ETV Bharat / state

ರೈತರ ಮುಂದೆ ಕಾಗವಾಡ ಅಥಣಿ ಉಭಯ ಕ್ಷೇತ್ರಗಳ ಶಾಸಕರ ಅಸಹಾಯಕತೆ?

ಕಾಗವಾಡ ಅಥಣಿ ತಾಲೂಕಿನ ಗ್ರಾಮಗಳಿಗೆ ಸಮರ್ಪಕ ವಿದ್ಯುತ್ ವಿತರಣೆಯಾಗದೇ ಇರುವುದರಿಂದ ಶನಿವಾರ ಉಭಯ ತಾಲೂಕಿನ ಶಾಸಕರು ವಿದ್ಯುತ್​ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

KN_CKD
ಕಾಗವಾಡ ಅಥಣಿ ಶಾಸಕರು
author img

By

Published : Dec 10, 2022, 10:30 PM IST

ವಿದ್ಯುತ್​ ಸಮಸ್ಯೆ ಬಗ್ಗೆ ವಿದ್ಯುತ್ ಇಲಾಖೆ​ ಅಧಿಕಾರಿಯೊಂದಿಗೆ ಶಾಸಕರ ಸಭೆ

ಚಿಕ್ಕೋಡಿ(ಬೆಳಗಾವಿ): ಕಳೆದ ಎರಡು ತಿಂಗಳಿನಿಂದ ಕಾಗವಾಡ ಅಥಣಿ ತಾಲೂಕಿನ ಮುರಗುಂಡಿ ವಿದ್ಯುತ್ ವಿತರಣಾ ಕೇಂದ್ರದಿಂದ ಸಮರ್ಪಕ ವಿದ್ಯುತ್ ಪೂರೈಕೆಯಾಗದೇ ಇರುವುದರಿಂದ ಅಧಿಕಾರಿಗಳ ಜೊತೆಗೆ ಉಭಯ ಕ್ಷೇತ್ರಗಳ ಶಾಸಕರಾದ ಮಹೇಶ್ ಕುಮಠಳ್ಳಿ ಹಾಗೂ ಶ್ರೀಮಂತ ಪಾಟೀಲ್ ನೇತೃತ್ವದ ರೈತರ ಸಭೆಯಲ್ಲಿ ಇಬ್ಬರು ಶಾಸಕರು ರೈತರ ಮುಂದೆ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಳೆದ ಎರಡು ತಿಂಗಳಗಳಿಂದ ವಿದ್ಯುತ್ ಸಮಸ್ಯೆ ವಿಪರೀತವಾಗಿದ್ದರಿಂದ ಹಲವು ಗ್ರಾಮಗಳಿಗೆ ಸರಿಯಾಗಿ ಕರೆಂಟ್ ಇಲ್ಲದೆ ರೈತರಲ್ಲಿ ಆತಂಕ ಆವರಿಸಿ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಕಳೆದ ವಾರದ ಹಿಂದೆ ಅಷ್ಟೇ ರೈತರು ವಿದ್ಯುತ್ ವಿತರಣಾ ಘಟಕಕ್ಕೆ ಮುತ್ತಿಗೆ ಹಾಕಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಆ ದಿನ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಅವರು ವಿದ್ಯುತ್ ಇಲಾಖೆಯ ಹುಬ್ಬಳ್ಳಿ ಉಪ ನಿರ್ದೇಶಕರಾದ ಭಾರತಿ ಡಿ ಅವರಿಗೆ ದೂರವಾಣಿಯ ಮೂಲಕ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಸಮರ್ಪಕ ವಿದ್ಯುತ್ ನೀಡಲಾಗುವುದು ಎಂದು ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದರು.

ಅವತ್ತಿನಿಂದ ಇವತ್ತಿನವರೆಗೆ ಯಾವುದೇ ಬದಲಾವಣೆ ಆಗದೆ ಇರುವುದರಿಂದ, ರೈತರು ಅಧಿಕಾರಿಗಳ ಜೊತೆಯಾಗಿ ಶಾಸಕರ ನೇತೃತ್ವದಲ್ಲಿ ಶನಿವಾರ ಸಭೆ ನಡೆಸಿದರು. ಈ ಸಭೆಯಲ್ಲಿ ವಿದ್ಯುತ್ ಇಲಾಖೆಯ ಅಧಿಕಾರಿಗಳ ಉಡಾಫೆ ಮಾತಿಗೆ ಶಾಸಕರು ಆಕ್ರೋಶ ವ್ಯಕ್ತಪಡಿಸಿ ಆಗಿರುವ ಸಮಸ್ಯೆ ಬಗ್ಗೆ ಮಾತನಾಡಿ ಎಂದು ಏರು ಧ್ವನಿಯಲ್ಲಿ ಸಿಡಿಮಿಡಿಗೊಂಡರು. ವಿದ್ಯುತ್ ಇಲಾಖೆ ಅಧಿಕಾರಿಗಳು ಪದೇ ಪದೇ ಸಮಸ್ಯೆಗೆ ಸಮರ್ಥನೆಗೆ ಮುಂದಾಗುತ್ತಿದ್ದಂತೆ ಕಾಗವಾಡ ಅಥಣಿ ಭಾಗದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ರೈತರಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಉಭಯ ಕ್ಷೇತ್ರಗಳ ಶಾಸಕರ ಸಭೆ ಮಾಡಿದರೂ, ಸಮಸ್ಯೆಗೆ ಪರಿಹಾರ ಸಿಗದೇ ಇರೋದ್ರಿಂದ ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ಸಮಯದಲ್ಲಿ ನಮಗೆ ಇನ್ನು ಮೂರು ದಿನದಲ್ಲಿ ವಿದ್ಯುತ್ ಸರಿಯಾಗಿ ಸರಬರಾಜು ಮಾಡದಿದ್ದರೆ ವಿದ್ಯುತ್ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದೆಂದು ರೈತರು ಎಚ್ಚರಿಕೆ ನೀಡಿದರು.

ಶಾಸಕರ ಮಾತಿಗೂ ಅಧಿಕಾರಿಗಳು ಡೋಂಟ್ ಕೇರ್: ಮುರಗುಂಡಿ ವಿದ್ಯುತ್ ವಿತರಣಾ ಸಹಾಯಕ ನಿರ್ದೇಶಕ ಆರ್ ಮಕಾಣಿ, ಶಾಸಕರ ಮಾತಿಗೆ ಡೋಂಟ್​ ಕೇರ್​ ಎನ್ನುವ ರೀತಿಯಲ್ಲಿ ಮಾತನಾಡಿದ್ದು, ಜನಪ್ರತಿನಿಧಿಗಳ ಮಾತುಗಳನ್ನು ಉಭಯ ತಾಲೂಕಿನಲ್ಲಿ ಅಧಿಕಾರಿಗಳು ಪಾಲಿಸುತ್ತಿಲ್ಲ ಎಂಬ ಮಾತುಗಳು ರೈತರಿಂದ ಕೇಳಿಬಂದವು.

ಇದನ್ನೂ ಓದಿ: ವಿಧಾನಸೌಧದ ಗೋಡೆಗಳು ಲಂಚ ಲಂಚ ಎಂದು ಕೂಗುತ್ತಿವೆ: ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.