ETV Bharat / state

ನೆರೆ ಸಂತ್ರಸ್ತರಿಗೆ ಸಿಗದ ದಾನಿಗಳ ಸಾಮಗ್ರಿ: ಅಧಿಕಾರಿಗಳೇ ಮಾಡಿದ್ರಾ ಮೋಸ?! - ಅಧಿಕಾರಿಗಳೇ ಕರ್ತವ್ಯಲೋಪ

ರಾಜ್ಯಾದ್ಯಂತ ಪ್ರವಾಹ ಸೃಷ್ಟಿಯಾಗಿದ್ದರಿಂದ ನೆರೆ ಸಂತ್ರಸ್ತರಿಗೆ ಹಲವು ದಾನಿಗಳು ಮೂಲಭೂತ ಸೌಲಭ್ಯಗಳನ್ನು ನೀಡಿ ನೆರವಾಗಿದ್ದಾರೆ. ಆದರೆ ಇಂತಹ ವಸ್ತುಗಳನ್ನು ಜವಾಬ್ದಾರಿಯುತವಾಗಿ ತಲುಪಿಸಬೇಕಾದ ಅಧಿಕಾರಿಗಳೇ ಕರ್ತವ್ಯಲೋಪ ಎಸಗಿರುವ ಆರೋಪ ಅಥಣಿ ತಾಲೂಕಿನ ಶಂಕರಟ್ಟಿಯಲ್ಲಿ ಕೇಳಿಬಂದಿದೆ.

ನೆರೆ ಸಂತ್ರಸ್ತರಿಗೆ ಸಿಗಲಿಲ್ಲ ದಾನಿಗಳ ಸೌಲಭ್ಯ; ಅಧಿಕಾರಿಗಳೇ ಮಾಡಿದ್ರು ಮೋಸ
author img

By

Published : Aug 23, 2019, 8:58 PM IST

ಚಿಕ್ಕೋಡಿ: ಪ್ರವಾಹ ಪೀಡಿತ ನೆರೆ ಸಂತ್ರಸ್ತರಿಗೆ ಸಂಘ ಸಂಸ್ಥೆಗಳು, ದಾನಿಗಳು, ಹಾಸಿಗೆ, ಬಟ್ಟೆ, ಅಕ್ಕಿ ಮೂಟೆಗಳು, ಹೀಗೆ ದಿನ ಬಳಕೆ ಸಾಮಗ್ರಿಗಳನ್ನು ನೀಡಿ ನೆರವಾಗಿದ್ದಾರೆ. ಆದರೆ, ಸಂತ್ರಸ್ತರಿಗೆ ವಿತರಿಸಬೇಕಾದ ಈ ಸಾಮಗ್ರಿಗಳನ್ನು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶಂಕರಟ್ಟಿ ಗ್ರಾಮ ಪಂಚಾಯತ್​ ಪಿಡಿಓ ಹಾಗೂ ಅಧ್ಯಕ್ಷ ಸೇರಿ ಪಂಚಾಯತ್​ ಕಾರ್ಯಾಲಯದಲ್ಲಿ ಸಂಗ್ರಹಿಸಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನೆರೆ ಸಂತ್ರಸ್ತರಿಗೆ ಸಿಗಲಿಲ್ಲ ದಾನಿಗಳ ಸೌಲಭ್ಯ; ಅಧಿಕಾರಿಗಳೇ ಮಾಡಿದ್ರಾ ಮೋಸ?

ಪಂಚಾಯತ್​ ಕಾರ್ಯಾಲಯ ಮತ್ತು ಗಂಜಿ ಕೇಂದ್ರಗಳಲ್ಲಿ ಸಂಗ್ರಹಿಸಿಟ್ಟಿದ್ದ ಸಾಮಗ್ರಿಗಳನ್ನು ನಮಗೆ ಕೊಡಿ ಎಂದು ಸಂತ್ರಸ್ತರು ಕೇಳಿದಾಗ, ನೀವು ನಿಮ್ಮ ಮನೆಗಳಿಗೆ ತೆರಳುವ ಸಂದರ್ಭದಲ್ಲಿ ಕೊಡುತ್ತೇವೆ ಎಂದು ಪಂಚಾಯತ್​ ಅದ್ಯಕ್ಷ ಪಿಡಿಓ ಹೇಳುತ್ತಿದ್ದಾರೆಂದು ಸಂತ್ರಸ್ತರು ಮಾಧ್ಯಮಗಳ ಮುಂದೆ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

ಸರ್ಕಾರ ತಕ್ಷಣ ಪರಿಹಾರ ರೂಪದಲ್ಲಿ ಹತ್ತು ಸಾವಿರ ರೂಪಾಯಿ ಚೆಕ್ ವಿತರಿಸುವಂತೆ ಆದೇಶ ಮಾಡಿದರೂ, ಖವಟಗೊಪ್ಪ ಸಂತ್ರಸ್ತರಿಗೆ ಮಾತ್ರ ಸೌಲಭ್ಯ ಒದಗಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Intro:ದೇವರು ವರ ಕೊಟ್ರು ಪೂಜಾರಿ ವರ ಕೊಡಲಿಲ್ಲಾ ಅನ್ನೊ ಹಾಗೆ ಆಗಿದೆ ಸಂತ್ರಸ್ತರ ಗೋಳು Body:

