ಬೆಳಗಾವಿ : ಕೌಟುಂಬಿಕ ಕಲಹ ಹಿನ್ನೆಲೆ ವ್ಯಕ್ತಿಯೊಬ್ಬರಿಗೆ ಇಬ್ಬರು ಯದ್ವಾತದ್ವಾ ಥಳಿಸಿ ಬಿಲ್ಡಿಂಗ್ ಮೇಲಿಂದ ಕೆಳಗೆ ತಳ್ಳಲು ಯತ್ನಿಸಿರುವ ಅಮಾನವೀಯ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ ನಡೆದಿದೆ.
ನಗರದ ಹೃದಯ ಭಾಗವಾಗಿರುವ ಕಡೋಲ್ಕರ್ ಗಲ್ಲಿಯಲ್ಲಿ ಈ ಘಟನೆ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆ ವ್ಯಕ್ತಿಯನ್ನು ಒಂದೇ ಕುಟುಂಬದವರು ಥಳಿಸಿದ್ದಲ್ಲದೇ ಮೊದಲ ಮಹಡಿಯ ಬಾಲ್ಕನಿಯಿಂದ ಕೆಳಗೆ ತಳ್ಳಲು ಯತ್ನಿಸಿದ್ದಾರೆ. ವ್ಯಕ್ತಿಯ ಚೀರಾಟ ನೋಡಿ ಸ್ಥಳದಲ್ಲಿದ್ದ ಜನರು ಜಮಾವಣೆ ಆಗಿದ್ದಾರೆ. ಜನ ಸೇರುತ್ತಿದಂತೆ ಆತನನ್ನು ಕೆಳಗೆ ತಳ್ಳದೇ ಮೇಲಕ್ಕೆ ಎತ್ತಿಕೊಂಡಿದ್ದಾರೆ.
ವ್ಯಕ್ತಿಯನ್ನ ಕೆಳಗೆ ತಳ್ಳುವುದನ್ನ ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಇದೇ ವಿಡಿಯೋ ಈಗ ವೈರಲ್ ಆಗಿದೆ. ಬೆಳಗಾವಿ ಖಡೇಬಜಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ:ಈ ವರ್ಷ 5 ಸಾವಿರ ಶಿಕ್ಷಕರ ನೇಮಕಾತಿ: ಶಿಕ್ಷಕರ ದಿನದಂದು ಸಿಎಂ ಸಿಹಿಸುದ್ದಿ