ಚಿಕ್ಕೋಡಿ: ಪ್ರವಾಹದಲ್ಲಿ ಬಿದ್ದ ಮನೆಗಳ ಸರ್ವೆಯನ್ನು ಮತ್ತೊಮ್ಮೆ ಮಾಡಬೇಕು ಹಾಗೂ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಯಡೂರ ಗ್ರಾ.ಪಂ ಪಿಡಿಓಗೆ ಮನವಿಯನ್ನು ಸಲ್ಲಿಸಲಾಯಿತು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ, ಕಲ್ಲೋಳ, ಇಂಗಳಿ, ಚಂದೂರ, ಮಾಂಜರಿ ಸೇರಿದಂತೆ ವಿವಿಧ ಗ್ರಾಮಗಳು ಭೀಕರ ಪ್ರವಾಹದಿಂದ ತತ್ತರಿಸಿಹೋಗಿವೆ. ಪ್ರವಾಹ ಪೀಡಿತ ಜನರು ಮನೆಗಳನ್ನು ಕಳೆದುಕೊಂಡು ಪರದಾಡುತ್ತಿದ್ದಾರೆ. ಆದರೆ, ಗ್ರಾಮಗಳಲ್ಲಿ ಸಮಪರ್ಕ ಸರ್ವೆ ಮಾಡದೆ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗಿದೆ ಎಂದು ಹೋರಾಟಗಾರರು ಆರೋಪಿಸಿದರು.
ಉದ್ದೇಶಪೂರ್ವಕವಾಗಿ 'ಸಿ' ವರ್ಗದ ಮನೆಗಳನ್ನು 'ಬಿ' ವರ್ಗಕ್ಕೆ ಸೇರಿಸಿಲಾಗಿದೆ. ಇಂಜಿನಿಯರ್ಗಳು ಮನೆಗಳ ಸರ್ವೆ ಮಾಡುವಾಗ ಸಮರ್ಪಕವಾಗಿ ಮಾಡಿಲ್ಲ. ಇದರಿಂದ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮತ್ತೊಮ್ಮೆ ಸರ್ವೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಯಡೂರ ಪಿಡಿಓ ಪ್ರಭು ಚನ್ನೂರ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.