ಚಿಕ್ಕೋಡಿ: ಲಾಕ್‌ಡೌನ್ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳಿಗೆ ಹಾಲಿ ಹಾಗೂ ನಿವೃತ್ತ ಯೋಧರು ದಿನಸಿ ಕಿಟ್ಗಳನ್ನು ವಿತರಿಸಿದರು.
ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಮ್ಮಣಗಿ ಗ್ರಾಮದಲ್ಲಿ ಹಾಲಿ ಹಾಗೂ ನಿವೃತ್ತ ಯೋಧರು ಸುಮಾರು 150ಕ್ಕೂ ಹೆಚ್ಚಿನ ಬಡ ಕುಟುಂಬಗಳಿಗೆ ಸಹಾಯ ಮಾಡಿದ್ದಾರೆ.
ಅಮ್ಣಣಗಿ ಗ್ರಾಮದ ಸೈನಿಕ ಬಳಗದಿಂದ ತರಕಾರಿ, ದಿನಸಿ ಪದಾರ್ಥಗಳ ಕಿಟ್ ಹಾಗೂ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಲಾಯಿತು. ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ದಿನಸಿ ಕಿಟ್ ಪಡೆದರು.
ಕೊರೊನಾ ರೋಗ ತಡೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರಲ್ಲಿ ಯೋಧರು ಮನವಿ ಮಾಡಿದರು.