ETV Bharat / state

ಸೂಕ್ತ ಬೆಲೆ, ಮಾರುಕಟ್ಟೆ ಇಲ್ಲದೆ ಲಕ್ಷಾಂತರ ರೂಪಾಯಿ ಬೆಲೆಯ ದ್ರಾಕ್ಷಿ ಬೆಳೆ ನಷ್ಟ - ಕೊರೊನಾ ಲಾಕ್‌ಡೌನ್

ರೈತರು ತಾವು ಬೆಳೆದ ದ್ರಾಕ್ಷಿಗೆ ಸೂಕ್ತ ಬೆಲೆ ಹಾಗೂ ಮಾರುಕಟ್ಟೆ ಇಲ್ಲದೆ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಕೊರೊನಾ ಎಫೆಕ್ಟ್‌ನಿಂದ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಸಾಗಾಟ ಮಾಡಲು ವಾಹನ ವ್ಯವಸ್ಥೆ ಹಾಗೂ ಮಾರುಕಟ್ಟೆ ಇಲ್ಲದೆ ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ನಿರ್ಮಾಣವಾಗಿದೆ.

grapes
grapes
author img

By

Published : Apr 17, 2020, 2:12 PM IST

ಚಿಕ್ಕೋಡಿ: ಕೊರೊನಾ ವೈರಸ್ ಭೀತಿ ಇಡೀ ದೇಶವನ್ನು ಕಾಡುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಲೇ ಇದೆ. ಕೊರೊನಾ ಸೋಂಕು ತಡೆಗೆ ಲಾಕ್‌ಡೌನ್ ಒಂದೇ ದಾರಿ ಹಿನ್ನೆಲೆ ದೇಶಾದ್ಯಂತ ಲಾಕ್‌ಡೌನ್ ಮುಂದುವರೆಸಲಾಗಿದೆ. ಆದರೆ ಈ ಎಲ್ಲದರ ನಡುವೆ ರೈತರು ಮಾತ್ರ ಸಾಕಷ್ಟು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.

ತಾವು ಬೆಳೆದ ಹಣ್ಣಿಗೆ ಸೂಕ್ತ ಬೆಲೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದ ರೈತ ಮಲ್ಲೇಶ್ ಚೌಗಲಾ ಸುಮಾರು 10ರಿಂದ 12 ಲಕ್ಷ ರೂಪಾಯಿ ಸಾಲ ಮಾಡಿ ತಮ್ಮ 10 ಎಕರೆ ಜಮೀನಿನಲ್ಲಿ ದ್ರಾಕ್ಷಿ ಬೆಳೆ ಬೆಳೆದಿದ್ದಾರೆ. ಈ ಬಾರಿ ಒಳ್ಳೆಯ ಪ್ರಮಾಣ ಮಳೆ ಸುರಿದ ಹಿನ್ನೆಲೆ ದ್ರಾಕ್ಷಿ ಫಲವತ್ತಾಗಿ ಬೆಳೆದಿದೆ.

ದ್ರಾಕ್ಷಿ ಬೆಳೆ: ಲಕ್ಷಾಂತರ ರೂಪಾಯಿ ನಷ್ಟ

ಕೊರೊನಾ ಎಫೆಕ್ಟ್‌ನಿಂದ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಸಾಗಾಟ ಮಾಡಲು ವಾಹನ ವ್ಯವಸ್ಥೆ ಹಾಗೂ ಮಾರುಕಟ್ಟೆ ಇಲ್ಲದೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಇನ್ನು ಹಣ್ಣಿನ ಕಟಾವಿನ ಅವಧಿ ಮುಗಿದಿದ್ದರಿಂದ‌ ದ್ರಾಕ್ಷಿ ಹಣ್ಣು ಒಣಗಿ ಕಾಳು ಕಾಳಾಗಿ ನೆಲಕ್ಕೆ ಉದುರುತ್ತಿದೆ. ಕೊಳ್ಳುವವರು ಇಲ್ಲದೇ ಬೇಸತ್ತು ರೈತ ದ್ರಾಕ್ಷಿ ಕಟಾವು ಮಾಡಿ ನೆಲಕ್ಕೆ ಎಸೆಯುತ್ತಿದ್ದಾನೆ.

ಇದರಿಂದ ರೈತ ಸುಮಾರು 25ರಿಂದ 30 ಲಕ್ಷ ರೂಪಾಯಿ ನಷ್ಟ ಅನುಭವಿಸಿದಂತಾಗಿದೆ. ಇವರೊಬ್ಬರೆ ಅಲ್ಲದೇ ನಾಗರಾಳ ಗ್ರಾಮದಲ್ಲಿ ದ್ರಾಕ್ಷಿ ಬೆಳೆ ಬೆಳೆದ ಹತ್ತಾರು ರೈತರ ಪರಿಸ್ಥಿತಿಯೂ ಇದೇ ಆಗಿದ್ದು ಪ್ರತಿ ರೈತ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ.

ರೈತ ಮಲ್ಲೇಶ್ ಚೌಗಲಾ ಮಾತನಾಡಿ ಕಳೆದ ಡಿಸೆಂಬರ್‌ನಲ್ಲಿ ಮಳೆಯಿಂದ ದ್ರಾಕ್ಷಿ ಬೆಳೆ ನಾಶವಾಗಿತ್ತು, ಈಗ ಕೊರೊನಾದಿಂದ ನಾಶವಾಗುತ್ತಿದೆ. ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ರೈತರ ಬಗ್ಗೆ ಕಾಳಜಿವಹಿಸಿ ಕೊನೆ ಪಕ್ಷ ಖರ್ಚುಮಾಡಿದ ಹಣವನ್ನಾದರು ಪರಿಹಾರವಾಗಿ ನೀಡಬೇಕೆಂದು ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.