ಬೆಳಗಾವಿ: ಜೈಲಿನಿಂದ ಬಿಡುಗಡೆ ಆದ ನಂತರ ನಗರದಲ್ಲಿ ಮೆರವಣಿಗೆ ನಡೆಸಿದ ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿ 300 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಕೊರೊನಾ ನಿಯಂತ್ರಿಸಲು ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಲಾಗಿದೆ.
ಕೋವಿಡ್ ನಿಯಮ ಉಲ್ಲಂಘಿಸಿ ಹಿಂಡಲಗಾ ಜೈಲಿನಿಂದ ಗಣಪತಿ ದೇವಸ್ಥಾನವರೆಗೆ ಮೆರವಣಿಗೆ ನಡೆಸಿದ್ದರು. ಹೂಮಳೆಗೆರೆದು ಅಭಿಮಾನಿಗಳು ಸಂಭ್ರಮಿಸಿದ್ದರು. ಹೀಗಾಗಿ ಕೋವಿಡ್ ನಿಯಮ ಉಲ್ಲಂಘಿಸಿದ ವಿನಯ್ ಕುಲಕರ್ಣಿ ಸೇರಿ 300 ಜನರ ವಿರುದ್ಧ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊರೊನಾ ನಿಯಮ ಉಲ್ಲಂಘಿಸಿದ್ದರಿಂದ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
(ಜೈಲಿನಿಂದ ವಿನಯ್ ಕುಲಕರ್ಣಿ ಬಿಡುಗಡೆ.. ನಿಷೇಧಾಜ್ಞೆ ನಡುವೆ ಅದ್ಧೂರಿ ಮೆರವಣಿಗೆ)
ಮಾಜಿ ಸಚಿವ ವಿನಯ್ ಕುಲಕರ್ಣಿ ವಿರುದ್ಧ ಮತ್ತೆ ಎರಡು ದೂರು ದಾಖಲು: ಕೊರೊನಾ ರೂಲ್ಸ್ ಬ್ರೇಕ್ ಹಾಗೂ ವೀಕೆಂಡ್ ಕರ್ಪ್ಯೂ ಬ್ರೇಕ್ ವಿಚಾರ ಸಂಬಂಧ ಮಾಜಿ ಸಚಿವರ ವಿರುದ್ಧ ಎರಡು ಪ್ರತ್ಯೇಕ ದೂರು ದಾಖಲಾಗಿವೆ. ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ ಸೆಕ್ಷನ್ 188 ಅಡಿಯಲ್ಲಿ ಕೇಸ್ ದಾಖಲಾಗಿದೆ. ಹಿಂಡಲಗಾ ಗ್ರಾಮದ ಪಿಡಿಓ ಹಾಗೂ ಬೆಳಗಾವಿ ಪೊಲೀಸರಿಂದ ಸ್ವಯಂಪ್ರೇರಿತ ಒಂದು ದೂರು ದಾಖಲಿಸಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.
ಇದನ್ನೂ ಓದಿ: ವಿನಯ್ ಕುಲಕರ್ಣಿ ಬಿಡುಗಡೆ; ಚಿನ್ನದ ರಾಖಿಯೊಂದಿಗೆ ಅಣ್ಣನ ಸ್ವಾಗತಿಸಲು ಜೈಲಿಗೆ ಬಂದ ಶಾಸಕಿ ಹೆಬ್ಬಾಳ್ಕರ್