ETV Bharat / state

ಸುಸಜ್ಜಿತ ಪುನರ್ವಸತಿಗೆ ಆಗ್ರಹಿಸಿ ರಸ್ತೆ ತಡೆ, ಬೃಹತ್​ ಪ್ರತಿಭಟನೆ: ಜನರಿಗೆ ಕಾಂಗ್ರೆಸ್​ ಸಾಥ್ - nandeshwar villagers problems

ಸತತ ಪ್ರವಾಹದಿಂದ ನಲುಗಿ ಮುಳುಗಡೆಯಾದ ಚಿಕ್ಕೋಡಿ ತಾಲೂಕಿನ ನಂದೇಶ್ವರ ಗ್ರಾಮಸ್ಥರು ಸುಸಜ್ಜಿತವಾದ ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸಿ, ಚಿಕ್ಕೋಡಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಜನರಿಗೆ ಕಾಂಗ್ರೆಸ್​ ಮುಖಂಡ ಗಜಾನನ ಮಂಗಸೂಳಿ ಬೆಂಬಲ ನೀಡಿದ್ದಾರೆ.

flood victims from nandeshwar village protest
ರಸ್ತೆ ತಡೆ ನಡೆಸಿ ಪ್ರತಿಭಟನೆ
author img

By

Published : Sep 1, 2021, 5:53 PM IST

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದೇಶ್ವರ ಗ್ರಾಮದಲ್ಲಿ ಸುಸಜ್ಜಿತ ಪುನರ್ವಸತಿ ಕಲ್ಪಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಅಥಣಿ-ಜಮಖಂಡಿ ರಸ್ತೆ ತಡೆದು ಇಂದು ಪ್ರತಿಭಟನೆ ನಡೆಸಿದರು.

ಪ್ರವಾಹ ಹಿನ್ನೆಲೆ ಮುಳುಗಡೆಯಾದ ಗ್ರಾಮಗಳಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ 2014ರಿಂದಲೂ ಈ ಗ್ರಾಮಸ್ಥರು ನಿರಂತರ ಪ್ರತಿಭಟನೆ ನಡೆಸುತ್ತಲೇ ಬಂದಿದ್ದಾರೆ. ಅಧಿಕಾರಿಗಳಿಗೆ ಜನಪ್ರತಿನಿಧಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ಸಿಗದೆ ಕಾರಣ ಇಂದು ಮತ್ತೆ 500 ಕ್ಕೂ ಹೆಚ್ಚು ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.

ರಸ್ತೆ ತಡೆ ನಡೆಸಿ ಪ್ರತಿಭಟನೆ

ಹಿಪ್ಪರಗಿ ಗ್ರಾಮದಲ್ಲಿ ಜೀರೋ ಪಾಯಿಂಟ್ ಎಂಬ ಸ್ಥಳದಲ್ಲಿ ನಂದೇಶ್ವರ ಗ್ರಾಮಕ್ಕೆ ಪುನರ್ವಸತಿ ಕಲ್ಪಿಸಲಾಗಿದೆ. ಆದರೆ ಅದು ಅವೈಜ್ಞಾನಿಕ ಎಂದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಗೆ ಗಜಾನನ ಮಂಗಸೂಳಿ ಸಾಥ್:

ಗ್ರಾಮಸ್ಥರ ಪ್ರತಿಭಟನೆಗೆ ಕಾಂಗ್ರೆಸ್​ ಮುಖಂಡ ಗಜಾನನ ಮಂಗಸೂಳಿ ಬೆಂಬಲ ನೀಡಿದ್ದು, ಪ್ರತಿಭಟನೆಯಲ್ಲಿ ತಾವೂ ಪಾಲ್ಗೊಂಡಿದ್ದಾರೆ. ಜನರಿಗೆ ಸೂಕ್ತವಾದ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಕೊಟ್ಟು ಪುನರ್ವಸತಿ ಕಲ್ಪಿಸಿ ಎಂದು ಆಗ್ರಹಿಸಿದ್ದಾರೆ. ಶಾಶ್ವತ ಪರಿಹಾರ ಸಿಗುವವರೆಗೂ ಪ್ರತಿಭಟನೆ ಮುಂದುವರಿಸಲಾಗುವುದು, ಅಧಿವೇಶನದ ವೇಳೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಂಗಸೂಳಿ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.

ಇದನ್ನೂ ಓದಿ:ಶಾಲೆಗೆ ಹೋಗಲು ಈ ಗ್ರಾಮದ ವಿದ್ಯಾರ್ಥಿಗಳಿಂದ ನಿತ್ಯ ಪಾದಯಾತ್ರೆ: ಭಯದಲ್ಲಿ ವಿದ್ಯಾರ್ಥಿನಿಯರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.