸೆಂಬ್ಲಿ ಕರೆದು ಮೂರೇ ದಿನದೊಳಗೆ ಮುಗಿಸಿದರು. ಮುಖ್ಯಮಂತ್ರಿಗಳು ನೆರೆ ಸಂತ್ರಸ್ತರನ್ನು ಭೇಟಿ ಮಾಡಬೇಕಿದೆ. ನಾವು ಕೂಡಲೇ ಅಸೆಂಬ್ಲಿ‌‌ ನಿಲ್ಲಿಸಿ ಅಲ್ಲಿಗೆ ಹೋಗಬೇಕಾಗಿದೆ ಎಂದಿದ್ದಕ್ಕೆ ನಾವು ಸಮ್ಮತಿಸಿದೆವು. ಆದರೆ ಇವರು ಇವರು ಹೋದದ್ದು ಮಾತ್ರ ಹೊಸಕೋಟೆಗೆ ಎಂದು ಟೀಕಿಸಿದರು.

Intro:ಯಡಿಯೂರಪ್ಪ ವಿರುದ್ಧ ಹರಿಹಾಯ್ದ ಮಾಜಿ ಸ್ಪೀಕರ್ ರಮೇಶ ಕುಮಾರ್Body:

ಚಿಕ್ಕೋಡಿ :

ಶ್ರೀಮಂತ ಪಾಟೀಲ ಗೆದ್ದರೆ ಇತನನ್ನು ಮಂತ್ರಿ ಮಾಡ್ತಿನಿ. ೨೨೪ ಸ್ಥಾನ ಇರೋದು, ಇವಹತ್ರ ಇರೋದು ೧೦೫ , ಇವರು ೧೩೦ಜನರನ್ನ ಮಂತ್ರಿ ಮಾಡೋಹಾಗೆ ಕಾಣುತ್ತಾರೆ ಎಂದು ಮಾಜಿ ಸ್ಪೀಕರ್ ರಮೇಶ ಕುಮಾರ ಹೇಳಿದರು

ಕಾಗವಾಡ ವಿಧಾನಸಭಾ ಮತಕ್ಷೇತ್ರದ ಉಗಾರ ಪಟ್ಟದಲ್ಲಿ ನಡೆದ‌ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅವರಿಗೇನು ಘನತೆ ಕೊಡೊ ಮತ್ತ ಅವರಿಗಿದೇ ಯಡಿಯೂರಪ್ಪನವರೇ? ಸ್ವಾರ್ಥ ಮನುಷ್ಯನಲ್ಲಿ ತುಂಬಿಕೊಂಡಾಗಾ ಬುದ್ದಿ ಕೆಲಸಮಾಡಲ್ಲ. ನಿಸ್ವಾರ್ಥ ಇದ್ದಾಗ ಮಾತುಗಳನ್ನ ನಮ್ಮ ಮನಸ್ಸೆ ಆಡಿಸುತ್ತೆ, ಜನರೇ ಆಡಿಸುತ್ತಾರೆ. ನಿಮ್ಮ ಸ್ವಾರ್ಥ ಬಿಟ್ಡರೆ ಇದರಲ್ಲಿ. ನಿಮ್ಮ ಪಕ್ಷದ ಸ್ವಾರ್ಥ ಬಿಟ್ಟರೆ ಯಾವ ಜನಹಿತವೂ ಇಲ್ಲ.

ನೆರೆ ಬರಬೇಕು ಅಂತಾ ಯಾರು ಕೋರಿಲ್ಲ, ಆ ಟೈಮಲ್ಲಿ ಅನರ್ಹರು ಎಲ್ಲಿ ಹೋಗಿದ್ದರು? ಮುಂಬೈ ಹೋಗಿದ್ದರು, ಇವರಿಗೆ ಸಂವಿಧಾನದ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಚರ್ಚೆ ಮಾಡಲಿಕ್ಕೆ ಅಂತ ಅಸೆಂಬ್ಲಿ ಕರೆದರು. ೩ ದಿನ ಅಷ್ಟೆ ನಡೆಯಿತು. ಮುಖ್ಯಮಂತ್ರಿ ಏನು ಹೇಳಿದರು? ನೆರೆ ಸಂತ್ರಸ್ತರಿಗೆ ಭೇಟಿ ಮಾಡಬೇಕಿದೆ. ನಾವೂ ಕೂಡಲೆ ಅಸೆಂಬ್ಲಿ‌‌ ನಿಲ್ಲಿಸಿ ಅಲ್ಲಿಗೆ ಹೋಗಬೇಕಾಗಿದೆ. ಅದಕ್ಕೆ ನಾವು ಸಮ್ಮತಿಸಿದೇವು.

ಇವರು ಮಾರನೇ ದಿನ ಹೊಸಕೋಟೆ ಹೋದರು. ಎಂಟಿಬಿ ನಾಗರಾಜ ಗೆಲ್ಲಿಸೋಕೆ, ಚಿಕ್ಕಬಳ್ಳಾಪುರಕ್ಕೆ ಹೊಗ್ತಾರೆ. ನೆರೆ ಬಂದಿದ್ದೇಲ್ಲಿ. ಇವರು ಹೋಗಿದೆಲ್ಲಿ. ಎತ್ತಿಗೆ ಜ್ವರ ಬಂದರೆ, ಬರ ಎಮ್ಮೆಗೆಳಿತೀರಾ?

ನೆರೆ ಬಂದಿದ್ದು ಇಲ್ಲಾದರೇ ಹೊಸಕೋಟೆಗೆ ಹೋಗ್ತಾರೆ ಮುಖ್ಯಮಂತ್ರಿ, ಅಸೆಂಬ್ಲಿ ಯಾಕೇ ಬೇಗ ಮುಗುಸ್ತಿಯ ಅಂದ್ರೇ ನೆರೆ ಸಂತ್ರಸ್ತರಿಗೆ ಭೇಟಿ ಮಾಡಲು ಅಂತಿಯಾ ಅಕ್ಷರಶಃ ಸುಳ್ಳು , ಬೇಜವಾಬ್ದಾರಿ, ಸ್ವಾರ್ಥ ಬೇರೇನು ಇಲ್ಲ ಎಂದು ಹೇಳಿದರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.