ಬೆಳಗಾವಿ : ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದ ಶಬರಿ ಕೊಳದಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾದ ಘಟನೆ ಇಂದು ನಡೆದಿದೆ.
ಸುರೇಬಾನ ಗ್ರಾಮದ ಯುವಕರಾದ ವಿನಾಯಕ ಶಿವಾನಂದ ಶಿರೂರ (20) ಹರ್ಷ ಅಪ್ಪನ್ನವರ್ (20) ಸಾವನ್ನಪ್ಪಿರುವ ಯುವಕರು. ಸುರೇಬಾನ ಗ್ರಾಮದಲ್ಲಿರುವ ಶಬರಿ ಕೊಳ್ಳದಲ್ಲಿ ಈಜಲು ತೆರಳಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.