ಚಿಕ್ಕೋಡಿ : ತಾಲೂಕಿನ ಕೇರೂರ ಗ್ರಾಮದ ನಿವಾಸಿ ಬಸವರಾಜ ಮುರನಾಳೆ ಎಂಬ ರೈತ ಬೆಳದಿದ್ದ ಕೊಬಿಜ್ ಸೊಪ್ಪಿಗೆ ಮಾರುಕಟ್ಟೆ ಸಿಕ್ಕಿಲ್ಲವೆಂದು ನೊಂದು, ತನು ಬೆಳೆದ ಬೆಳಯನ್ನು ತಾನೇ ನಾಶ ಮಾಡಿದ್ದಾನೆ.
ಬಸವರಾಜ ಮುರನಾಳೆ ಲಾಕ್ಡೌನ್ನಿಂದಾಗಿ ಬೆಳೆದು ನಿಂತಿದ್ದ ಕ್ಯಾಬೇಜ್ಗೆ ಸರಿಯಾದ ಬೆಲೆ ಮತ್ತು ಮಾರುಕಟ್ಟೆ ಸಿಕ್ಕಿಲ್ಲವೆಂದು ಕಡಿದು ಹಾಕಿದ್ದಾನೆ.
ಲಾಕ್ಡೌನ್ ಹಿನ್ನೆಲೆ ಮಾರುಕಟ್ಟೆ ಬಂದ್ ಆಗಿದ್ದರಿಂದ ಸಾಲ ಮಾಡಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಕ್ಕಿಲ್ಲವೆಂದು ರೈತ ಈ ನಿರ್ಣಯಕ್ಕೆ ಬಂದಿದ್ದಾನೆ. ಸುಮಾರು ಒಂದು ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಬೆಳೆ ಹಾನಿಯಾಗಿದೆ. ಆತನಿಗೆ ಸರ್ಕಾರದಿಂದ ಸೂಕ್ತ ಪರಹಾರ ನೀಡಬೇಕೆಂದು ರೈತ ಸಂಘದ ಮುಖಂಡ ಮಂಜುನಾಥ ಪರಗೌಡ ಒತ್ತಾಯಿಸಿದ್ದಾರೆ.