ಬೆಳಗಾವಿ: ಬೀಮ್ಸ್ ನಲ್ಲಿ ಆಕ್ಸಿಜನ್ ಕಡಿಮೆ ಕೊಡುತ್ತಿರುವುದರಿಂದ 22 ವರ್ಷದ ನನ್ನ ಮಗಳಿಗೆ ತ್ರಾಸ್ ಆಗುತ್ತಿದೆ. ಹೀಗಾಗಿ ನನ್ನಂತ ಬಡವರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಿಕೊಡಿ ಎಂದು ಈರಪ್ಪ ಕಲ್ಲೂರು ಎಂಬಾತ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಬೈಲಹೊಂಗಲ ತಾಲೂಕಿನ ಸಾಣಿಕೋಪ್ಪ ಗ್ರಾಮದ ಈರಪ್ಪ ಮಾತನಾಡಿ, ನನ್ನ ಮಗಳಿಗೆ ಹೆರಿಗೆ ಆಗಿ ಈಗ ಹದಿನೈದು ದಿನಗಳು ಕಳೆದಿವೆ. ಹದಿಮೂರು ದಿನಗಳ ಕಾಲ ಮನೆಯಲ್ಲಿ ಆರೋಗ್ಯವಾಗಿಯೇ ಇದಿದ್ದ ಅವಳಿಗೆ ಕೋವಿಡ್ ಆಗಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೆವು.
ಅವರು ಐದು ದಿನ ಇಟ್ಟುಕೊಂಡು ಲಕ್ಷಾಂತರ ಬಿಲ್ ಮಾಡಿ ನಿನ್ನೆ ರಾತ್ರಿ ಒಂದೂವರೆ ಗಂಟೆಗೆ ಆಕ್ಸಿಜನ್ ಖಾಲಿ ಆಗಿದೆ. ನೀವು ನಿಮ್ಮ ಮಗಳನ್ನು ಕರೆದುಕೊಂಡು ಸರ್ಕಾರಿ ಜಿಲ್ಲಾಸ್ಪತ್ರೆಗೆ ಹೋಗಿ ಅಂದರು. ಇದೀಗ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದೇವೆ.
ಆದರೆ, ಇಲ್ಲಿಯೂ ಆಕ್ಸಿಜನ್ ಕೊರತೆ ಇದೆ ನನ್ನ ಮಗಳಿಗೆ ಈಗ 22 ವರ್ಷ ಹೀಗಾಗಿ ನನ್ನಂತ ಬಡವರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಿಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ನನ್ನ ಮಗಳ ಆರೋಗ್ಯ ಸದ್ಯಕ್ಕೆ ಚೆನ್ನಾಗಿದೆ. ಆದರೆ, ಆಕ್ಸಿಜನ್ ಕಡಿಮೆ ಕೊಡುತ್ತಿದ್ದಾರೆ. ಹದಿನಾರು ದಿನದ ಗಂಡು ಮಗು ನನ್ನ ಹೆಂಡತಿ ಸಹೋದರಿ ಚಿಕ್ಕಬಾಗೇವಾಡಿಯಲ್ಲಿ ಇದ್ದರೆ, ಎರಡು ವರ್ಷದ ಹೆಣ್ಣು ಮಗಳು ರಾಮದುರ್ಗದಲ್ಲಿ ಇದ್ದಾಳೆ. ಅವಳ ತಾಯಿ ಬೆಳಗಾವಿ ಆಸ್ಪತ್ರೆಯಲ್ಲಿ ಇದ್ದಾಳೆ. ಹೀಗಾಗಿ ಮಕ್ಕಳೊಂದು ಕಡೆ, ತಾಯಿಯೊಂದು ಕಡೆಗೆ ಇರೋದರಿಂದ ಸದ್ಯ ಜನಿಸಿದ ಮಗುವಿಗೆ ಆಡಿನ ಹಾಲು, ಕುರಿ ಹಾಲು ಕೊಡುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.