ಬೆಳಗಾವಿ: ಮಹಾರಾಷ್ಟ್ರದಲ್ಲಿ ಡೆಲ್ಟಾ ವೈರಸ್ ಹಾವಳಿ ಹೆಚ್ಚಾಗಿದ್ದು ಬೆಳಗಾವಿ ಗಡಿ ತುರಮರಿ ಚೆಕ್‌ಪೋಸ್ಟ್‌ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇದು ವಿವಾಹಕ್ಕಾಗಿ ಕರ್ನಾಟಕಕ್ಕೆ ಬರುತ್ತಿದ್ದ ಮಹಾರಾಷ್ಟ್ರದ ವರನಿಗೆ ತೊಂದರೆಯಾಗಿದೆ.
ಮಹಾರಾಷ್ಟ್ರದ ಹಳ್ಳಿಯೊಂದರ ಯುವಕನ ವಿವಾಹವು ಇಂದು ಖಾನಾಪುರದ ಯುವತಿ ಜೊತೆ ನಿಶ್ಚಯವಾಗಿದೆ. ಮದುವೆಗೆ ವರ, ವರನ ಸಂಬಂಧಿಕರು ತೆರಳುತ್ತಿದ್ದ ದಿಬ್ಬಣ ವಾಹನವನ್ನು ಪೊಲೀಸರು ತಡೆದು ಮದುವೆಯ ಅನುಮತಿ ಪತ್ರ, ಕೋವಿಡ್ ನೆಗೆಟಿವ್ ವರದಿ ಪರಿಶೀಲಿಸಿದರು. ಎರಡೂ ಪತ್ರಗಳಿದ್ದ ಕಾರಣ ದಿಬ್ಬಣ ವಾಹನಕ್ಕೆ ಇಲ್ಲಿನ ಸಿಬ್ಬಂದಿ ಪ್ರವೇಶ ನೀಡಿದರು. ಈ ಮಧ್ಯೆ ವರನ ಕುಟುಂಬಸ್ಥರು ಕೆಲಕಾಲ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡಿದರು.
ಕೋವಿಡ್ನ ಎರಡನೇ ಅಲೆಯಿಂದ ಹೊರ ಬಂದಿರುವ ಭಾರತಕ್ಕೆ ಇದೀಗ ಡೆಲ್ಟಾ ಪ್ಲಸ್ ಸಮಸ್ಯೆ ಎದುರಾಗಿದೆ. ದೇಶದ 10 ರಾಜ್ಯದ 200ಕ್ಕೂ ಅಧಿಕ ಜಿಲ್ಲೆಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ತಳಿ ಕಾಣಿಸಿಕೊಂಡಿದ್ದು, ಕೆಲವು ರಾಜ್ಯಗಳಲ್ಲಿ ಈಗಾಗಲೇ ಒಬ್ಬರು ಅಥವಾ ಇಬ್ಬರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.