ETV Bharat / state

ಚಿಕ್ಕೋಡಿ: ನೆಲಕ್ಕೆ ಎಸೆದು ನಾಲ್ಕು ತಿಂಗಳ ಮಗುವನ್ನು ಕೊಂದ ಪೊಲೀಸ್​ ಕಾನ್​ಸ್ಟೇಬಲ್​

ಪತ್ನಿಯೊಂದಿಗೆ ಕೋಪಗೊಂಡು ಪುಟ್ಟ ಮಗುವನ್ನು ಕುಪಿತ ತಂದೆ ಡಾಂಬರು ರಸ್ತೆ ಮೇಲೆ ಎಸೆದಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

author img

By ETV Bharat Karnataka Team

Published : Sep 20, 2023, 3:04 PM IST

Updated : Sep 20, 2023, 6:03 PM IST

Father killed four month old baby
ನೆಲಕ್ಕೆ ಎಸೆದು ನಾಲ್ಕು ತಿಂಗಳ ಮಗುವನ್ನು ಕೊಂದ ತಂದೆ

ಚಿಕ್ಕೋಡಿ: ವೃತ್ತಿಯಲ್ಲಿ ಪೊಲೀಸ್ ಕಾನ್​ಸ್ಟೇಬಲ್ ಆಗಿರುವ ವ್ಯಕ್ತಿಯೊಬ್ಬ​ ತನ್ನ 4 ತಿಂಗಳ ಮಗುವನ್ನು ಡಾಂಬರು ರಸ್ತೆಗೆಸೆದು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಬೆಳಗಾವಿ ಜಿಲ್ಲೆಯ ಮುಡಲಗಿ ತಾಲೂಕಿನ ದುರದುಂಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸ್​ ಕಾನ್​ಸ್ಟೆಬಲ್​ ಬಸಪ್ಪ ಬಳುಣಕಿ ತನ್ನ ಮಗುವನ್ನೇ ಕೊಂದ ಆರೋಪಿ. ಈತ ಡಾಂಬರು ರಸ್ತೆಗೆಸೆದು ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ: ಆರೋಪಿಯು ಬೆಳಗಾವಿ ಏರ್‌ಪೋರ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಮೂಲತಃ ಗೋಕಾಕ್​ ತಾಲೂಕಿನ ದುರದುಂಡಿ ನಿವಾಸಿ. ವಾರದ ಹಿಂದಷ್ಟೇ ಆತನ ಹೆಂಡತಿ ರಾಯಭಾಗ ತಾಲೂಕಿನ ಚಿಂಚಲಿ ಗ್ರಾಮದ ತಮ್ಮ ತವರು ಮನೆಗೆ ಬಂದಿದ್ದರು. ಸೆ. 18ರಂದು ಹೆಂಡತಿಯನ್ನು ಕರೆದುಕೊಂಡು ಹೋಗಲು ಬಸಪ್ಪ ಚಿಂಚಲಿ ಗ್ರಾಮಕ್ಕೆ ಆಗಮಿಸಿದ್ದರು. ಗಣೇಶ ಹಬ್ಬ ಮುಗಿಯಲಿ ನಂತರ ನಾವೇ ಕಳುಹಿಸುತ್ತೇವೆ ಎಂದು ಆಕೆಯ ಮನೆಯವರು ಬಸಪ್ಪನಿಗೆ ಹೇಳಿದ್ದರು.

ಆದರೆ ಹಠ ಬಿಡದೆ ಮಗುವನ್ನಾದರೂ ಕಳುಹಿಸಿ ಎಂದು ಬಸಪ್ಪ ಪಟ್ಟು ಹಿಡಿದಿದ್ದನು. ಆದರೆ ಕತ್ತಲಾಗಿರುವುದರಿಂದ ನೀವು ದ್ವಿಚಕ್ರ ವಾಹನದಲ್ಲಿ ಬಂದಿದ್ದೀರಿ, ಈಗ ಬೇಡ ಮುಂಜಾನೆ ನಾನೇ ಕರೆದುಕೊಂಡು ಬರುತ್ತೇನೆ ಎಂದು ಹೆಂಡತಿ ಹೇಳುತ್ತಿದ್ದಂತೆ, ಪತ್ನಿ ಮೇಲೆ ಕೋಪಗೊಂಡ ಬಸಪ್ಪ, ಮಗುವನ್ನು ಸಿಟ್ಟಿನಿಂದ ಡಾಂಬರು ರಸ್ತೆಗೆ ಎಸೆದಿದ್ದನು. ಎಸೆತದ ಹೊಡೆತಕ್ಕೆ ಮಗುವಿಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲಿ ಮೃತಪಟ್ಟಿರುವುದಾಗಿ ದೂರಿನಲ್ಲಿ ದಾಖಲಾಗಿದೆ. ಆರೋಪಿಯ ಅತ್ತೆ ಮಾವ ಕುಡಚಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ ಮಾತನಾಡಿ, ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಂಚಲಿ ಗ್ರಾಮದಲ್ಲಿ ತುಂಬಾ ನೋವಿನ ಘಟನೆ ಸಂಭವಿಸಿದೆ. ಆರೋಪಿ ಬಸಪ್ಪ ಬಳುಣಕಿ ಎಂಬುವರು ಮೃತ ಮಗುವಿನ ತಂದೆ, ಮಗುವನ್ನು ರಸ್ತೆಗೆ ಎಸೆದು ಮಗು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದೆ. ದುರದೃಷ್ಟವಶಾತ್ ಬಸಪ್ಪ ಬಳುಣಕಿ ಕರ್ನಾಟಕ ಸ್ಟೇಟ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಕಾನ್​ಸ್ಟೇಬಲ್​ ಆಗಿ ಧಾರವಾಡ ಮೂರನೆಯ ಬೆಟಾಲಿಯನ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಸದ್ಯಕ್ಕೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದ.

ಸೆಪ್ಟೆಂಬರ್ 18 ರಂದು ಚಿಂಚಲಿ ಗ್ರಾಮಕ್ಕೆ ಆಗಮಿಸಿ ಅಲ್ಲಿ ಕುಟುಂಬಸ್ಥರ ಜೊತೆ ಜಗಳ ಮಾಡಿ, ಮಗುವನ್ನು ಹತ್ಯೆ ಮಾಡಿದ್ದಾರೆ. ಮಗುವಿನ ಹತ್ಯೆಯ ಜೊತೆಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿ ಬಸಪ್ಪನ ಪತ್ನಿ ಲಕ್ಷ್ಮಿ ಹಾಗೂ ಅವರ ತಂದೆ ತಾಯಿ ಕುಡಚಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಅನ್ವಯ ಆರೋಪಿ ಬಸಪ್ಪನ ಜೊತೆ ಮೂರು ಜನ ಕುಟುಂಬಸ್ಥರು ಸೇರಿ ಒಟ್ಟು ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿಸಿದ್ದೇವೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ: ಮೈಸೂರು: ಕುಡಿದ ಮತ್ತಿನಲ್ಲಿ ತುಂಬು ಗರ್ಭಿಣಿ ಪತ್ನಿ ಕೊಲೆಗೈದ ಪತಿ

Last Updated : Sep 20, 2023, 6:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.