ಚಿಕ್ಕೋಡಿ :

ಪ್ರವಾಹ ಪಿಡಿತ ನೇರೆ ಸಂತ್ರಸ್ತರಿಗೆ ಸಂಘ ಸಂಸ್ಥೆಗಳು, ದಾನಿಗಳು, ಮನೆ ಮಠ ಕಳೆದುಕೊಂಡ ಕುಟುಂಬಗಳಿಗೆ ಹಾಸಿಗೆ, ಬಟ್ಟೆ, ಅಕ್ಕಿ ಮೂಟೆಗಳು, ಹೀಗೆ ದಿನ ಬಳಕೆ ಸಾಮಗ್ರಿಗಳನ್ನು ಪ್ರವಾಹಕ್ಕೆ ತುತ್ತಾದ ನಿರಾಶ್ರಿತರಿಗೆ ಕುಟುಂಬಗಳಿಗೆ ನೀಡಿ ನೆರವಾಗಿದ್ದಾರೆ.

ಆದರೆ, ಸಂತ್ರಸ್ತರಿಗೆ ವಿತರಿಸಬೇಕಾದ ಸಾಮಗ್ರಿಗಳನ್ನು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಂಕರಟ್ಟಿ ಗ್ರಾಮ ಪಂಚಾಯತಿಯ ಪಿಡಿಓ ಹಾಗೂ ಅದ್ಯಕ್ಷ ಸೇರಿ ನಾವು ವಿತರಿಸುವುದಾಗಿ ಹೇಳಿ ಪಂಚಾಯಿತಿ ಕಾರ್ಯಾಲಯದಲ್ಲಿ ಸಂಗ್ರಹಿಸಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ

ಪಂಚಾಯಿತಿ ಕಾರ್ಯಾಲಯ ಮತ್ತು ಗಂಜಿ ಕೇಂದ್ರಗಳಲ್ಲಿ ಸಂಗ್ರಹಿಸಿ ಇಟ್ಟ ಸಾಮಗ್ರಿಗಳನ್ನು ನಮ್ಮಗೆ ಕೊಡಿ ಎಂದು ಸಂತ್ರಸ್ತರು ಕೇಳಿದಾಗ ನೀವು ನಿಮ್ಮ ಮನೆಗಳಿಗೆ ತೆರಳುವ ಸಂದರ್ಭದಲ್ಲಿ ನಿಮ್ಮಗೆ ಕೊಡುತ್ತೇವೆ ಎಂದು ಪಂಚಾಯ್ತಿ ಅದ್ಯಕ್ಷ ಪಿಡಿಓ ಹೇಳುತ್ತಿದ್ದಾರೆಂದು ಸಂತ್ರಸ್ತ ಮಹಿಳೆಯೊಬ್ಬರು ಮಾದ್ಯಮಗಳ ಮುಂದೆ ತಮ್ಮ ಅಳಲನ್ನ ತೊಡಿಕೊಂಡಿದ್ದಾರೆ.

ಸರ್ಕಾರ ತಕ್ಷಣ ಪರಿಹಾರ ರೂಪದಲ್ಲಿ ಹತ್ತು ಸಾವಿರ ರೂಪಾಯಿ ಚೆಕ್ಕ್ ವಿತರಿಸುವಂತೆ ಆದೇಶ ಮಾಡಿದರು ಖವಟಗೊಪ್ಪ ಸಂತ್ರಸ್ತರಿಗೆ ಮಾತ್ರ ಸೌಲಭ್ಯ ಒದಗಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಂಕರಟ್ಟಿ ಗಂಜಿ ಕೇಂದ್ರದ ಸಂತ್ರಸ್ತರ ಗೋಳು ಕೆಳೋಕೆ ಯಾವ ಹಿರಿಯ ಅಧಿಕಾರಿಗಳು ಕೂಡಾ ಗಂಜಿ ಕೇಂದ್ರಕ್ಕೆ ಭೇಟಿ ನೀಡಿಲ್ಲಾ ಇನ್ನಾದರೂ ಅಧಿಕಾರಿಗಳು ಬೇಟಿ ನೀಡಿ ಅವರಿಗೆ ಸಾಮಗ್ರಿಗಳನ್ನು ಒದಗಿಸಲು ಅಧಿಕಾರಿಗಳು ಮುಂದಾಗಬೇಕಿದೆ.

ಬೈಟ್ 1 & 2 : ಖವಟಗೊಪ್ಪ ಗ್ರಾಮದ ನಿರಾಶ್ರಿತರು

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.