ಬೆಳಗಾವಿ: ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ದೂದ್ ಸಾಗರ ಜಲಪಾತ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ್ ಅಂಗಡಿ ದೂದ್ ಸಾಗರ ಜಲಪಾತ ಪರಿಶೀಲಿಸಿ ಬಳಿಕ ಸಾರ್ವಜನಿಕರಿಗೆ ಮುಕ್ತಗೊಳಿಸಿದರು. ಕಳೆದ ಹಲವು ತಿಂಗಳಿನಿಂದ ದೂದ್ ಸಾಗರ ಜಲಪಾತ ವೀಕ್ಷಣೆಗೆ ಅವಕಾಶ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಪುನಾರಂಭಿಸಲಾಗಿದೆ.
ವಾಸ್ಕೋದಿಂದ ಬೆಳಗಾವಿವರೆಗೆ ಚಲಿಸುವ ರೈಲಿನಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಸುರೇಶ್ ಅಂಗಡಿ ಅವರು ದೂದ್ಸಾಗರ ರೈಲು ನಿಲ್ದಾಣದಲ್ಲಿ ವಿಶೇಷ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ್ರು. ಬೆಳಗಾವಿ-ವಾಸ್ಕೋ ಮಾರ್ಗ ಮಧ್ಯೆ ವಾರದಲ್ಲಿ 2 ದಿನ ಈ ರೈಲು ಸಂಚರಿಸಲಿದೆ.
ಕೇಂದ್ರ ಸಚಿವ ಶ್ರೀಪಾದ ನಾಯಕ, ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್ ಸೇರಿದಂತೆ ರೈಲ್ವೆ ಇಲಾಖೆಯ ವಿವಿಧ ಅಧಿಕಾರಿಗಳು ಈ ವೇಳೆ ಹಾಜರಿದ್ದರು.