ETV Bharat / state

ನೆರೆ ಸಂತ್ರಸ್ತರಿಗೆ ತಲುಪಬೇಕಿದ್ದ ಆಹಾರ ಸಾಮಗ್ರಿ ಇಲಿ-ಹೆಗ್ಗಣಗಳ ಪಾಲು - ಅಥಣಿ ನೆರೆ ಸಂತ್ರಸ್ತರ ಲೇಟೆಸ್ಟ್​​​ ನ್ಯೂಸ್​​

ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ನೆರೆ ಸಂತ್ರಸ್ತರಿಗೆ ನೀಡಲಾಗಿದ್ದ ಆಹಾರ ಪದಾರ್ಥಗಳು ಸಂತ್ರಸ್ತರನ್ನು ತಲುಪದೇ ಗೋದಾಮಿನಲ್ಲಿ ಕೊಳೆಯುತ್ತಿವೆ.

ಆಹಾರ ಸಾಮಾಗ್ರಿ ಇಲಿ ಹೆಗ್ಗಣಗಳ ಪಾಲು
author img

By

Published : Nov 6, 2019, 4:41 PM IST

ಅಥಣಿ/ಬೆಳಗಾವಿ: ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿದ್ದ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಸಂತ್ರಸ್ತರಿಗೆ ನೀಡಲಾಗಿದ್ದ ಆಹಾರ ಪದಾರ್ಥಗಳು ಗೋದಾಮಿನಲ್ಲೇ ಇದ್ದು, ಅವು ಇಲಿ ಹೆಗ್ಗಣಗಳ ಪಾಲಾಗಿವೆ.

ಸಂತ್ರಸ್ತರಿಗೆ ತಾಲೂಕು ಆಡಳಿತ ಆಹಾರ ಪದಾರ್ಥಗಳನ್ನು ಬೆರಳೆಣಿಕೆಯಷ್ಟು ಜನರಿಗೆ ನೀಡಿದ್ದು, ಆಹಾರ ಚೀಲಗಳನ್ನು ಗೋದಾಮಿನಲ್ಲಿ ತುಂಬಿದೆ. ಹೀಗಾಗಿ ಇಲಿ, ಹೆಗ್ಗಣ ಮತ್ತು ಕ್ರಿಮಿಕೀಟಗಳು ಆಹಾರ ಪದಾರ್ಥಗಳಲ್ಲಿ ಬೆರೆತು ಆಹಾರ ಸಾಮಗ್ರಿಗಳು ಸದ್ಯ ಹಾಳಾಗುತ್ತಿವೆ. ಹಲ್ಯಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್​ಗೆ ಸಂಬಂಧಿಸಿದ ಗೋದಾಮಿನಲ್ಲಿ ಸುಮಾರು 2000 ಆಹಾರ ಸಾಮಗ್ರಿಗಳ ಕಿಟ್​​ ವಿತರಣೆಯಾಗದೆ ಕೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಗ್ರಾಮ ಪಂಚಾಯತ್​ ಅಧಿಕಾರಿಗಳನ್ನು ಕೇಳಿದ್ರೆ ನಮಗೂ ಇದಕ್ಕೆ ಸಂಬಂಧ ಇಲ್ಲ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಆಹಾರ ಸಾಮಗ್ರಿ ಇಲಿ ಹೆಗ್ಗಣಗಳ ಪಾಲು

ಸದ್ಯ ಸಂಬಂಧಪಟ್ಟ ಅಧಿಕಾರಿಗಳು ಅಥಣಿ ತಾಲೂಕಿನ ನೆರೆ ಸಂತ್ರಸ್ತರ ಗ್ರಾಮಗಳಿಗೆ ಭೇಟಿ ನೀಡಿ ತುರ್ತಾಗಿ ಈ ಆಹಾರ ಪದಾರ್ಥಗಳನ್ನು ವಿತರಿಸದೇ ಹೋದಲ್ಲಿ, ಇವು ಕೊಳೆಯುವುದು ಖಚಿತ. ಮತ್ತು ಇದರಿಂದ ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗಲಿದೆ.

Intro:Exclusive.....

