ಚಿಕ್ಕೋಡಿ: ನಮ್ಮ ಕುಟುಂಬಕ್ಕೆ ಸತತವಾಗಿ ಅನ್ಯಾಯವಾಗುತ್ತಿದ್ದು, ನನ್ನ ಸಹೋದರ ಉಮೇಶ್ ಕತ್ತಿ 8 ಬಾರಿ ವಿಧಾನಸಭೆಗೆ ಆಯ್ಕೆಯಾದರೂ ಸಹ ಆತನಿಗೆ ಸಚಿವ ಸ್ಥಾನ ಕೊಡಲಿಲ್ಲ ಎಂದು ಬಿಜೆಪಿ ವಿರುದ್ಧ ಮಾಜಿ ಸಂಸದ ರಮೇಶ್ ಕತ್ತಿ ಸೂಕ್ಷ್ಮವಾಗಿ ಅಸಮಾಧಾನ ಹೊರ ಹಾಕಿದರು.
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಮಾತನಾಡಿದ ಅವರು, ನಾವು ಹೊಸದಾಗಿ ಏನನ್ನೂ ಸಹ ಕೇಳುತ್ತಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಳಗಾವಿಯಲ್ಲಿ ನನಗೆ ಭರವಸೆ ನೀಡಿದ್ದರು. ರಾಜ್ಯಸಭೆಗೆ ನನ್ನನ್ನು ಕಳಿಸುವ ಭರವಸೆ ನೀಡಿ ಹೋಗಿದ್ದರು. ಆ ಭರವಸೆಯನ್ನು ಈಡೇರಿಸುವಂತೆ ನಾವು ಮನವಿ ಮಾಡಿದ್ದೇವೆ ಅಷ್ಟೇ ಎಂದರು.
ನನ್ನ ಸಹೋದರ ಡೈಮಂಡ್ ಇದ್ದ ಹಾಗೆ, ಆತ ಮುಂದೆ ಸಚಿವ ಆಗೇ ಆಗ್ತಾನೆ. ಬಿಜೆಪಿಯಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದರು. ಉತ್ತರ ಕರ್ನಾಟಕದ ಶಾಸಕರು ಕೇವಲ ಊಟಕ್ಕಾಗಿ ಮನೆಗೆ ಬಂದಿದ್ದರು. ಅದನ್ನು ಹೊರತುಪಡಿಸಿ ಯಾವುದೇ ಚರ್ಚೆಯಾಗಿಲ್ಲ ಎಂದು ರಮೇಶ್ ಕತ್ತಿ ಹೇಳಿದರು.