ETV Bharat / state

ನಕಲಿ ಐಪಿಎಸ್ ಅಧಿಕಾರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು - ಐಪಿಎಸ್ ಅಧಿಕಾರಿ ವಶಕ್ಕೆ

ಸತತ 16 ವರ್ಷಗಳಿಂದ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಅಥಣಿ ಪ್ರಧಾನ ಜೆಎಫ್‌ಎಂಸಿ ನ್ಯಾಯಾಲಯ, ಇದೀಗ ಆರೋಪ ಸಾಬೀತಾಗಿದ್ದರಿಂದ ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ..

fake-ips-officer-sentenced-to-3-years-jail-term
ನಕಲಿ ಐಪಿಎಸ್ ಅಧಿಕಾರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು
author img

By

Published : Apr 3, 2021, 6:00 PM IST

ಅಥಣಿ (ಬೆಳಗಾವಿ) : ಐಪಿಎಸ್ ಅಧಿಕಾರಿ ಹೆಸರಲ್ಲಿ ವಂಚನೆ ಎಸಗಿದ್ದ ಆರೋಪಿಗೆ ಅಥಣಿ ಪ್ರಧಾನ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ತಾಲೂಕಿನ ಸಂಬರಗಿ ಗ್ರಾಮದ ನಿವಾಸಿ ಅಶೋಕ ಭೀಮರಾವ ಪವಾರ ಎಂಬಾತ, ತಾನು ಐಪಿಎಸ್ ಅಧಿಕಾರಿಯೆಂದು ನಂಬಿಸಿ, ಸಾರ್ವಜನಿಕರು ಹಾಗೂ ಪೊಲೀಸ್ ಸಿಬ್ಬಂದಿ, ಅಧಿಕಾರಿ, ಗಣ್ಯರನ್ನು ವಂಚಿಸಿರುವ ಆರೋಪ ಸಾಬೀತಾಗಿದ್ದರಿಂದ ಅಥಣಿ ಪ್ರಧಾನ ಜೆಎಂಎಫ್​​ಸಿ ನ್ಯಾಯಾಲಯದ ನ್ಯಾಯಾಧೀಶರಾದ ವಿಶ್ವನಾಥ ಸಿ. ಗೌಡರ ಇವರು ತೀರ್ಪು ನೀಡಿದ್ದಾರೆ.

ಘಟನೆ ವಿವರ : 2004ರಲ್ಲಿ ತಾಲೂಕಿನಾದ್ಯಂತ ನಾನು ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ನಕಲಿ ಐಡಿ ತೋರಿಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ. ಹೀಗೆ 2004ರ ನವೆಂಬರ್​​ 18ರಂದು ದುರುದ್ದೇಶದಿಂದ ಪೊಲೀಸ್ ಅಧಿಕಾರಿಯಂತೆ ನಟಿಸಿ ಅಪರಾಧವೆಸಗಿರುವುದು ಸಾಬೀತಾಗಿತ್ತು.

ಈ ಬಗ್ಗೆ ಅಂದಿನ ಅಥಣಿ ಪಿಎಸ್‌ಐ ಕಿಶೋರ ಭರಣಿ ದೂರು ನೀಡಿದ್ದರು. ತದನಂತರ ಚಿಕ್ಕೋಡಿ ಡಿವೈಎಸ್‌ಪಿ ಪಿ ಆರ್ ಬಟಕುರ್ಕಿ ಅವರು ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಸತತ 16 ವರ್ಷಗಳಿಂದ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಅಥಣಿ ಪ್ರಧಾನ ಜೆಎಫ್‌ಎಂಸಿ ನ್ಯಾಯಾಲಯ, ಇದೀಗ ಆರೋಪ ಸಾಬೀತಾಗಿದ್ದರಿಂದ ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಇದನ್ನೂ ಓದಿ: ಮಂಚದಾಟಕ್ಕೆ ಮನಸೋತು ಮಕ್ಕಳನ್ನೇ ಕೊಂದ ಪಾಪಿ ತಾಯಿಗೆ ಜೀವಾವಧಿ ಶಿಕ್ಷೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.