ಅಥಣಿ ತಾಲೂಕಿನಲ್ಲಿ ನೆರೆ ಸಂತ್ರಸ್ತರ ತುರ್ತು ಆಹಾರ ಸಾಮಗ್ರಿಗಳಲ್ಲಿ ಇಲಿ ಹೆಗ್ಗಣ ಪಾಲು, ಅಕ್ಕಿ ಬೇಳೆಗಲ್ಲಿ ಹುಳುಗಳ ಬಾಧೆ.ಹಲ್ಯಾಳ ಗ್ರಾಮದಲ್ಲಿ ವಿತರಣೆ ಯಾಗದೆ
200೦ ಆಹಾರ ಕಿಟ್ ಗೋದಾಮಿನಲ್ಲಿ ಕೊಳೆಯುವ ಪರಿಸ್ಥಿತಿ. ಗ್ರಾಮ ಪಂಚಾಯತಿ ದಿವ್ಯ ನಿರ್ಲಕ್ಷ್ಯ,Body:ಅಥಣಿ ವರದಿ:
ಫಾರ್ಮೆಟ್: ಎವಿಬಿ
ಸ್ಲಗ್: ತುರ್ತು ಆಹಾರ ಸಾಮಗ್ರಿಗಳು ಇಲಿ ಹೆಗ್ಗಣ ಪಾಲು, ಅಕ್ಕಿ ಬೇಳೆಗಲ್ಲಿ ಹುಳುಗಳ ಬಾಧೆ.ಹಲ್ಯಾಳ ಗ್ರಾಮದಲ್ಲಿ

ಅಥಣಿ: ಅಥಣಿ ತಾಲೂಕಿನ ಹಲ್ಯಾಳ ಗ್ರಾಮವು ಕೃಷ್ಣಾ ನದಿ ಪ್ರವಾಹಕ್ಕೆ ತತ್ತರಿಸಿ ಹೋಗಿತ್ತು ಅದರಲ್ಲೂ ಪ್ರವಾಹ ಕೊಳಗಾದ ಜನರು ತುತ್ತು ಅನ್ನಕ್ಕಾಗಿ ಕೈ ಒಡ್ಡುವ ಪರಿಸ್ಥಿತಿ ನಿರ್ಮಾಣವಾದಾಗ. ಪರಿಸ್ಥಿತಿ ಅನುಗುಣವಾಗಿ ಸರ್ಕಾರವು ತುರ್ತು ಆಹಾರದ ಪದಾರ್ಥಗಳಾದ ಅಕ್ಕಿ ಬೇಳೆ ಹಾಗೂ ಎಣ್ಣೆ ಹೀಗೆ ದಿನಸಿ ಪದಾರ್ಥಗಳ ಕಿಟ್ಟು ಒದಗಿಸಲು ಜಿಲ್ಲಾಡಳಿತಕ್ಕೆ ಆದೇಶ ನಿಡಿದ್ದರು.

ಜಿಲ್ಲಾ ಆಡಳಿತ ಇನ್ನು ತುರ್ತಾಗಿ ನೆರೆ ಸಂತ್ರಸ್ತರಿಗೆ ಆಹಾರ ಪದಾರ್ಥಗಳು ಒದಗಿಸಲು ಎಲ್ಲಾ ತಯಾರಿ ಮಾಡಿದರು ತಾಲೂಕು ಆಡಳಿತ ಮಾತ್ರ ಆಹಾರ ಪದಾರ್ಥಗಳನ್ನು ಬೆರಳೆಣಿಕೆ ಜನರಿಗೆ ನೀಡುವಲ್ಲಿ ಯಶಸ್ವಿಯಾಗಿ ತದನಂತರ ವಾಗಿ ಆಹಾರ ಕಿಟ್ಟಗಳನ್ನು ಗೋದಾಮಿನಲ್ಲಿ ತುಂಬಿ ಇಲಿ ಹೆಗ್ಗಣ ಮತ್ತು ಕ್ರಿಮಿಕೀಟಗಳು ಆಹಾರ ಪದಾರ್ಥಗಳಲ್ಲಿ ಬೆರೆತು ಆಹಾರ ಸಾಮಗ್ರಿಗಳು ಸದ್ಯ ಕೆಟ್ಟು ಹೋಗುತ್ತಿವೆ

ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಸಂಬಂಧ ಪಟ್ಟ ಗೋದಾಮಿನಲ್ಲಿ ಸರಿ ಸುಮಾರು 2000 ಹಾರ ಸಾಮಗ್ರಿಗಳ ಕಿಟ್ಟ ವಿತರಣೆಯಾಗದೆ ಕೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಪ್ರಶ್ನೆ ಮಾಡಿದಾಗ ನಮಗೂ ಇದಕ್ಕೆ ಸಂಬಂಧ ಇಲ್ಲ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ತಾಲೂಕು ಮಟ್ಟದ ಅಧಿಕಾರಿ ಆದಂತ ಆಹಾರ ಇಲಾಖೆ ಅಧಿಕಾರಿ ಬಿರಾದರ್ ಅವರನ್ನು ಗ್ರಾಮಸ್ಥರು ಕೇಳಿದಾಗ ಆದಷ್ಟು ಬೇಗನೆ ವಿತರಣೆ ಮಾಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಆದೇಶಿಸಿದೆ, ಆದರೆ ಅವರು ನೀಡಿಲ್ಲ ಎಂಬ ಅ ಸಮರ್ಪಕ ಉತ್ತರವನ್ನು ನೀಡುತ್ತಿದ್ದಾರೆಂದು ಜನರು ಅವರ ಮೇಲು ಆರೋಪಿಸಿದ್ದಾರೆ.

ಆಹಾರ ಸಾಮಗ್ರಿಗಳನ್ನು ಗ್ರಾಮ ಜನರಿಗೆ ಸರಿಯಾಗಿ ಒದಗಿಸಲು ವಿಫಲವಾದ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಾಲೂಕು ಆಡಳಿತದಿಂದ ನಮಗೆ ಇನ್ನೂ ಆಹಾರ ಕಿಟ್ಟ ಬಂದಿಲ್ಲ ಎಂಬ ಹೇಳಿಕೆ ನೀಡುತ್ತಿರುವಾಗಲೇ, ಭಾರತೀಯ ಕಿಸಾನ್ ಸಂಘ ಹಲ್ಯಾಳ ಗ್ರಾಮದ ಗೋದಾಮಿನಲ್ಲಿ ಪರಿಶೀಲನೆ ನಡೆಸಿದಾಗ ಗೋದಾಮಿನಲ್ಲಿ ಕ್ರಿಮಿಕೀಟಗಳು ಬಾದಿಸಿರುವ ಅಕ್ಕಿ ಹಾಗೂ ಆಹಾರ ಪದಾರ್ಥಗಳು ಕಂಡುಬಂದಿದೆ.

ನೆರೆ ಸಂತ್ರಸ್ತರ ಬದುಕು ಸರಿಹೊಂದಿಸಲು ರಾಜ್ಯ ಸರ್ಕಾರ ಸತತ ಪ್ರಯತ್ನವಿದ್ದರು ಕೆಳಮಟ್ಟ ಅಧಿಕಾರಿಗಳಿಂದ ಈ ರೀತಿ ಗ್ರಾಮದ ನೆರೆ ಸಂತ್ರಸ್ತರಿಗೆ ಅನ್ಯಾಯ ಮಾಡಿದ್ದಾರೆ ಇದರಿಂದ ರಾಜ್ಯ ಸರ್ಕಾರಕ್ಕೂ ಭಾರೀ ಅನ್ಯಾಯ ಮಾಡುತ್ತಿದ್ದಾರೆ ಈ ಅಧಿಕಾರಿಗಳು, ಎಂದು ಭಾರತಿ ಕಿಸಾನ್ ಸಂಘದ ಕಾರ್ಯದರ್ಶಿ ಭರಮು ನಾಯಕ ಈಟಿವಿ ಭಾರತ ಜೊತೆ ದೂರವಾಣಿ ಮುಖಾಂತರ ಹೆಳಿದರು

ಸದ್ಯ ಸಂಬಂಧಪಟ್ಟ ಅಧಿಕಾರಿಗಳು ಅಥಣಿ ತಾಲೂಕಿನ ನೆರೆ ಸಂತ್ರಸ್ತರ ಗ್ರಾಮಗಳಿಗೆ ಭೇಟಿ ನೀಡಿ ತುರ್ತು ಆಹಾರ ಪದಾರ್ಥಗಳನ್ನು ವಿತರಣೆ ಮಾಡದೇ ಹೋದಲ್ಲಿ, ಆಹಾರಪದಾರ್ಥಗಳು ಹಳ್ಳ ಹಿಡಿಯುವುದನ್ನು ಶತಸಿದ್ಧ ಸರ್ಕಾರ ಬೊಕ್ಕಸಕ್ಕೂ ಭಾರಿ ನಷ್ಟ. ಈಟಿವಿ ಭಾರತ ಅಥಣಿConclusion:ಶಿವರಾಜ ನೇಸರ್ಗಿ ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.